Nitya Bhavishya 
ದಿನ ಭವಿಷ್ಯ

ನಿತ್ಯಭವಿಷ್ಯ; ಈ ರಾಶಿಯವರಿಗಿಂದು ಕುಟುಂಬ ಸಮೇತ ಪುಣ್ಯಕ್ಷೇತ್ರಕ್ಕೆ ಪ್ರವಾಸ ಹೋಗುವ ಯೋಗ

ಮೇಷ: ನಿರುದ್ಯೋಗಿಗಳಿಗೆ ಹೊಸ ಅವಕಾಶ ತೆರೆದುಕೊಳ್ಳಲಿದೆ. ಕುಟುಂಬದಲ್ಲಿ ವಿವಾಹದ ಸಂಭ್ರಮ. ಗೃಹ ನಿರ್ಮಾಣಕ್ಕೆ ಚಾಲನೆ. ಶುಭಸಂಖ್ಯೆ: 9
ವೃಷಭ: ತಂದೆಯ ಆರೋಗ್ಯದಲ್ಲಿ ಸುಧಾರಣೆ. ಸಾಲ ತೀರಿಸಲು ಮಿತ್ರರಿಂದ ಸಹಾಯ. ಕೊಟ್ಟ ಜವಾಬ್ದಾರಿ ಯಶಸ್ವಿಯಾಗಿ ನಿರ್ವಹಿಸುವಿರಿ. ಶುಭಸಂಖ್ಯೆ: 8
ಮಿಥುನ: ಸರ್ಕಾರಿ ಸಂಬಂಧಿತ ಮುಖ್ಯ ಅಡಚಣೆ ನಿವಾರಣೆ. ದಿನನಿತ್ಯದ ವ್ಯವಹಾರಗಳಲ್ಲಿ ನಿರಾಸಕ್ತಿ. ಮಾತೃ ಮೂಲವಾದ ಆಸ್ತಿ ಸಿಗಲಿದೆ. ಶುಭಸಂಖ್ಯೆ: 3
ಕಟಕ: ಅಡಿಕೆ, ಭತ್ತ ಬೇಸಾಯಗಾರರಿಗೆ ಶುಭದಿನ. ಯಕ್ಷಗಾನ, ನಾಟ್ಯ ಕಲಾವಿದರಿಗೆ ವಿದೇಶ ಪ್ರವಾಸ. ದಿನಸಿ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 1
ಸಿಂಹ: ಆಸ್ತಿ ವಿವಾದ ಕೋರ್ಟ್ ಮೆಟ್ಟಿಲೇರಲಿದೆ. ಆರಕ್ಷಕ ಕೆಲಸದ ನಿರೀಕ್ಷೆಯಲ್ಲಿರುವವರಿಗೆ ಯಶ. ಸಹೋದ್ಯೋಗಿಗಳಿಂದ ಸಹಾಯ. ಶುಭಸಂಖ್ಯೆ: 8
ಕನ್ಯಾ: ಸರಕು ಸಾಗಣೆ ವ್ಯವಹಾರದಲ್ಲಿ ಲಾಭ ಹೆಚ್ಚಳ. ಕಾರ್ಮಿಕ ಮುಖಂಡರಿಗೆ ಗೌರವ. ಕುಲದೇವರ ದೇವಾಲಯ ನಿರ್ಮಾಣ ಶುರು. ಶುಭಸಂಖ್ಯೆ: 3
ತುಲಾ: ಇವೆಂಟ್ ಮ್ಯಾನೇಜ್‌ಮೆಂಟ್ ವ್ಯವಹಾರದಲ್ಲಿ ಲಾಭ. ಹೊಸ ಪ್ರಾಜೆಕ್ಟ್ ಸಿಗಲಿದೆ. ಆಟೋಮೊಬೈಲ್ಸ್ ವಸ್ತುವಿಗೆ ಹೆಚ್ಚು ಬೇಡಿಕೆ. ಶುಭಸಂಖ್ಯೆ: 2
ವೃಶ್ಚಿಕ: ಪಂಚಮ ಶನಿಯ ಪ್ರಭಾವದಿಂದ ಕೆಲಸ ವಿಳಂಬವಾದರೂ ಕಾರ್ಯಸಿದ್ಧಿಯಾಗಲಿದೆ. ಉನ್ನತ ಹುದ್ದೆಯ ಕನಸು ಈಡೇರಿಕೆ. ಶುಭಸಂಖ್ಯೆ: 9
ಧನುಸ್ಸು: ಬಹುದಿನಗಳ ನಂತರ ಆತ್ಮೀಯರ ಭೇಟಿ. ವಿದೇಶದ ಸಂಬಂಧ ಕೂಡಿ ಬರಲಿದೆ. ಸಾವಯವ ತರಕಾರಿ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 1
ಮಕರ: ಕುಟುಂಬ ಸಮೇತ ಪುಣ್ಯಕ್ಷೇತ್ರಕ್ಕೆ ಪ್ರವಾಸ. ಅಂಚೆ ಉದ್ಯೋಗಿಗಳಿಗೆ ವರ್ಗ. ಅಥ್ಲೆಟಿಕ್ ಕ್ರೀಡಾಪಟುಗಳಿಗೆ ಸರ್ಕಾರದಿಂದ ಪ್ರಶಸ್ತಿ. ಶುಭಸಂಖ್ಯೆ: 5
ಕುಂಭ: ಸರ್ಕಾರಿ ಕ್ಷೇತ್ರದಲ್ಲಿ ಹೆಸರು ಗಳಿಸುವಿರಿ. ಕಿರುಚಿತ್ರ ನಿರ್ಮಾಣದಲ್ಲಿ ಪ್ರಗತಿ. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒತ್ತಡ ಹೆಚ್ಚಲಿದೆ. ಶುಭಸಂಖ್ಯೆ: 7
ಮೀನ: ಗೃಹೋಪಯೋಗಿ ವಸ್ತುಗಳ ಖರೀದಿಗೆ ವೆಚ್ಚ. ಕಚೇರಿ ಬದಲಾವಣೆಗೆ ನಿರ್ಧಾರ. ಜೀವನದ ಬಹುದಿನಗಳ ಆಸೆ ಈಡೇರಲಿದೆ. ಶುಭಸಂಖ್ಯೆ: 4