ಮೇಷ: ಕೃಷಿಯಿಂದ ಹೆಚ್ಚು ಆದಾಯ. ಆತ್ಮವಿಶ್ವಾಸದಿಂದ ಮಾಡಿದ ಕೆಲಸ ಸಾರ್ಥಕ. ಆಸ್ತಿ ವಿಚಾರವನ್ನು ರಹಸ್ಯವಾಗಿಡಲು ಯತ್ನಿಸಿ. ಶುಭಸಂಖ್ಯೆ: 1
ವೃಷಭ: ನಾಯಕತ್ವದ ಸ್ಥಾನಮಾನ ಪಡೆಯುವಿರಿ. ಸಮಾಜ ಸೇವೆ ಮಾಡುವ ಅವಕಾಶ ದೊರೆಯಲಿದೆ, ಅನಿರೀಕ್ಷಿತ ಧನ ಲಾಭ ಯೋಗ. ಶುಭಸಂಖ್ಯೆ: 4
ಮಿಥುನ: ಜವಾಬ್ದಾರಿಗಳನ್ನು ಜಾಣ್ಮೆಯಿಂದ ನಿರ್ವಹಿಸುವಿರಿ. ಮುದ್ರಣಕಾರರಿಗೆ ಶ್ರಮಕ್ಕೆ ತಕ್ಕ ಪ್ರತಿಫಲ. ಮಕ್ಕಳತ್ತ ಹೆಚ್ಚು ಗಮನಹರಿಸಿ. ಶುಭಸಂಖ್ಯೆ:2
ಕಟಕ: ಸಾಹಿತ್ಯ ಸಂಗೀತಶಾಸ್ತ್ರಜ್ಞರಿಗೆ ಗೌರವ, ಸನ್ಮಾನ. ಸರ್ಕಾರಿ ನೌಕರರಿಗೆ ಕೆಲಸದ ಅತಿಯಾದ ಒತ್ತಡ. ಹಿತಶತ್ರುಗಳ ಕಾಟ ಅತಿರೇಕಕ್ಕೆ. ಶುಭಸಂಖ್ಯೆ: 9
ಸಿಂಹ: ಸಾಮಾಜಿಕ ಜನಪ್ರಿಯತೆ ಹೆಚ್ಚಾಗಲಿದೆ. ನಿರೀಕ್ಷಿತ ಬದಲಾವಣೆಗಳು ಕಂಡು ಬರುತ್ತವೆ. ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿ. ಶುಭಸಂಖ್ಯೆ: 5
ಕನ್ಯಾ: ಕೃಷಿಕರಿಗೆ ಮಾರುಕಟ್ಟೆಯ ವ್ಯಾಪಾರದಲ್ಲಿ ಲಾಭ. ದ್ರವರೂಪದ ಉತ್ಪನ್ನ ತಯಾರಕರಿಗೆ ಲಾಭ. ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆ. ಶುಭಸಂಖ್ಯೆ: 7
ತುಲಾ: ಕಾನೂನು ವಿದ್ಯಾರ್ಥಿಗಳಿಗೆ ಪ್ರಗತಿ. ಹೊಸ ಉದ್ಯಮ ಸ್ಥಾಪನೆಗೆ ನಿರ್ಧಾರ ಕೈಗೊಳ್ಳುವಿರಿ. ಕೌಟುಂಬಿಕ ಆಸ್ತಿ ವಿಚಾರದಲ್ಲಿ ಪ್ರಗತಿ. ಶುಭಸಂಖ್ಯೆ: 6
ವೃಶ್ಚಿಕ: ಖರ್ಚಿನಲ್ಲಿ ಹಿಡಿತವಿರಲಿ. ನಿಮ್ಮ ಕೆಲಸಕ್ಕೆ ಅಧಿಕಾರಿಗಳಿಂದ ಪ್ರೋತ್ಸಾಹ ಸಿಗಲಿದೆ. ಆರೋಗ್ಯ ಉತ್ತಮ ಸ್ಥಿತಿಯಲ್ಲೇ ಇರುತ್ತದೆ. ಶುಭಸಂಖ್ಯೆ:9
ಧನಸ್ಸು: ಲೆಕ್ಕ ಪರಿಶೋಧಕರಿಗೆ ಶುಭ ದಿನ. ಅರಿವಳಿಕೆ ತಜ್ಞರಿಗೆ ವಿಶೇಷ ಮುನ್ನಡೆ ಸಿಗಲಿದೆ. ಸಹೋದ್ಯೋಗಿಗಳೊಂದಿಗೆ ಬಾಂಧವ್ಯ ವೃದ್ಧಿ. ಶುಭಸಂಖ್ಯೆ: 1
ಮಕರ: ಅವಿವಾಹಿತರಿಗೆ ವಿವಾಹ ಕೂಡಿ ಬರಲಿದೆ. ಹಣದ ನಿರ್ವಹಣೆಯಲ್ಲಿ ಯಶಸ್ಸು. ಒಡಹುಟ್ಟಿದವರಿಗೆ ಸಹಾಯ ಮಾಡುವಿರಿ. ಶುಭಸಂಖ್ಯೆ: 4
ಕುಂಭ: ಐಟಿ ಉದ್ಯೋಗಿಗಳಿಗೆ ಅತಂತ್ರತೆ ಕಾಡಲಿದೆ. ಖರ್ಚು ವೆಚ್ಚದಲ್ಲಿ ಅಸಮತೋಲನದಿಂದ ಸಂಕಷ್ಟ. ಭೂ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ:9
ಮೀನ: ಕಟ್ಟಡ ನಿರ್ಮಾಣ ವ್ಯವಹಾರಗಳಲ್ಲಿ ಗೊಂದಲ ಕಾಡುವುದು. ಧಾರ್ವಿುಕ ವಿಷಯಗಳಲ್ಲಿ ಒಲವು. ರಾಜಕೀಯ ವ್ಯಕ್ತಿಗಳಿಗೆ ಅಶುಭ. ಶುಭಸಂಖ್ಯೆ:3