ಮೇಷ: ಸಂಸ್ಥೆಯ ಸಲಹೆಗಾರ ಕ್ಷೇತ್ರದವರಿಗೆ ಹೆಚ್ಚಿದ ಆದಾಯ. ಮಕ್ಕಳ ಸಮಸ್ಯೆಗೆ ಪರಿಹಾರ ಸಿಗಲಿದೆ. ದಿನದ ಅಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ: 3
ಷೃಷಭ: ಆದಾಯಕ್ಕಿಂತ ಖರ್ಚು ಹೆಚ್ಚುವುದು. ಸ್ನೇಹಿತರೊಂದಿಗೆ ಪುಣ್ಯ ಕ್ಷೇತ್ರಕ್ಕೆ ಪ್ರಯಾಣ. ಮೇಕಪ್ ವಸ್ತುಗಳ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 8
ಮಿಥುನ: ಅಧಿಕಾರಿಗಳನ್ನು ಓಲೈಸಿ ಕೆಲಸ ಮಾಡಿಸಿಕೊಳ್ಳುವಿರಿ. ಮಕ್ಕಳಿಗಾಗಿ ದೇವತಾ ಕಾರ್ಯ. ಸಂದರ್ಶನದಲ್ಲಿ ಯಶಸ್ವಿ ಆಗಲಿದ್ದೀರಿ. ಶುಭಸಂಖ್ಯೆ: 5
ಕಟಕ: ತಂದೆಯೊಂದಿಗೆ ಆಸ್ತಿ ವಿವಾದದ ಚರ್ಚೆ. ಉದ್ಯೋಗಸ್ಥ ಮಹಿಳೆಯರಿಗೆ ದೃಢನಿರ್ಧಾರದಿಂದ ಯಶಸ್ಸು. ಸಾಧನೆಯಿಂದ ಕೀರ್ತಿ. ಶುಭಸಂಖ್ಯೆ: 2
ಸಿಂಹ: ತಾಯಿಯ ಆರೋಗ್ಯದ ಬಗ್ಗೆ ಗಮನ ಹರಿಸಿ, ಕಚೇರಿಯ ಸಮಸ್ಯೆಗಳಿಂದ ತಾತ್ಕಾಲಿಕ ಮುಕ್ತಿ. ನಿರೀಕ್ಷೆಯಷ್ಟು ಹಣದ ಹರಿವು. ಶುಭಸಂಖ್ಯೆ: 1
ಕನ್ಯಾ: ತಾಂತ್ರಿಕ, ವಾಣಿಜ್ಯ ವಿದ್ಯಾರ್ಥಿಗಳಿಗೆ ಯಶಸ್ಸು. ಇಲಾಖೆಗಳಿಂದ ನಿಮ್ಮ ಕೃಷಿ ಕೆಲಸಕ್ಕೆ ಸಹಾಯ, ಕಬ್ಬಿಣದ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 5
ತುಲಾ: ವಾಹನಗಳ ಬಿಡಿಭಾಗ ಮಾರಾಟಗಾರರಿಗೆ ಜಾಸ್ತಿ ಲಾಭ. ಲಲಿತ ಕಲಾ ವಿದ್ಯಾರ್ಥಿಗಳಿಗೆ ವಿದೇಶ ಪ್ರಯಾಣ. ಕೆಲಸದಲ್ಲಿ ಗೆಲುವು. ಶುಭಸಂಖ್ಯೆ: 6
ವೃಶ್ಚಿಕ: ಭೂಮಿ, ಸ್ಥಿರಾಸ್ತಿ ವ್ಯವಹಾರದಲ್ಲಿ ಕಡಿಮೆ ಆದಾಯ. ಸಾಲ ನೀಡುವ ಮುನ್ನ ಯೋಚಿಸಿ. ಕೋರ್ಟ್ ವಿಚಾರಗಳಲ್ಲಿ ಹಿನ್ನಡೆ. ಶುಭಸಂಖ್ಯೆ: 4
ಧನಸ್ಸು: ಕೈಮಗ್ಗದಲ್ಲಿ ಆದಾಯ. ನಿರೀಕ್ಷೆಯಂತೆ ವರ್ಗಾವಣೆ ಸಂಭವ. ಸಮಾಜ ಸೇವೆಯಲ್ಲಿ ಆಸಕ್ತಿ. ರಾಜಕಾರಣಿಗಳಿಗೆ ಗೊಂದಲ. ಶುಭಸಂಖ್ಯೆ: 1
ಮಕರ: ಉದ್ಯೋಗ ಸ್ಥಳದಲ್ಲಿ ಸಾಲ ಮಾಡಬೇಕಾಗಬಹುದು. ಹಿರಿಯರಿಂದ ನೆರವು ಸಿಗಲಿದೆ. ವಾಹನ ದುರಸ್ತಿಗೆ ಅಧಿಕ ಖರ್ಚು. ಶುಭಸಂಖ್ಯೆ: 3
ಕುಂಭ: ಅಹಂಭಾವದಿಂದ ದಾಂಪತ್ಯದಲ್ಲಿ ತೊಂದರೆ. ಉಳಿತಾಯದ ವಿಚಾರದಲ್ಲಿ ದುಡುಕಿನ ನಿರ್ಧಾರ ಬೇಡ. ವಿದ್ಯಾರ್ಥಿಗಳಿಗೆ ಹಿನ್ನಡೆ. ಶುಭಸಂಖ್ಯೆ: 3
ಮೀನ: ಹೊಸದಾಗಿ ಪ್ರಾರಂಭಿಸಿದ ಸ್ವಂತ ವ್ಯಾಪಾರದಲ್ಲಿ ಲಾಭ. ಅಭಿವೃದ್ಧಿ ಕಾರ್ಯಗಳಲ್ಲಿ ಹಿನ್ನಡೆ. ಶುಭ ಕಾರ್ಯದಲ್ಲಿ ಪಾಲ್ಗೊಳ್ಳುವಿರಿ. ಶುಭಸಂಖ್ಯೆ: 5