ದಿನ ಭವಿಷ್ಯ

ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಬ್ಯಾಂಕ್​ನಿಂದ ಸಾಲ ಮಂಜೂರಾಗಲಿದೆ

ಮೇಷ: ಸಹೋದರನ ಆರೋಗ್ಯ ಸುಧಾರಿಸಲಿದೆ. ಹೊಸದಾಗಿ ಪ್ರಾರಂಭಿಸಿದ ಕೆಲಸಕ್ಕೆ ವೇಗ. ಸಾಧು ಸಂತರ ದರ್ಶನವಾಗುವುದು. ಶುಭಸಂಖ್ಯೆ: 5

ವೃಷಭ: ಬ್ಯಾಂಕ್​ನಿಂದ ಸಾಲ ಮಂಜೂರಾಗಲಿದೆ. ಕುಟುಂಬದಲ್ಲಿ ಸಹನೆಯಿಂದ ವರ್ತಿಸಿ. ಕಲಾವಿದರಿಗೆ ವಿದೇಶದಲ್ಲಿ ಅವಕಾಶ. ಶುಭಸಂಖ್ಯೆ: 6

ಮಿಥುನ: ಸಿಮೆಂಟ್ ಮತ್ತು ಮರಳು ವ್ಯಾಪಾರದಲ್ಲಿ ಹಣ ಗಳಿಕೆ. ಐಟಿ ಉದ್ಯಮದಲ್ಲಿ ಪ್ರಗತಿ. ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ: 2

ಕಟಕ: ಸ್ತ್ರೀಯರಿಗೆ ಖರೀದಿಗೆ ಅನಗತ್ಯ ವೆಚ್ಚ. ಹೃದಯ ಸಂಬಂಧಿ ಸಮಸ್ಯೆ ಇರುವವರು ಎಚ್ಚರ. ಜಿಮ್ ತರಬೇತುದಾರರಿಗೆ ಧನ ಲಾಭ. ಶುಭಸಂಖ್ಯೆ: 7

ಸಿಂಹ: ಶಿಕ್ಷಣ ಇಲಾಖೆಯ ನೌಕರರಿಗೆ ಬಡ್ತಿ. ನಿರ್ಧಾರಕ್ಕೆ ಇದ್ದ ಗೊಂದಲ ನಿವಾರಣೆ. ಅಪರಿಚಿತರೊಂದಿಗೆ ಜಾಗ್ರತೆಯಿಂದ ವ್ಯವಹರಿಸಿ. ಶುಭಸಂಖ್ಯೆ: 6

ಕನ್ಯಾ: ಒತ್ತಡದ ನಡುವೆಯೂ ಪ್ರಗತಿ. ಆತುರದಿಂದ ವಿವಾಹದ ನಿರ್ಧಾರ ತೆಗೆದುಕೊಳ್ಳಬೇಡಿ. ದವಸ ಧಾನ್ಯ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 8

ತುಲಾ: ನನೆಗುದಿಗೆ ಬಿದ್ದ ಕೆಲಸ ಪ್ರಾರಂಭ. ಸಾರ್ವಜನಿಕ ಜೀವನದಲ್ಲಿ ಹೆಸರು ಗಳಿಸುವಿರಿ. ಕೋರ್ಟ್ ವ್ಯವಹಾರದಲ್ಲಿ ವಿಳಂಬ. ಶುಭಸಂಖ್ಯೆ: 9

ವೃಶ್ಚಿಕ: ಹಿತ ಶತ್ರುಗಳ ಮೇಲೆ ಹಿಡಿತ ಸಾಧಿಸುವಿರಿ. ಗೃಹ ನಿರ್ವಣಕ್ಕೆ ಆರಂಭ. ವಿದೇಶದಲ್ಲಿರುವ ಮಕ್ಕಳಿಂದ ಶುಭ ಸಮಾಚಾರ. ಶುಭಸಂಖ್ಯೆ: 4

ಧನಸ್ಸು: ಸಾರಿಗೆ ಇಲಾಖೆಯಲ್ಲಿ ಉದ್ಯೋಗ ಸಿಗಬಹುದು. ವಿದೇಶದಲ್ಲಿ ಹೋಟೆಲ್ ಉದ್ಯಮದ ವಿಸ್ತರಿಸುವಿರಿ. ಆಸ್ತಿ ವಿವಾದ ವಿಳಂಬ. ಶುಭಸಂಖ್ಯೆ: 3

ಮಕರ: ಜೋಳ, ರಾಗಿ ಬೆಳೆಗಾರರಿಗೆ ಆರ್ಥಿಕ ನೆರವು ಸಿಗಲಿದೆ. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಲಿದೆ. ತಾಂತ್ರಿಕ ವಿದ್ಯಾರ್ಥಿಗಳಿಗೆ ಶುಭದಿನ. ಶುಭಸಂಖ್ಯೆ: 1

ಕುಂಭ: ಅಧ್ಯಯನಕ್ಕಾಗಿ ವಿದೇಶ ಪ್ರವಾಸದ ಅವಕಾಶ. ಆರ್ಥಿಕ ಮುಗ್ಗಟ್ಟಿನ ನಿವಾರಣೆಗೆ ಸ್ನೇಹಿತರಿಂದ ಸಹಾಯ. ರೇಷ್ಮೆ ಕೃಷಿಕರಿಗೆ ಲಾಭ. ಶುಭಸಂಖ್ಯೆ: 3

ಮೀನ: ಮಾತಿನಲ್ಲಿ ಮಾಧುರ್ಯವಿರಲಿ. ಕೋರ್ಟ್ ಕೆಲಸ ಸುಗಮವಾಗಲಿದೆ. ಸಂಗಾತಿಯ ಸಲಹೆಯಿಂದ ವಿಪತ್ತಿನಿಂದ ಪಾರಾಗುವಿರಿ. ಶುಭಸಂಖ್ಯೆ: 8