ಮೇಷ: ಕೃಷಿ ಕ್ಷೇತ್ರದಲ್ಲಿ ಲಾಭಗಳಿಸುವಿರಿ. ರಾಜಕೀಯ ಕ್ಷೇತ್ರದಲ್ಲಿ ಅನಿರೀಕ್ಷಿತ ಪದವಿ ಪ್ರಾಪ್ತಿ. ಹಿತ ಶತ್ರುಗಳ ನಿಗ್ರಹದಿಂದ ಸಮಾಧಾನ. ಶುಭಸಂಖ್ಯೆ: 9
ವೃಷಭ: ಹಿರಿಯರ ಆರೋಗ್ಯದತದ್ತ ಕಾಳಜಿ ವಹಿಸಿ.ಪ್ರಭಾವಿ ವ್ಯಕ್ತಿಯ ಭೇಟಿಯಾಗಲಿದೆ. ಹೊಸ ವ್ಯಾಪಾರದಲ್ಲಿ ಅನಿರೀಕ್ಷಿತ ತಿರುವು. ಶುಭಸಂಖ್ಯೆ: 8
ಮಿಥುನ: ನ್ಯಾಯಾಲಯದ ಕೆಲಸದಲ್ಲಿ ಜಯ. ಮನೆಯಲ್ಲಿ ವಿವಾಹ ಸಂಭ್ರಮಕ್ಕೆ ಕಾಲ ಕೂಡಿ ಬರಲಿದೆ. ಪಾಲುದಾರಿಕೆಯಲ್ಲಿ ಅಧಿಕ ಗಳಿಕೆ. ಶುಭಸಂಖ್ಯೆ: 1
ಕಟಕ: ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶ ಪ್ರಯಾಣ. ಸೇವಾ ಕ್ಷೇತ್ರದಲ್ಲಿ ಕೀರ್ತಿ ಸಂಪಾದನೆ. ಲೆಕ್ಕಪರಿಶೋಧಕರಿಗೆ ಬೇಡಿಕೆ ಹೆಚ್ಚಲಿದೆ. ಶುಭಸಂಖ್ಯೆ: 3
ಸಿಂಹ: ಉದ್ಯೋಗ ಬದಲಾಯಿಸುವ ಮನಸ್ಸು. ರೇಷ್ಮೆಸೀರೆ ವ್ಯಾಪಾರದಲ್ಲಿ ಲಾಭ. ವಾಹನ ಮಾಲೀಕರಿಗೆ ಲಾಭದ ಪ್ರಮಾಣದಲ್ಲಿ ಏರಿಕೆ. ಶುಭಸಂಖ್ಯೆ:6
ಕನ್ಯಾ: ಪ್ರಮುಖ ತೀರ್ಮಾನ ತೆಗೆದುಕೊಳ್ಳುವಲ್ಲಿ ಎಚ್ಚರ. ರಂಗಕರ್ವಿುಗಳಿಗೆ ಧನ ಲಾಭ. ಗೃಹ ನಿರ್ವಣಕ್ಕೆ ಬ್ಯಾಂಕಿನಿಂದ ಸಹಾಯ. ಶುಭಸಂಖ್ಯೆ: 4
ತುಲಾ: ಕೃಷಿ ಅಧ್ಯಯನಕ್ಕಾಗಿ ವಿದೇಶ ಪ್ರವಾಸ. ಸಂಶೋಧನೆ ಯಲ್ಲಿ ಯಶ ಗಳಿಸುವಿರಿ. ತಂದೆ ತಾಯಿಯ ಆರೋಗ್ಯದತ್ತ ಗಮನ ಇರಲಿ. ಶುಭಸಂಖ್ಯೆ:5
ವೃಶ್ಚಿಕ: ಆಯುರ್ವೆದ ಔಷಧ ಮಾರಾಟದಲ್ಲಿ ಯಶ. ಪ್ರತಿಭೆಗೆ ಸೂಕ್ತ ಪುರಸ್ಕಾರ ಸಿಗಲಿದೆ. ವಿದ್ಯುತ್ ಇಲಾಖೆ ನೌಕರರಿಗೆ ವರ್ಗಾವಣೆ. ಶುಭಸಂಖ್ಯೆ: 7
ಧನಸ್ಸು: ಪರಿಶ್ರಮಕ್ಕೆ ಸೂಕ್ತವಾದ ಪ್ರತಿಪಲ ಸಿಗಲಿದೆ. ಆಸ್ತಿ ವಿಚಾರ ಇತ್ಯರ್ಥವಾಗಲು ವಿಳಂಬ. ಕಾನೂನು ಸಲಹೆಗಾರರಿಗೆ ಅಭಿವೃದ್ಧಿ. ಶುಭಸಂಖ್ಯೆ:4
ಮಕರ: ಆರಕ್ಷಕ ವೃತ್ತಿಯವರಿಗೆ ಒತ್ತಡ ಕಡಿಮೆಯಾದೀತು. ವೈದ್ಯರಿಗೆ ಸವಾಲಿನ ಚಿಕಿತ್ಸೆ ಎದುರಾಗಲಿದೆ. ಗುತ್ತಿಗೆ ಕೆಲಸಗಾರರಿಗೆ ಆದಾಯ. ಶುಭಸಂಖ್ಯೆ:9
ಕುಂಭ: ಯಂತ್ರೋಪಕರಣಗಳೊಂದಿಗೆ ವ್ಯವಹರಿಸುವಾಗ ಎಚ್ಚರವಿರಲಿ. ಕಲಾಕ್ಷೇತ್ರದಲ್ಲಿ ಸಾಧನೆ. ಭೂ ಸಂಬಂಧಿ ಕೆಲಸಗಳಲ್ಲಿ ಲಾಭ. ಶುಭಸಂಖ್ಯೆ: 1
ಮೀನ: ರಾಜಕೀಯ ಕ್ಷೇತ್ರದಲ್ಲಿ ಅಧಿಕಾರ ಹುಡುಕಿ ಬರಲಿದೆ. ಉದ್ಯೋಗದ ಹುಡುಕಾಟಕ್ಕೆ ತಕ್ಕ ಪ್ರತಿಫಲ. ನೂತನ ದಂಪತಿಗೆ ಶುಭ ಸುದ್ದಿ. ಶುಭಸಂಖ್ಯೆ:9