ಮೇಷ: ರಕ್ಷಣಾ ಇಲಾಖೆಗೆ ಆಯ್ಕೆ. ಕೌಟುಂಬಿಕ ಜವಾಬ್ದಾರಿಗೆ ಆದ್ಯತೆ ನೀಡಿ. ವಿವಾಹದ ವಿಷಯದ ನಿರ್ಧಾರಕ್ಕೆ, ಹಿರಿಯರ ಬೆಂಬಲ. ಶುಭಸಂಖ್ಯೆ: 9
ವೃಷಭ: ಸಂಗೀತ,ನಾಟ್ಯ ಕಲಾವಿದರಿಗೆ ವಿಶೇಷ ವೇದಿಕೆ ಲಭ್ಯ. ಆಪ್ತರೊಂದಿಗೆ ಅರ್ಥಪೂರ್ಣ ಸಂಭಾಷಣೆ. ಸಂಗಾತಿಯ ಮಾರ್ಗದರ್ಶನ. ಶುಭಸಂಖ್ಯೆ: 7
ಮಿಥುನ: ಆರ್ಥಿಕ ವಿಷಯಗಳಲ್ಲಿ ಹೆಚ್ಚಿನ ಹಣ ಗಳಿಸುವ ಅವಕಾಶ. ಮನೆ ಮಾರಾಟಕ್ಕೆ ಇದ್ದ ನಿರ್ಬಂಧ ತೆರವು. ವಿದ್ಯಾರ್ಥಿಗಳಿಗೆ ಯಶಸ್ಸು. ಶುಭಸಂಖ್ಯೆ:9
ಕಟಕ: ಅಪರಿಚಿತರಿಂದ ಮೋಸ ಹೋಗುವ ಸಾಧ್ಯತೆ. ಪೋಷಕರ ಆರೋಗ್ಯದಲ್ಲಿ ಸುಧಾರಣೆ. ಪ್ರಮುಖ ನಿರ್ಧಾರಗಳಿಗೆ ಉತ್ತಮ ದಿನ. ಶುಭಸಂಖ್ಯೆ:8
ಸಿಂಹ: ಹೊಸ ಸಾಹಸಕ್ಕೆ ಕೈಹಾಕುವ ಮುನ್ನ ಪರಿಣಿತರ ಸಲಹೆ ಅಗತ್ಯ. ಚಲನಚಿತ್ರ ಸಾಹಿತಿಗಳು, ಲೇಖಕರು ಚಿಂತನೆಗೆ ಸಮಯ ಕೊಡಿ. ಶುಭಸಂಖ್ಯೆ:4
ಕನ್ಯಾ: ಚಿಕ್ಕ ವ್ಯಾಪಾರದಲ್ಲಿ ದೊಡ್ಡ ಲಾಭ. ಕ್ರೀಡಾಪಟುಗಳಿಗೆ ಸಾಮಾಜಿಕ ವಲಯದಿಂದ ಪೋ›ತ್ಸಾಹ. ಉಪನ್ಯಾಸಕರಿಗೆ ವರ್ಗಾವಣೆ. ಶುಭಸಂಖ್ಯೆ:6
ತುಲಾ: ವೃತ್ತಿರಂಗದಲ್ಲಿ ತಾಳ್ಮೆ, ನಿರಂತರ ಶ್ರಮದಿಂದ ಯಶಸ್ಸು. ಮನೆ ಬದಲಾವಣೆಗೆ ನಿರ್ಧಾರ. ವಿದೇಶದ ಸ್ನೇಹಿತನಿಂದ ಸಹಾಯ. ಶುಭಸಂಖ್ಯೆ:7
ವೃಶ್ಚಿಕ: ಹೊಸ ವಿಷಯಗಳನ್ನು ಕಲಿಯಲು ವಿದೇಶ ಪ್ರಯಾಣ. ಆಸ್ತಿ ಅಭಿವೃದ್ಧಿ ಯೋಜನೆಗೆ ಸೂಕ್ತ ಸಮಯ. ಸಾರಿಗೆ ನೌಕರರಿಗೆ ಬಡ್ತಿ. ಶುಭಸಂಖ್ಯೆ:2
ಧನಸ್ಸು: ಭಾವನಾತ್ಮಕ ವಿಷಯಗಳಲ್ಲಿ ಎಚ್ಚರ. ಹೊಸ, ಆರ್ಥಿಕ ಯೋಜನೆಗಳು ಲಾಭ ತರಲಿವೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಭದಿನ. ಶುಭಸಂಖ್ಯೆ:4
ಮಕರ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಪ್ರಗತಿ. ಖಾಸಗಿ ಉದ್ಯೋಗದಲ್ಲಿ ಬಡ್ತಿ. ಆಭರಣಗಳ ವ್ಯಾಪಾರದಲ್ಲಿ ಧನಲಾಭವಾಗಲಿದೆ. ಶುಭಸಂಖ್ಯೆ:8
ಕುಂಭ: ಕ್ರಿಯಾತ್ಮಕ ಚಟುವಟಿಕೆಯಿಂದ ಹೆಸರು ಗಳಿಸುವಿರಿ. ಕೋರ್ಟ್ ಕೆಲಸ ಪೂರ್ಣಗೊಳ್ಳಲಿವೆ. ದಿನಾಂತ್ಯದಲ್ಲಿ ಅನಿರೀಕ್ಷಿತ ಪ್ರಯಾಣ. ಶುಭಸಂಖ್ಯೆ: 5
ಮೀನ: ತಯಾರಿಸಿದ ಆಹಾರ ಮಾರಾಟದಲ್ಲಿ ಲಾಭ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ದೂರ ಪ್ರವಾಸಗಳಿಂದ ಲಾಭ ಪಡೆಯಲಿದ್ದೀರಿ. ಶುಭಸಂಖ್ಯೆ:8