ಮೇಷ: ಕುಲಕಸುಬಿನಲ್ಲಿ ಕೀರ್ತಿ ಲಭಿಸಲಿದೆ. ಸಾಹಿತಿಗಳಿಗೆ ಕೀರ್ತಿ ಪ್ರತಿಷ್ಠೆ ಲಭ್ಯವಾಗುವುದು. ಕೋರ್ಟ್ ಉದ್ಯೋಗಿಗಳಿಗೆ ವರ್ಗಾವಣೆ. ಶುಭಸಂಖ್ಯೆ: 2
ವೃಷಭ: ಯಕ್ಷಗಾನ ಕಲಾವಿದರಿಗೆ ವಿದೇಶ ಪ್ರಯಾಣ ಯೋಗ. ಆದಾಯ ಅಧಿಕಾರಿಗಳಿಂದ ಬುಲಾವ್ ಬರಲಿದೆ. ಬಾಕಿ ಹಣ ಕೈಸೇರುತ್ತದೆ. ಶುಭಸಂಖ್ಯೆ: 8
ಮಿಥುನ: ಕಳೆದುಕೊಂಡ ವಸ್ತು ಮರಳಿ ಸಿಗಲಿದೆ. ವೈದ್ಯಕೀಯ ವಸ್ತುಗಳ ಮಾರಾಟಸ್ಥರಿಗೆ ಲಾಭ. ಪತ್ರಿಕೋದ್ಯಮದಲ್ಲಿ ಕೀರ್ತಿಗಳಿಸುವಿರಿ. ಶುಭಸಂಖ್ಯೆ:3
ಕಟಕ: ಲೆಕ್ಕಪತ್ರ ಪರಿಶೀಲಕರಿಗೆ ಶುಭದಾಯಕ ದಿನ. ಷೇರು ವ್ಯವಹಾರಗಳಲ್ಲಿ ಲಾಭ. ಪ್ರಯತ್ನಿಸಿದ ಕಾರ್ಯಗಳಲ್ಲಿ ಯಶಸ್ಸು. ಶುಭಸಂಖ್ಯೆ:6
ಸಿಂಹ: ನಿರ್ದೇಶಕರಿಗೆ ಹೊಸ ಹೊಸ ಅವಕಾಶಗಳು ಲಭ್ಯ. ಭೂ ವ್ಯವಹಾರದಲ್ಲಿ ಮೋಸ. ಶುಭ ಕಾರ್ಯಗಳ ಸಂಭ್ರಮ. ಶುಭಸಂಖ್ಯೆ:4
ಕನ್ಯಾ: ಅನಿರೀಕ್ಷಿತ ಐಶ್ವರ್ಯ ಪ್ರಾಪ್ತಿ. ಕೇಂದ್ರ ಸರ್ಕಾರದ ನೌಕರಿಯಲ್ಲಿ ಬಡ್ತಿ. ಲೇವಾದೇವಿ ವ್ಯವಹಾರದಲ್ಲಿ ಧನಲಾಭವಾಗುವುದು. ಶುಭಸಂಖ್ಯೆ:6
ತುಲಾ: ಆತ್ಮೀಯರೊಬ್ಬರಿಂದ ಧನ ಸಹಾಯ. ಸ್ತ್ರೀಯರಿಗೆ ಉದ್ಯೋಗಲಾಭ. ಒಡಹುಟ್ಟಿದವರಿಂದ ಆಸ್ತಿ ವಿಚಾರದಲ್ಲಿ ಕಿರಿಕಿರಿ. ಶುಭಸಂಖ್ಯೆ: 8
ವೃಶ್ಚಿಕ: ಕುಟುಂಬದಲ್ಲಿ ಶುಭಕಾರ್ಯದ ಸಂಭ್ರಮ. ಪದವಿ ಪ್ರಾಪ್ತಿಯಲ್ಲಿ ಹಿತಶತ್ರುಗಳಿಂದ ತಡೆ. ಎಲೆಕ್ಟ್ರಾನಿಕ್ಸ್ ಉದ್ಯೋಗದಲ್ಲಿ ಲಾಭ. ಶುಭಸಂಖ್ಯೆ:2
ಧನಸ್ಸು: ಮಕ್ಕಳ ಪ್ರಗತಿ ನೋಡಿ ಸಂತೋಷಪಡುವಿರಿ. ಪದವೀಧರರಿಗೆ ಕೃಷಿಯ ಕಡೆ ಆಸಕ್ತಿ. ಕೈಗೊಂಡ ಕಾರ್ಯಗಳಲ್ಲಿ ಸಫಲ. ಶುಭಸಂಖ್ಯೆ: 8
ಮಕರ: ಹಳೇ ಸಾಲ ತೀರಿಸಲು ಸ್ನೇಹಿತನಿಂದ ಸಹಾಯ. ಸಮಾಜದಲ್ಲಿ ಗೌರವ ಸ್ಥಾನ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಶುಭಸಂಖ್ಯೆ:6
ಕುಂಭ: ಕಚೇರಿಯಲ್ಲಿ ಭಿನ್ನಾಭಿಪ್ರಾಯ. ದಾಂಪತ್ಯದಲ್ಲಿ ಸಾಮರಸ್ಯ. ನಿವೇಶನ ಖರೀದಿಗೆ ಅಡೆತಡೆ. ಜೇನು ಮಾರಾಟದಲ್ಲಿ ಲಾಭ. ಶುಭಸಂಖ್ಯೆ:1
ಮೀನ: ಹೊಸ ಜವಾಬ್ದಾರಿಗಳು ಹೆಗಲೇರುತ್ತವೆ. ಗಣ್ಯ ವ್ಯಕ್ತಿಗಳ ಭೇಟಿಯಾಗಲಿದೆ. ಆಧ್ಯಾತ್ಮಿಕ ಗ್ರಂಥಗಳ ಅಧ್ಯಯನದಲ್ಲಿ ಆಸಕ್ತಿ. ಶುಭಸಂಖ್ಯೆ:5