ನಿತ್ಯಭವಿಷ್ಯ  
ದಿನ ಭವಿಷ್ಯ

ನಿತ್ಯಭವಿಷ್ಯ: ಈ ರಾಶಿಯವರು ಪ್ರೀತಿ-ಪ್ರೇಮದ ವಿಷಯದಲ್ಲಿ ಎಚ್ಚರ ಇರಲಿ

ಮೇಷ: ಸಾಮಾಜಿಕ ಕೆಲಸಗಳಿಂದ ಅನುಕೂಲ. ಕುಟುಂಬದಲ್ಲಿ ಸಂತೋಷದ ವಾತಾವರಣ. ಆತ್ಮಗೌರವಕ್ಕಾಗಿ ಸ್ನೇಹಿತರಿಂದ ದೂರ. ಶುಭಸಂಖ್ಯೆ: 4

ವೃಷಭ: ಬಂಧುಗಳ ಆರ್ಥಿಕ ಸಹಾಯದಿಂದ ಸಾಲ ತೀರಿಸಲು ಸಾಧ್ಯ. ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ಸುಧಾರಣೆ. ಸ್ಥಿರಾಸ್ತಿ ಮಾರಾಟ. ಶುಭಸಂಖ್ಯೆ: 2

ಮಿಥುನ: ನಿರೀಕ್ಷಿತ ಪ್ರಯಾಣ ಫಲಪ್ರದ. ಪ್ರೀತಿ-ಪ್ರೇಮದ ವಿಷಯದಲ್ಲಿ ಎಚ್ಚರ ಇರಲಿ. ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಶುಭಸಂಖ್ಯೆ:1

ಕಟಕ: ಭೂಮಿ, ವಾಹನ ಖರೀದಿಯಲ್ಲಿ ಲಾಭ. ಸಹೋದರಿಯ ಜೀವನದಲ್ಲಿ ಅನಿರೀಕ್ಷಿತ ತಿರುವು, ಸ್ನೇಹಿತರ ಜತೆ ತೀರ್ಥಯಾತ್ರೆ. ಶುಭಸಂಖ್ಯೆ: 8

ಸಿಂಹ: ಉದ್ಯೋಗ ಸ್ಥಳದಲ್ಲಿ ಮೆಚ್ಚುಗೆ ಸಿಗಲಿದೆ. ವಿವಾಹ ನಿರೀಕ್ಷೆಯಲ್ಲಿದ್ದವರಿಗೆ ಶುಭ ಸುದ್ದಿ. ಸಂಗಾತಿಯ ಸಹಾಯ ಸಿಗಲಿದೆ. ಶುಭಸಂಖ್ಯೆ:6

ಕನ್ಯಾ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ. ಸಿದ್ಧ ಉಡುಪುಗಳ ಮಾರಾಟದಲ್ಲಿ ಲಾಭಗಳಿಸುವಿರಿ. ಮಹಿಳೆಯರಿಗೆ ಆಭರಣ ಲಾಭ. ಶುಭಸಂಖ್ಯೆ: 8

ತುಲಾ: ಶತ್ರುಗಳು ಮಿತ್ರರಾಗಿ ಬದಲಾದಾರು. ಆತ್ಮಗೌರವಕ್ಕೆ ಧಕ್ಕೆ ತರಲು ಬಿಡಬೇಡಿ. ಪ್ರತಿಭಾವಂತರಿಗೆ ಉತ್ತಮ ಅವಕಾಶಗಳು ಪ್ರಾಪ್ತಿ. ಶುಭಸಂಖ್ಯೆ: 4

ವೃಶ್ಚಿಕ: ಅನುಪಯುಕ್ತ ಸಲಹೆ ದಾರಿತಪ್ಪಿಸಬಹುದು. ಕೊಟ್ಟ ಸಾಲ ತಿರುಗಿ ಬರಲಿದೆ. ಉದ್ಯೋಗದ ಅತಂತ್ರತೆ ನಿವಾರಣೆ ಆಗಲಿದೆ. ಶುಭಸಂಖ್ಯೆ:4

ಧನಸ್ಸು: ಆತ್ಮೀಯರಿಂದ ಸಾಲದ ನೆರವು. ದೇವತಾ ಕಾರ್ಯಗಳಲ್ಲಿ ಆಸಕ್ತಿ. ಕಾಳು ಮೆಣಸು, ಸಾಂಬಾರು ಪದಾರ್ಥ ವ್ಯಾಪಾರಸ್ಥರಿಗೆ ಪ್ರಗತಿ. ಶುಭಸಂಖ್ಯೆ: 2

ಮಕರ: ಸ್ನಾಯುಗಳ ನೋವು ನಿವಾರಣೆಯಾಗುವುದು. ಆರ್ಥಿಕ ಸಮಸ್ಯೆಗಳು ಹೆಚ್ಚು. ಪ್ರೀತಿಪಾತ್ರರ ಜೊತೆ ಸಂತಸದ ಕ್ಷಣಗಳು. ಶುಭಸಂಖ್ಯೆ:5

ಕುಂಭ: ಕುಟುಂಬ ಗೌರವಕ್ಕೆ ಧಕ್ಕೆ ತರುವ ವಿಷಯದಲ್ಲಿ ಎಚ್ಚರ. ಮುರಿದು ಹೋದ ದಾಂಪತ್ಯದಲ್ಲಿ ಹೊಸಬೆಳಕು. ಭವಿಷ್ಯದ ಚಿಂತನೆ. ಶುಭಸಂಖ್ಯೆ:4

ಮೀನ: ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶ. ಸಾಹಿತಿ, ಬರಹಗಾರರಿಗೆ ಸಮಾಜದಲ್ಲಿ ಸನ್ಮಾನ. ರೇಷ್ಮೆ ಮತ್ತು ಜೇನು ಕೃಷಿಕರಿಗೆ ಸೂಕ್ತ ಲಾಭ. ಶುಭಸಂಖ್ಯೆ: 7