ಮೇಷ: ಐಟಿ ಉದ್ಯೋಗದಲ್ಲಿ ಅತಂತ್ರ ಸ್ಥಿತಿ ಕಾಡಬಹುದು. ಕೋರ್ಟ್ ಕಚೇರಿ ವ್ಯವಹಾರದಲ್ಲಿ ಜಯ. ಮನೆ ಬದಲಾಯಿಸುವ ಸಾಧ್ಯತೆ. ಶುಭಸಂಖ್ಯೆ:1
ವೃಷಭ: ವಿವಾಹದ ನಿರೀಕ್ಷೆಯಲ್ಲಿ ಇರುವವರಿಗೆ ಶುಭ ಸುದ್ದಿ. ಮಕ್ಕಳ ಪ್ರಗತಿಯಿಂದ ಸಂತಸ. ದ್ವಿಚಕ್ರ ವಾಹನ ದೊರೆಯುವ ಯೋಗ. ಶುಭಸಂಖ್ಯೆ: 4
ಮಿಥುನ: ಪುಣ್ಯಕ್ಷೇತ್ರಗಳ ತೀರ್ಥಯಾತ್ರೆಗೆ ಅವಕಾಶ. ಶತ್ರುಗಳಿಂದಾಗಿ ಪದವಿ ಪ್ರಾಪ್ತಿಗೆ ತಡೆ. ಆಸ್ತಿ ಮಾರಾಟಕ್ಕೆ ಸಹೋದರರಿಂದ ಸಹಕಾರ. ಶುಭಸಂಖ್ಯೆ:2
ಕಟಕ: ಅಮೂಲ್ಯವಾದ ವಸ್ತುಗಳ ಮಾರಾಟದಲ್ಲಿ ಲಾಭ. ಸಂಗಾತಿಯ ಅನಾರೋಗ್ಯ ಸಮಸ್ಯೆ ನಿವಾರಣೆ ಆಗಲಿದೆ. ವೃಥಾ ತಿರುಗಾಟ. ಶುಭಸಂಖ್ಯೆ:3
ಸಿಂಹ: ಹಣಕಾಸಿನ ವ್ಯವಹಾರ ಉತ್ತಮ ದಿನ. ಕುಟುಂಬದಲ್ಲಿ ಅನಿರೀಕ್ಷಿತ ಘಟನೆ ನಡೆಯಲಿದೆ. ದೂರದ ಸಂಬಂಧಿಗಳಿಂದ ಸಹಾಯ. ಶುಭಸಂಖ್ಯೆ:7
ಕನ್ಯಾ: ಪತ್ನಿಗೆ ಉದ್ಯೋಗ ದೊರೆಯಲಿದೆ. ಪ್ರಯಾಣದಿಂದ ಆರೋಗ್ಯದಲ್ಲಿ ಏರುಪೇರು. ಸಣ್ಣಪುಟ್ಟ ಶಾರೀರಿಕ ತೊಂದರೆ ಸಾಧ್ಯತೆ. ಶುಭಸಂಖ್ಯೆ: 7
ತುಲಾ: ಹೃದಯ ಸಂಬಂಧಿ ಅನಾರೋಗ್ಯದಿಂದ ಚೇತರಿಕೆ. ಹಿತ ಶತ್ರುಗಳಿಂದ ತೊಂದರೆ. ಯುವಕರಿಗೆ ವಿಶೇಷ ಅವಕಾಶ ಬರಲಿದೆ. ಶುಭಸಂಖ್ಯೆ: 8
ವೃಶ್ಚಿಕ: ತಲೆನೋವಿನಿಂದ ಮುಕ್ತಿ. ಪ್ರಯಾಣದಿಂದ ಪ್ರಭಾವಿಗಳ ಸಂಪರ್ಕ. ಮಕ್ಕಳು ದುಷ್ಟ ಸಹವಾಸದಿಂದ ದಾರಿ ತಪ್ಪುವ ಭೀತಿ. ಶುಭಸಂಖ್ಯೆ:2
ಧನಸ್ಸು: ಕೋರ್ಟ್ ಕೇಸುಗಳಲ್ಲಿ ಯಶಸ್ಸು. ದೃಢ ನಿರ್ಧಾರ ಕೈಗೊಳ್ಳಲು ಗೊಂದಲ. ಉದ್ಯೋಗಸ್ಥ ಮಹಿಳೆಯರಿಗೆ ದುಡುಕಿನಿಂದ ಸಮಸ್ಯೆ. ಶುಭಸಂಖ್ಯೆ: 2
ಮಕರ: ಪಿತ್ರಾರ್ಜಿತ ಆಸ್ತಿ ದೊರೆಯಲಿದೆ. ಭೂಮಿಯ ವ್ಯವಹಾರದಲ್ಲಿ ಲಾಭ ಬರುವುದು. ಪ್ರೇಮಿಗಳಿಗೆ ಇದು ಶುಭದಾಯಕ ದಿನ. ಶುಭಸಂಖ್ಯೆ:9
ಕುಂಭ: ರಾಜಕಾರಣಿಗಳಿಗೆ ಮನ್ನಣೆ ಸಿಗಲಿದೆ. ವಿವಾಹ ಸಂಬಂಧಿತ ಕಾರ್ಯದಲ್ಲಿ ಯಶ. ಸ್ಥಗಿತಗೊಂಡ ಕಾರ್ಯಕ್ಕೆ ಮತ್ತೆ ಚಾಲನೆ. ಶುಭಸಂಖ್ಯೆ:4
ಮೀನ: ಆಭರಣ ಖರೀದಿ ನಿರ್ಧಾರ. ಬಂಧುಗಳ ಆಗಮನದಿಂದ ಸಂತಸ. ಇಂದು ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ. ಶುಭಸಂಖ್ಯೆ:6