ನಿತ್ಯಭವಿಷ್ಯ  
ದಿನ ಭವಿಷ್ಯ

ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಸ್ಥಿರಾಸ್ತಿಯ ಖರೀದಿಗೆ ಸೂಕ್ತ ಸಮಯ

ಮೇಷ: ನವ ವಿವಾಹಿತರಿಗೆ ಶುಭ ಸುದ್ದಿ. ಐಟಿ ಉದ್ಯೋಗಸ್ಥರಿಗೆ ಸ್ಥಳ ಬದಲಾವಣೆ ಸಾಧ್ಯತೆ. ಫ್ಯಾನ್ಸಿ ಸ್ಟೋರ್ ಮಾಲೀಕರಿಗೆ ಧನಲಾಭ. ಶುಭಸಂಖ್ಯೆ: 5 

ವೃಷಭ: ಮೇಲಧಿಕಾರಿಗಳಿಂದ ಹೆಚ್ಚಿನ ಸಹಾಯ. ಹಣ ಹೂಡಿಕೆಯಲ್ಲಿ ಲಾಭಗಳಿಸುವಿರಿ. ಮೂಳೆಯ ಸಮಸ್ಯೆ ಬಗೆಹರಿಯಲಿದೆ. ಶುಭಸಂಖ್ಯೆ: 7

ಮಿಥುನ: ಆರೋಗ್ಯದ ನಿಮಿತ್ತ ಹೆಚ್ಚಿನ ಗಮನ ಕೊಡಿ. ವಿವಾಹದ ಪ್ರಯತ್ನ ಫಲಿಸಲಿದೆ. ಹೋಟೆಲ್ ವ್ಯವಹಾರದಲ್ಲಿ ಆದಾಯ ಹೆಚ್ಚಲಿದೆ. ಶುಭಸಂಖ್ಯೆ:5

ಕಟಕ: ಕುಟುಂಬದಲ್ಲಿ ಶುಭ ಕಾರ್ಯ ನಡೆಯಲಿದೆ. ಸ್ಥಿರಾಸ್ತಿಯ ಖರೀದಿಗೆ ಸೂಕ್ತ ಸಮಯ. ವಾಹನ ಕೊಳ್ಳುವ ಚಿಂತನೆ ಮಾಡುವಿರಿ. ಶುಭಸಂಖ್ಯೆ: 2

ಸಿಂಹ: ತರಬೇತಿ ಸಂಸ್ಥೆಯ ಉದ್ಯೋಗಿಗಳಿಗೆ ಧನ ಲಾಭ. ಕ್ಯಾಂಟೀನ್ ವ್ಯಾಪಾರದಲ್ಲಿ ಲಾಭ. ಬಂಧು ಗಳೊಂದಿಗೆ ದೂರ ಪ್ರಯಾಣ. ಶುಭಸಂಖ್ಯೆ: 8

ಕನ್ಯಾ: ಲೇಖಕರಿಗೆ, ಪತ್ರಕರ್ತರಿಗೆ ಅತ್ಯುತ್ತಮ ಸಮಯ. ಪಾಲುದಾರಿಕೆಯ ವ್ಯವಹಾರದಲ್ಲಿ ಲಾಭ. ಹೈನುಗಾರಿಕೆಯಲ್ಲಿ ಹಣ ಗಳಿಕೆ. ಶುಭಸಂಖ್ಯೆ: 4

ತುಲಾ: ತತ್ವಶಾಸ್ತ್ರದ ಅಧ್ಯಯನದಲ್ಲಿ ಆಸಕ್ತಿ ತೋರಿಸುವಿರಿ. ದಂತ ವೈದ್ಯರಿಗೆ ಶುಭ. ಆಲಸ್ಯದಿಂದ ಅವಕಾಶವಂಚಿತರಾಗುವ ಸಂಭವ. ಶುಭಸಂಖ್ಯೆ: 8

ವೃಶ್ಚಿಕ: ವ್ಯಾಪಾರದ ಉದ್ದೇಶಕ್ಕೆ ವಾಹನಕೊಳ್ಳುವ ಯೋಚನೆ. ಮನೆ ನವೀಕರಣದ ನಿರ್ಧಾರ. ಪುಸ್ತಕ ವ್ಯಾಪಾರಿಗಳಿಗೆ ಲಾಭವಾಗುವುದು. ಶುಭಸಂಖ್ಯೆ: 6

ಧನಸ್ಸು: ಮಾತಿನಲ್ಲಿ ಕಠೋರತನವನ್ನು ಕಡಿಮೆ ಮಾಡಿಕೊಳ್ಳಿ. ಕಚೇರಿಯಲ್ಲಿ ಉಲ್ಲಾಸಕರ ವಾತಾವರಣ. ಪ್ಲಾಸಿಕ್ ಉದ್ದಿಮೆಯಲ್ಲಿ ಲಾಭ. ಶುಭಸಂಖ್ಯೆ: 6

ಮಕರ: ಹತ್ತಿ ಬೆಳೆಗಾರರಿಗೆ ವಿಶೇಷ ಬೇಡಿಕೆ ಬರುವುದು. ಕೋರ್ಟ್ ಕೆಲಸಗಳಲ್ಲಿ ಯಶಸ್ಸು. ವಿಚ್ಛೇದಿತರಿಗೆ ದ್ವಿತೀಯ ವಿವಾಹ ಸಂಭವ. ಶುಭಸಂಖ್ಯೆ: 8

ಕುಂಭ: ರಾಜಕೀಯದವರಿಗೆ ನಿರ್ಧಾರ ತೆಗೆದುಕೊಳ್ಳಲು ಸೂಕ್ತ ಸಮಯ. ಅನಾರೋಗ್ಯದಿಂದ ಚೇತರಿಕೆ. ಔಷಧ ವ್ಯಾಪಾರಸ್ಥರಿಗೆ ಉತ್ತಮ ವ್ಯಾಪಾರ. ಶುಭಸಂಖ್ಯೆ: 7

ಮೀನ: ಕಬ್ಬಿಣ, ಸಿಮೆಂಟ್ ವ್ಯಾಪಾರಸ್ಥರಿಗೆ ಲಾಭ. ಸಾಂಪ್ರದಾಯಿಕ ಔಷಧ ಉದ್ಯಮಕ್ಕೆ ಆದಾಯ. ಮಾತಿನಲ್ಲಿ ನಿಯಂತ್ರಣವಿರಲಿ. ಶುಭಸಂಖ್ಯೆ: 6