ಮೇಷ: ಟಿವಿ, ಗೃಹೋಪಯೋಗಿ ವ್ಯಾಪಾರದಲ್ಲಿ ಅನುಕೂಲ. ಬಂಧುಗಳಿಂದ ಆರ್ಥಿಕ ಸಹಾಯ. ಪತಿಯ ಆರೋಗ್ಯದಲ್ಲಿ ಸುಧಾರಣೆ. ಶುಭಸಂಖ್ಯೆ: 9
ವೃಷಭ: ನ್ಯಾಯಾಲಯದ ಕೆಲಸ ಕಾರ್ಯದಲ್ಲಿ ಹೊಸ ತಿರುವು. ಸರ್ಕಾರಿ ಹರಾಜಿನಲ್ಲಿ ಗೆಲುವು. ಅನಿರೀಕ್ಷಿತ ಪದವಿ ಪ್ರಾಪ್ತಿಯಾಗುವುದು. ಶುಭಸಂಖ್ಯೆ: 9
ಮಿಥುನ: ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ. ಗುಪ್ತ ವಿಷಯಗಳಿಂದ ಲಾಭವಾಗಲಿದೆ. ಮಕ್ಕಳ ಸಾಧನೆಯಿಂದ ಮನೆಯಲ್ಲಿ ಸಂಭ್ರಮ. ಶುಭಸಂಖ್ಯೆ: 3
ಕಟಕ: ಗೃಹ ನಿರ್ಮಾಣದ ಬಹುದಿನಗಳ ಆಸೆ ಈಡೇರಲಿದೆ. ವಿಶೇಷ ವ್ಯಕ್ತಿಯ ಭೇಟಿಯಾಗುವುದು. ಸ್ತ್ರೀಯರಿಂದ ಅನುಕೂಲವಾಗಲಿದೆ. ಶುಭಸಂಖ್ಯೆ: 9
ಸಿಂಹ: ಮಕ್ಕಳಿಗೋಸ್ಕರ ಖರ್ಚು. ಅನಿರೀಕ್ಷಿತ ಹಣದ ಪ್ರಾಪ್ತಿಯಿಂದ ಸಾಲ ತೀರಿಸುವಿರಿ. ಸಹೋದರಿಯ ಆರೋಗ್ಯದಲ್ಲಿ ಸುಧಾರಣೆ. ಶುಭಸಂಖ್ಯೆ: 3
ಕನ್ಯಾ: ಸೀರೆ ವ್ಯಾಪಾರದಲ್ಲಿ ಲಾಭ. ಆಕಸ್ಮಿಕ ದೂರ ಪ್ರಯಾಣ. ವಿದ್ಯಾರ್ಥಿಗಳಿಗೆ ನಿಮ್ಮ ಇಚ್ಛೆಯಂತೆ ಕಾಲೇಜಿನಲ್ಲಿ ಪ್ರವೇಶ ಸಿಗಲಿದೆ. ಶುಭಸಂಖ್ಯೆ: 2
ತುಲಾ: ಶಕ್ತಿ ಇಂಧನ ವ್ಯವಹಾರದಲ್ಲಿ ಅನುಕೂಲ. ಸ್ನೇಹಿತರೊಂದಿಗೆ ಸಂತೋಷಕೂಟದಲ್ಲಿ ಪಾಲ್ಗೊಳ್ಳುವಿರಿ. ನೆರೆಹೊರೆಯವರಿಂದ ಅನುಕೂಲ. ಶುಭಸಂಖ್ಯೆ: 6
ವೃಶ್ಚಿಕ: ಸಂಗಾತಿಯೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಅಧ್ಯಾತ್ಮದ ಚಿಂತನೆಯತ್ತ ಮನಸ್ಸು. ಕ್ರೀಡಾಪಟುಗಳಿಗೆ ಶುಭದಾಯಕ ದಿನ. ಶುಭಸಂಖ್ಯೆ: 7
ಧನಸ್ಸು: ಮಕ್ಕಳೊಡನೆ ದೂರಪ್ರವಾಸ ಹೋಗುವಿರಿ. ವೈದ್ಯರಿಗೆ ವಿದೇಶ ಪ್ರಯಾಣ ಸಾಧ್ಯತೆ. ಸ್ವಂತ ಉದ್ಯೋಗದ ಮಹಿಳೆಯರಿಗೆ ಪ್ರಗತಿ. ಶುಭಸಂಖ್ಯೆ: 3
ಮಕರ: ವಾಹನ ದುರಸ್ತಿಗೆ ಹೆಚ್ಚು ಖರ್ಚು. ಆಸೆ-ಆಕಾಂಕ್ಷೆಗಳ ಈಡೇರಿಕೆಗೆ ದುಂದು ವೆಚ್ಚ ಬೇಡ. ಪ್ರೇಮದ ವಿಷಯಗಳಲ್ಲಿ ಶುಭ ಸಮಾಚಾರ. ಶುಭಸಂಖ್ಯೆ: 4
ಕುಂಭ: ಆಸ್ತಿ ಖರೀದಿಗೆ ನಿರ್ಧಾರ. ಅಪರಿಚಿತರಿಂದ ಅನುಕೂಲ. ಬೃಹತ್ ವಾಹನಗಳ ಮಾಲೀಕರಿಗೆ ಲಾಭ. ಮಿತ್ರರಿಂದ ಭಾಗ್ಯೋದಯ. ಶುಭಸಂಖ್ಯೆ: 7
ಮೀನ: ಅನಿರೀಕ್ಷಿತ ಧನಾಗಮನ. ದುಷ್ಟ ಸ್ನೇಹಿತರ ಸಹವಾಸ ಬೇಡ. ನೆರೆಹೊರೆಯವರಿಂದ ಸಹಾಯ. ಬ್ಯಾಂಕ್ ಉದ್ಯೋಗಿಗಳಿಗೆ ಬಡ್ತಿ. ಶುಭಸಂಖ್ಯೆ: 9