Nitya Bhavishya 
ದಿನ ಭವಿಷ್ಯ

ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ

ಮಣಿಕಂಠ ಪಾ ಹಿರೇಮಠ
ಮೇಷ: ಮಾಡುವ ಕೆಲಸ ಬದ್ಧತೆಯಿಂದ ಮಾಡಿ, ಜಯ ನಿಮ್ಮದಾಗಲಿದೆ. ಔಷಧ ಮಾರಾಟ ಪ್ರಮಾಣ ಕುಸಿತ. ದೂರ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ 9.
ವೃಷಭ: ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ. ಕುಟುಂಬದ ಆಸ್ತಿ ವಿವಾದ ಪರಿಹಾರ. ಸ್ರ್ತಿಯರಿಗೆ ತಾಂತ್ರಿಕ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ 5.
ಮಿಥುನ: ಪ್ರಭಾವಿ ವ್ಯಕ್ತಿಗಳು ಸಂಪರ್ಕಕ್ಕೆ ಬರುವ ಸಾಧ್ಯತೆ. ಕೋರ್ಟ್​ ವ್ಯವಹಾರಗಳಲ್ಲಿ ಹೊಸ ಪರಿಚಯಗಳು ಉಪಯೋಗಕ್ಕೆ ಬರುತ್ತವೆ. ಶುಭಸಂಖ್ಯೆ 2.
ಕಟಕ: ಕಚೇರಿಯಲ್ಲಿ ಕೆಲಸದ ಒತ್ತಡ ಹೆಚ್ಚಳ. ಸ್ವಯಂ ಉದ್ಯೋಗದ ಮೂಲಕ ಹಣ ಗಳಿಸುವಿರಿ. ವೈಮಾನಿಕ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ 3.
ಸಿಂಹ: ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳಿಂದ ಬೆಂಬಲ ಸಿಗುತ್ತದೆ. ನಾಯಕತ್ವ ಗುಣಗಳು ರಾಜಕೀಯ ಪ್ರಗತಿಗೆ ಕಾರಣವಾಗಲಿವೆ. ಶುಭಸಂಖ್ಯೆ 4.
ಕನ್ಯಾ: ಅಧ್ಯಯನದಲ್ಲಿ ಶ್ರದ್ಧೆ ಇದ್ದರೆ ಯಶಸ್ಸು. ಸಂಗಾತಿಯ ಆರೋಗ್ಯದ ಕಡೆ ಗಮನ ಇರಲಿ. ಸರಕು ಸಾಗಾಣಿಕೆ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ 1.
ತುಲಾ: ಸಂಬಂಧಗಳಲ್ಲಿ ಇದ್ದ ಬಿರುಕು ಬಗೆಹರಿಯಲಿದೆ. ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗುತ್ತವೆ. ಕಿರುತರೆ ನಟರಿಗೆ ಧನಲಾಭ. ಶುಭಸಂಖ್ಯೆ 2.
ವೃಶ್ಚಿಕ: ಕೆಲಸದಲ್ಲಿ ಜಯ. ಹಣಕಾಸಿನ ವಿಚಾರದಲ್ಲಿ ದುಡುಕಿನ ನಿರ್ಧಾರ ಬೇಡ. ಸಿದ್ಧ ಉಡುಪು ಕಾರ್ಖಾನೆ ಮಾಲೀಕರಿಗೆ ಕೆಲಸದ ಒತ್ತಡ. ಶುಭಸಂಖ್ಯೆ 7.
ಧನಸ್ಸು: ಸಾಲಗಾರರ ಕಿರಿಕಿರಿಯಿಂದ ಮುಕ್ತಿ. ರೇಷ್ಮೆ ಸಂಜೆ ಮಾಲೀಕರಿಗೆ ಲಾಭ. ನೃತ್ಯ ಮತ್ತು ಯಕ್ಷಗಾನ ಕಲಾವಿದರಿಗೆ ವಿಶೇಷ ವೇದಿಕೆ ಲಭ್ಯ. ಶುಭಸಂಖ್ಯೆ 2.
ಮಕರ: ಹೊಸ ಕೆಲಸದಲ್ಲಿ ಹೊಣೆಗಾರಿಕೆ ಹೆಚ್ಚಲಿದೆ. ಕುಸುರಿ ಕೆಲಸದ ವಸ್ತುಗಳ ಮಾರಾಟದಲ್ಲಿ ಲಾಭ. ಧಾರ್ಮಿಕ ಸಾಧನೆಯತ್ತ ಮನಸ್ಸು. ಶುಭಸಂಖ್ಯೆ 5.
ಕುಂಭ: ಹೊಸ ಸಂಶೋಧನೆಗಳಿಂದ ಹೆಸರು ಗಳಿಸುವಿರಿ. ಸ್ನೇಹಿತರಿಂದಾಗಿ ಆಪತ್ತಿನಿಂದ ಪಾರಾಗುವಿರಿ. ಬ್ಯಾಂಕ್​ ಉದ್ಯೋಗಿಗಳಿಗೆ ವರ್ಗಾವಣೆ. ಶುಭಸಂಖ್ಯೆ 3.
ಮೀನ: ಕೇಂದ್ರ ಸರ್ಕಾರಿ ನೌಕರರಿಗೆ ಬಡ್ತಿ ಸಾಧ್ಯತೆ. ಡೇರಿ ಉತ್ಪನ್ನಗಳ ಮಾರಾಟದಲ್ಲಿ ಲಾಭ. ಹೊಸ ಕೃಷಿಯಿಂದ ಲಾಭ ಗಳಿಕೆ. ಶುಭಸಂಖ್ಯೆ 2.