ಮೇಷ: ಬಟ್ಟೆ ಮಳಿಗೆ ಮಾಲೀಕರಿಗೆ ಧನಲಾಭವಾಗುವುದು. ಆರೋಗ್ಯದಲ್ಲಿ ಸುಧಾರಣೆ. ವಿವಾದಾತ್ಮಕ ವಿಷಯಗಳಿಂದ ದೂರವಿರಿ. ಶುಭಸಂಖ್ಯೆ:1
ವೃಷಭ: ಅಪರಿಚಿತರಿಂದ ಅನಿರೀಕ್ಷಿತ ಸಹಾಯ ದೊರೆಯಲಿದೆ. ಕಚೇರಿಯಲ್ಲಿ ಹೆಚ್ಚಿದ ಜವಾಬ್ದಾರಿ. ತಂದೆಯ ಆಸ್ತಿ ಪ್ರಾಪ್ತಿಯಾಗಲಿದೆ. ಶುಭಸಂಖ್ಯೆ: 8
ಮೀಥುನ: ನ್ಯಾಯಾಲಯದ ಕೆಲಸ ಕಾರ್ಯಗಳಲ್ಲಿ ವಿಳಂಬವಾಗುವುದು. ಬಂಧುಗಳೊಂದಿಗೆ ಔತಣ ಕೂಟ. ಸಂತಸದಾಯಕ ದಿನ. ಶುಭಸಂಖ್ಯೆ:1
ಕಟಕ: ಪ್ರಮುಖ ಕೆಲಸದಲ್ಲಿ ಜಯ. ರಾಜಕಾರಣಿಗಳಿಗೆ ಸಾರ್ವಜನಿಕವಾಗಿ ಮನ್ನಣೆ. ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತ ಯಶಸ್ಸು. ಶುಭಸಂಖ್ಯೆ: 2
ಸಿಂಹ: ಸಿನಿಮಾ ಕ್ಷೇತ್ರದವರಿಗೆ ವಿದೇಶ ಪ್ರಯಾಣ ಯೋಗವಿದೆ. ಕ್ರೀಡಾ ಕ್ಷೇತ್ರದಲ್ಲಿ ಗೌರವ, ಮನ್ನಣೆ. ಆತ್ಮೀಯ ಸ್ನೇಹಿತರಿಂದ ಸಹಾಯ. ಶುಭಸಂಖ್ಯೆ: 9
ಕನ್ಯಾ: ಹೊಸ ಕೆಲಸದಿಂದ ಆದಾಯ ವೃದ್ಧಿಯಾಗಲಿದೆ. ಇತರರ ಮಾತಿಗೆ ಮರುಳಾಗದಿರಿ. ಹೊಸ ಕೆಲಸದಲ್ಲಿ ನೆಮ್ಮದಿ ಇರಲಿದೆ. ಶುಭಸಂಖ್ಯೆ: 4
ತುಲಾ: ದಾಂಪತ್ಯದಲ್ಲಿ ಉಲ್ಲಾಸದ ದಿನ. ಸಾರ್ವಜನಿಕವಾಗಿ ಸಹನೆಯಿಂದ ವರ್ತಿಸಿ. ಜೇನು ಮತ್ತು ರೇಷ್ಮೆ ಕೃಷಿಕರಿಗೆ ಕೆಲಸದಲ್ಲಿ ಹಿಂಜರಿಕೆ.ಶುಭಸಂಖ್ಯೆ: 2
ವೃಶ್ಚಿಕ: ಉದ್ಯೋಗದಲ್ಲಿ ಬಡ್ತಿ ಸಿಗುವ ಸೂಚನೆ. ಪ್ರಿಯ ಜನರ ಭೇಟಿ. ಶರೀರದಲ್ಲಿ ತಳಮಳ. ಭೂ ಲಾಭ. ಮಾತಿನ ಮೇಲೆ ನಿಗಾವಹಿಸಿ.ಶುಭಸಂಖ್ಯೆ: 1
ಧನಸ್ಸು: ಆರ್ಥಿಕ ಸಂಕಷ್ಟದಿಂದ ಹೊರಬರುವ ದಾರಿ ಕಾಣಲಿದೆ. ಸತ್ಕಾರ್ಯಾಸಕ್ತಿ. ಸಹೋದ್ಯೋಗಿಗಳಿಂದ ಉದ್ಯೋಗದಲ್ಲಿ ಸಹಾಯ. ಶುಭಸಂಖ್ಯೆ:9
ಮಕರ: ತೆಂಗು, ಬಾಳೆ ಕೃಷಿಯತ್ತ ಮನಸ್ಸು. ಮನೆ ನವೀಕರಣಕ್ಕೆ ಧನವ್ಯಯವಾಗುವುದು. ಸಂತೃಪ್ತ ಭೋಜನ. ಗುರು ಹಿರಿಯರ ದರ್ಶನ.ಶುಭಸಂಖ್ಯೆ: 1
ಕುಂಭ: ಸರ್ಕಾರದಿಂದ ಪ್ರಯೋಜನ ಪಡೆದುಕೊಳ್ಳುವಿರಿ. ಹಿರಿಯರಿಗೆ ಆಲಸ್ಯ ಮನೋಭಾವ. ಮಹಿಳೆಯರಿಂದ ಕಾರ್ಯ ಸಾಧನೆ. ಶುಭಸಂಖ್ಯೆ: 3
ಮೀನಾ: ಮಾತಿನಿಂದ ಸಂಪಾದನೆಯಾಗುವ ದಿನವಿದು. ವ್ಯಾಪಾರ ನಿಮಿತ್ತ ದೂರ ಪ್ರಯಾಣ ಮಾಡುವಿರಿ. ಆರೋಗ್ಯದತ್ತ ಗಮನ ಅಗತ್ಯ. ಶುಭಸಂಖ್ಯೆ: 1