ಮೇಷ: ಸಾರ್ವಜನಿಕವಾಗಿ ಮನ್ನಣೆ ಸಿಗಲಿದೆ, ವಸ್ತ್ರ ವ್ಯಾಪಾರಿಗಳಿಗೆ ಆದಾಯ ವೃದ್ಧಿ, ಲೇವಾದೇವಿಗಾರರು ಮೋಸ ಹೋಗುವ ಸಾಧ್ಯತೆ. ಶುಭಸಂಖ್ಯೆ 9
ವೃಷಭ: ಹೊಸ ವ್ಯಕ್ತಿಗಳ ಪರಿಚಯ ಪ್ರಯೋಜನಕ್ಕೆ ಬರಲಿದೆ. ಕಲಾವಿದರಿಗೆ ದೂರ ಪ್ರಯಾಣ ಯೋಗವಿದೆ. ಅನಿರೀಕ್ಷಿತ ಧನಾಗಮನ. ಶುಭಸಂಖ್ಯೆ 6
ಮಿಥುನ: ಸಾಮಾಜಿಕ ಸೇವೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಿ. ಕುಟುಂಬದಲ್ಲಿ ಸಂತೋಷದ ವಾತಾವರಣ. ಆಸ್ತಿ ವಿವಾದದಲ್ಲಿ ಜಯ. ಶುಭಸಂಖ್ಯೆ 4
ಕಟಕ: ಗೃಹನಿರ್ಮಾಣದಲ್ಲಿ ಮಂದಗತಿ, ಸಾಲ ತೀರಿಸಲು ಮಿತ್ರರಿಂದ ಸಹಕಾರ, ದೂರದಲ್ಲಿರುವ ಮಕ್ಕಳಿಂದ ಶುಭ ವಾರ್ತೆ. ಶುಭಸಂಖ್ಯೆ 1
ಸಿಂಹ: ಬಂಧುಗಳೊಂದಿಗೆ ಭಿನ್ನಾಭಿಪ್ರಾಯ ದೂರ, ಔಷಧ ವ್ಯಾಪಾರದಲ್ಲಿ ಆದಾಯ, ತಾಂತ್ರಿಕ ಪದವೀಧರರಿಗೆ ಶುಭದಿನ. ಶುಭಸಂಖ್ಯೆ 1
ಕನ್ಯಾ: ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ, ಮಹಿಳಾ ಪ್ರತಿಭೆಗಳಿಗೆ ಯಶಸ್ಸು, ಕೈಗಾರಿಕೋದ್ಯಮಿಗಳಿಗೆ ಸನ್ಮಾನ. ಶುಭಸಂಖ್ಯೆ 4
ತುಲಾ: ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ. ಪ್ರಮುಖ ನಿರ್ಧಾರಗಳ ವೇಳೆ ಸಹನೆಯಿಂದ ವರ್ತಿಸಿ. ರೇಷ್ಮೆ ವಸ್ತ್ರ ವ್ಯಾಪಾರಸ್ಥರಿಗೆ ಪ್ರಗತಿ. ಶುಭಸಂಖ್ಯೆ 9
ವೃಶ್ಚಿಕ: ಬಾಳೆ ಮತ್ತು ಏಲಕ್ಕಿ ಕೃಷಿಕರಿಗೆ ಲಾಭ, ಹಣಕಾಸಿನ ವ್ಯವಹಾರದಲ್ಲಿ ಉತ್ತಮ ಬೆಳವಣಿಗೆ. ಕೋರ್ಟ್ ವ್ಯಾಜ್ಯ ಇತ್ಯರ್ಥ ವಿಳಂಬ. ಶುಭಸಂಖ್ಯೆ 6
ಧನಸ್ಸು: ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಭಾಗಿ, ಉದ್ಯೋಗಸ್ಥ ಸ್ತ್ರೀಯರಿಗೆ ವರ್ಗಾವಣೆ, ವಾಣಿಜ್ಯ& ತಾಂತ್ರಿಕ ವಿದ್ಯಾರ್ಥಿಗಳ ಆಸೆ ಈಡೇರಲಿದೆ. ಶುಭಸಂಖ್ಯೆ 1
ಮಕರ: ಸಾಮಾಜಿಕ ಕಾರ್ಯಗಳಿಂದ ಕೀರ್ತಿ ಗಳಿಸುವಿರಿ. ವಕೀಲರಿಗೆ ವೃತ್ತಿಯಲ್ಲಿ ಮುನ್ನಡೆ ಯೋಗ. ಐಟಿ ಉದ್ಯೋಗ ಪ್ರಾಪ್ತಿ ಸಾಧ್ಯತೆ. ಶುಭಸಂಖ್ಯೆ 7
ಕುಂಭ: ಕಮಿಷನ್ ವ್ಯವಹಾರದಲ್ಲಿ ಹಣ ಗಳಿಕೆ. ಮನರಂಜನಾ ಕಲಾವಿದರಿಗೆ ಬೇಡಿಕೆ, ಕೃಷಿಯಲ್ಲಿ ಆದಾಯ, ಸಾಲ ಮಾಡುವ ಸಂದರ್ಭ. ಶುಭಸಂಖ್ಯೆ 5
ಮೀನ: ವಿಜ್ಞಾನ ಸಂಶೋಧಕರಿಗೆ ಯಶಸ್ಸು; ಶಿಲ್ಪಿಗಳಿಗೆ, ಕುಸುರಿ ಕೆಲಸದವರಿಗೆ ಶ್ರಮಕ್ಕೆ ತಕ್ಕ ಫಲ; ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆ. ಶುಭಸಂಖ್ಯೆ 8