ಮೇಷ: ತೆಂಗು ಕೃಷಿಯಲ್ಲಿ ಲಾಭ ಬರಲಿದೆ. ಕಲಾ ರಂಗದವರಿಗೆ ಪದವಿ ಪ್ರಾಪ್ತಿ. ಅವಿವಾಹಿತರಿಗೆ ಮದುವೆಗೆ ಕಾಲ ಕೂಡಿ ಬರಲಿದೆ. ಶುಭಸಂಖ್ಯೆ:1
ವೃಷಭ: ಸಿದ್ಧ ಉಡುಪು ಮಾಲೀಕರಿಗೆ ಕೆಲಸಗಾರರ ಅಭಾವ. ಧಾರ್ವಿುಕ ಪ್ರಮುಖರ ಭೇಟಿ. ಭೂ ವ್ಯಾಪಾರದಲ್ಲಿ ಹೆಚ್ಚಿನ ಲಾಭಕ್ಕೆ ಅವಕಾಶ. ಶುಭಸಂಖ್ಯೆ: 2
ಮಿಥುನ: ನ್ಯಾಯಾಲಯದ ಕೆಲಸಗಳಲ್ಲಿ ಜಯ. ಕುಟುಂಬದಲ್ಲಿ ಶುಭ ಕಾರ್ಯ ಜರುಗಲಿದೆ, ಪಾಲುದಾರಿಕೆ ವ್ಯವಹಾರದಲ್ಲಿ ಆಶಾಕಿರಣ. ಶುಭಸಂಖ್ಯೆ: 5
ಕಟಕ: ಮುರಿದುಹೋದ ವಿವಾಹಕ್ಕೆ ಸಂಬಂಧಿಸಿ ಪ್ರಯತ್ನ ಫಲಿಸಲಿದೆ. ಸಂಶೋಧನಾ ವೃತ್ತಿಯಲ್ಲಿ ಕೀರ್ತಿ. ವಾಣಿಜ್ಯಬೆಳೆ ಕೃಷಿಕರಿಗೆ ಲಾಭ. ಶುಭಸಂಖ್ಯೆ: 8
ಸಿಂಹ: ಉದ್ಯೋಗ ಬದಲಿಸುವ ನಿರ್ಧಾರ. ಗೃಹಬಳಕೆಯ ವಸ್ತುಗಳ ವ್ಯಾಪಾರಸ್ಥರಿಗೆ ಉತ್ತಮ ಆದಾಯ. ಮಕ್ಕಳ ಪ್ರಗತಿ ಕಂಡು ಹೆಮ್ಮೆ. ಶುಭಸಂಖ್ಯೆ: 2
ಕನ್ಯಾ: ಪ್ರಮುಖ ತೀರ್ಮಾನ ಕೈಗೊಳ್ಳಲು ಪರಿಣಿತರ ಸಲಹೆ ಅಗತ್ಯ. ರಂಗಕರ್ವಿುಗಳಿಗೆ ಆರ್ಥಿಕ ಲಾಭ. ಗೃಹ ನಿರ್ವಣಕ್ಕೆ ಪ್ರಾರಂಭ.ಶುಭಸಂಖ್ಯೆ: 9
ತುಲಾ: ಒಳಾಂಗಣ ವಿನ್ಯಾಸದವರಿಗೆ ಬೇಡಿಕೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ವಿದೇಶ ಪ್ರವಾಸ. ಕೌಟುಂಬಿಕ ಜಟಿಲ ಸಮಸ್ಯೆ ಇತ್ಯರ್ಥ. ಶುಭಸಂಖ್ಯೆ:7
ವೃಶ್ಚಿಕ: ಅರಣ್ಯ ಉತ್ಪನ್ನಗಳ ಮಾರಾಟದವರಿಗೆ ಲಾಭ. ಹಿರಿಯ ಅಧಿಕಾರಿಗಳೊಂದಿಗೆ ವಿವಾದ. ಲೇವಾದೇವಿ ವ್ಯವಹಾರದಲ್ಲಿ ಆದಾಯ. ಶುಭಸಂಖ್ಯೆ: 2
ಧನಸ್ಸು: ಕೌಶಲ ವೃತ್ತಿಯವರಿಗೆ ಶ್ರಮಕ್ಕೆ ತಕ್ಕ ಯಶ. ಕಾರ್ಯಕ್ಷಮತೆಗೆ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ವಕೀಲರಿಗೆ ಉತ್ತಮ ಗಳಿಕೆ. ಶುಭಸಂಖ್ಯೆ:8
ಮಕರ: ಸರ್ಕಾರಿ ವೈದ್ಯರಿಗೆ ವರ್ಗಾವಣೆಯಾಗುವ ಸಾಧ್ಯತೆ. ಸಾಕ್ಷಿಯ ಚಿತ್ರ ನಿರ್ದೇಶಕರಿಗೆ ಧನಲಾಭ. ಸರ್ಕಾರಿ ಹರಾಜಿನಲ್ಲಿ ಲಾಭ. ಶುಭಸಂಖ್ಯೆ: 6
ಕುಂಭ: ಸಂಸ್ಕರಿಸಿದ ಆಹಾರ ಮಾರಾಟದಲ್ಲಿ ಲಾಭ. ಲೆಕ್ಕಪರಿಶೋಧಕರ ವೃತ್ತಿಯಲ್ಲಿ ಪ್ರಗತಿ. ತಾಂತ್ರಿಕ, ವಾಣಿಜ್ಯ ವಿದ್ಯಾರ್ಥಿಗಳಿಗೆ ಯಶ. ಶುಭಸಂಖ್ಯೆ: 2
ಮೀನ: ದಾಂಪತ್ಯ ಜೀವನದಲ್ಲಿ ಅನಿರೀಕ್ಷಿತ ಬೆಳವಣಿಗೆ. ಚಿನ್ನ - ಬೆಳ್ಳಿ ವ್ಯವಹಾರದಲ್ಲಿ ಯಶಸ್ಸು. ಉದ್ಯೋಗದ ಹುಡುಕಾಟ ಸಫಲ. ಶುಭಸಂಖ್ಯೆ: 6