ನಿತ್ಯಭವಿಷ್ಯ  
ದಿನ ಭವಿಷ್ಯ

ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಹಣಕಾಸಿನಲ್ಲಿ ಒಳ್ಳೆಯ ಬೆಳವಣಿಗೆ

ಮೇಷ: ಹೊಸ ಜವಾಬ್ದಾರಿ ನಿರ್ವಹಿಸಬೇಕಾಗಬಹುದು. ಪ್ರತಿಭೆಗೆ ಮನ್ನಣೆ ಸಿಗಲಿದೆ. ಆಸ್ತಿ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ಸೂಕ್ತ ಕಾಲ. ಶುಭಸಂಖ್ಯೆ: 9

ವೃಷಭ: ಹಳೇ ಯೋಚನೆಗಳು ಕಾರ್ಯರೂಪಕ್ಕೆ ಬರಲಿವೆ. ಆಹಾರ ಪದಾರ್ಥ ವ್ಯಾಪಾರದಲ್ಲಿ ಲಾಭ. ಮಾತನಾಡುವ ವೇಳೆ ಎಚ್ಚರ. ಶುಭಸಂಖ್ಯೆ:1

ಮಿಥುನ: ನಿಮ್ಮ ಮಾತಿನ ಚಾತುರ್ಯ ಅನೇಕರ ಮನ ಗೆಲ್ಲುತ್ತದೆ. ಹೊಸ ಪರಿಚಯಗಳು ಮುಂದೆ ಒಳ್ಳೇ ಅವಕಾಶಗಳಾಗಿ ತಿರುಗಬಹುದು. ಶುಭಸಂಖ್ಯೆ: 4

ಕಟಕ: ಕುಟುಂಬದಲ್ಲಿ ಸಂತೋಷದ ಕ್ಷಣ. ಕೆಲಸದಿಂದ ಮನಸ್ಸಿಗೆ ಶಾಂತಿ ಸಿಗುವುದು. ಹಣಕಾಸು ವಿಚಾರ ದಲ್ಲಿ ಸಂತೋಷಕರ ಬೆಳವಣಿಗೆ. ಶುಭಸಂಖ್ಯೆ: 7

ಸಿಂಹ: ಆತ್ಮವಿಶ್ವಾಸದಿಂದ ಮಾಡಿದ ಕೆಲಸದಲ್ಲಿ ಜಯ. ಗೃಹ ನಿರ್ವಣಕ್ಕೆ ವೇಗ. ಉದ್ಯೋಗದಲ್ಲಿ ಅಧಿಕಾರಿಗಳಿಂದ ಪ್ರೋತ್ಸಾಹ. ಶುಭಸಂಖ್ಯೆ: 9

ಕನ್ಯಾ: ಕೆಲಸದಲ್ಲಿ ತೊಂದರೆ ಎದುರಾದರೂ ಶಾಂತವಾಗಿ ಪರಿಹಾರ ಮಾರ್ಗ ಹುಡುಕುವಿರಿ. ಹಣದ ವಿಚಾರದಲ್ಲಿ ಅತಿವಿಶ್ವಾಸ ಬೇಡ. ಶುಭಸಂಖ್ಯೆ: 6

ತುಲಾ: ಸೃಜನಾತ್ಮಕ ಚಟುವಟಿಕೆಗಳಲ್ಲಿ ಯಶಸ್ಸು. ಕಚೇರಿ ಮತ್ತು ಮನೆ ಕೆಲಸದಲ್ಲಿ ಸಮತೋಲನ ಕಾಯ್ದು ಕೊಳ್ಳಿ. ಅಧ್ಯಾತ್ಮದತ್ತ ಮನಸ್ಸು. ಶುಭಸಂಖ್ಯೆ: 4

ವೃಶ್ಚಿಕ: ಹಳೆಯ ಸಮಸ್ಯೆಗಳಿಗೆ ಹೊಸ ಪರಿಹಾರ ದೊರೆ ಯುವ ದಿನ. ಉದ್ಯೋಗ ಬದಲಾಯಿಸುವ ಯೋಚನೆ ಮತ್ತೆಮತ್ತೆ ಬರಬಹುದು. ಶುಭಸಂಖ್ಯೆ: 3

ಧನಸ್ಸು: ಪ್ರವಾಸ ಯೋಜನೆಗಳು ಯಶಸ್ವಿಯಾಗುವ ಸಾಧ್ಯತೆ. ಹೊಸ ಕೆಲಸಕ್ಕೆ ಶುಭಾರಂಭ. ಹಣಕಾಸಿನಲ್ಲಿ ಒಳ್ಳೆಯ ಬೆಳವಣಿಗೆ. ಶುಭಸಂಖ್ಯೆ: 8

ಮಕರ: ಆರ್ಥಿಕವಾಗಿ ಉತ್ತಮ ದಿನ. ಉದ್ಯೋಗದಲ್ಲಿ ಮೇಲಧಿಕಾರಿಗಳ ಮೆಚ್ಚುಗೆ. ಮನೆಯ ಕೆಲಸಗಳಲ್ಲಿ ಜವಾಬ್ದಾರಿ ಹೆಚ್ಚಾಗಬಹುದು. ಶುಭಸಂಖ್ಯೆ: 5

ಕುಂಭ: ವಿವಾಹದ ನಿರ್ಧಾರ ತೆಗೆದುಕೊಳ್ಳುವ ಮುನ್ನ ಯೋಚಿಸಿ. ಹೂಡಿಕೆಗೆ ಆತುರದ ನಿರ್ಧಾರ ಬೇಡ. ಧಾರ್ವಿುಕ, ಆಧ್ಯಾತ್ಮಿಕ ಚಿಂತನೆ. ಶುಭಸಂಖ್ಯೆ: 1

ಮೀನ: ಭಾವನಾತ್ಮಕವಾಗಿ ಸೂಕ್ಷ್ಮ ದಿನ. ಹಣಕಾಸಿನಲ್ಲಿ ನಿಧಾನ ಪ್ರಗತಿ. ಮನೆಗೆ ಸಂಬಂಧಿಸಿದ ಕೆಲಸಗಳಲ್ಲಿ ವಿಳಂಬ. ಕಲೆಯಿಂದ ಶಾಂತಿ. ಶುಭಸಂಖ್ಯೆ: 9