ಮೇಷ: ಮಕ್ಕಳ ಬಗ್ಗೆ ಕಾಳಜಿ ವಹಿಸಿ. ಪತಿ ಪತ್ನಿಯರಲ್ಲಿ ಸಂತೋಷ. ಕೃಷಿಭೂಮಿ ಖರೀದಿಗೆ ನಿರ್ಧಾರ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ:7
ವೃಷಭ: ಹೊಸ ಉದ್ಯೋಗದಲ್ಲಿ ಪ್ರಗತಿ ಕಾಣುವುದು. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲವಾಗಬಹುದು. ಸಾಲದಿಂದ ಮುಕ್ತಿ. ಶುಭಸಂಖ್ಯೆ: 2
ಮಿಥುನ: ಯತ್ನ ಕಾರ್ಯಗಳಲ್ಲಿ ಜಯ. ಸ್ತ್ರೀಯರಿಗೆ ಆಭರಣ ಪ್ರಾಪ್ತಿಯಾಗುವುದು. ಭೂಲಾಭ, ಬಂಧುಗಳ ಭೇಟಿ. ಪುಣ್ಯಕ್ಷೇತ್ರ ದರ್ಶನ. ಶುಭಸಂಖ್ಯೆ:2
ಕಟಕ: ವ್ಯವಹಾರ ಸ್ಥಳ ಬದಲಾವಣೆ. ತಾಂತ್ರಿಕ ವಿದ್ಯೆಗಳಲ್ಲಿ ಆಸಕ್ತಿ. ಸ್ನೇಹಿತರಿಗಾಗಿ ವಿಪರೀತ ಖರ್ಚು. ರಿಯಲ್ ಎಸ್ಟೇಟ್ನವರಿಗೆ ಲಾಭ. ಶುಭಸಂಖ್ಯೆ: 8
ಸಿಂಹ: ವ್ಯಾಪಾರ-ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭ. ಬಹಳ ವರ್ಷಗಳ ನಂತರ ವಿವಾಹ ಯೋಗ. ದೇವತಾ ಕಾರ್ಯಗಳಲ್ಲಿ ಭಾಗಿ. ಶುಭಸಂಖ್ಯೆ:4
ಕನ್ಯಾ: ವಾದಗಳಲ್ಲಿ ಜಯ. ಪ್ರಭಾವಿ ವ್ಯಕ್ತಿಗಳ ಭೇಟಿ. ಕೌಟುಂಬಿಕ ಮನಃಶಾಂತಿ. ಮಾಧ್ಯಮ ಕ್ಷೇತ್ರದವರಿಗೆ ಸಮಾಜದಲ್ಲಿ ಗೌರವ. ಶುಭಸಂಖ್ಯೆ:9
ತುಲಾ: ರಾಜಕೀಯ ಸಂಘಟಕರಿಗೆ ಪದವಿ ಪ್ರಾಪ್ತಿ. ಯಾರನ್ನೂ ಅತಿಯಾಗಿ ನಂಬಬೇಡಿ. ಸಗಟು ವ್ಯಾಪಾರದಲ್ಲಿ ಅಧಿಕ ಲಾಭವಿದೆ. ಶುಭಸಂಖ್ಯೆ:8
ವೃಶ್ಚಿಕ: ಕಚೇರಿಯಲ್ಲಿ ಸಹನೆಯಿಂದ ವರ್ತಿಸಿ. ಹಿತಶತ್ರುಗಳಿಂದ ಸಹಾಯ ಸಿಕ್ಕೀತು. ಸಾಂಪ್ರದಾಯಿಕ ಔಷಧ ವ್ಯಾಪಾರದಲ್ಲಿ ಲಾಭ.ಶುಭಸಂಖ್ಯೆ:3
ಧನಸ್ಸು: ರೇಷ್ಮೆ,ಕುರಿ ಸಾಕಾಣಿಕೆಯಲ್ಲಿ ಲಾಭ. ಎಷ್ಟೇ ಕಷ್ಟ ಬಂದರೂ ಮುನ್ನುಗ್ಗುವ ಚೈತನ್ಯ ಇರುವುದು. ದಾಂಪತ್ಯದಲ್ಲಿ ಅನ್ಯೋನ್ಯತೆ. ಶುಭಸಂಖ್ಯೆ:1
ಮಕರ: ಚಂಚಲ ಮನದಿಂದ ದೃಢ ನಿರ್ಧಾರ ಕೈಗೊಳ್ಳಲು ಗೊಂದಲ. ಸೌಂದರ್ಯ ವರ್ಧಕ ಮಾರಾಟದಲ್ಲಿ ಲಾಭ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ:3
ಕುಂಭ: ಧಾರ್ವಿುಕ ಗುರುಗಳ ಭೇಟಿ ಸಾಧ್ಯತೆ. ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿದೆ. ವೀಸಾ ಸಮಸ್ಯೆ ಪರಿಹಾರ, ವಿದೇಶ ಪ್ರಯಾಣ. ಶುಭಸಂಖ್ಯೆ: 9
ಮೀನ: ಸಾರ್ವಜನಿಕವಾಗಿ ತಾಳ್ಮೆ ಇರಲಿ. ಅಮೂಲ್ಯವಸ್ತು ಖರೀದಿ. ದಾಖಲೆ ನೋಂದಣಿಗೆ ಖರ್ಚು. ಆದಾಯ- ವ್ಯಯ ಸಮತೋಲನ. ಶುಭಸಂಖ್ಯೆ:6