ದಿನ ಭವಿಷ್ಯ

ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಸ್ವಪ್ರಯತ್ನದಿಂದ ಕಾರ್ಯ ಕ್ಷೇತ್ರದಲ್ಲಿ ಮುನ್ನಡೆ

ಮೇಷ: ಸ್ವಪ್ರಯತ್ನದಿಂದ ಕಾರ್ಯ ಕ್ಷೇತ್ರದಲ್ಲಿ ಮುನ್ನಡೆ. ಮಕ್ಕಳ ವಿಚಾರವಾಗಿ ವಿವಾದ. ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರ. ಶುಭಸಂಖ್ಯೆ:3

ವೃಷಭ: ಹಳೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ನಿಮ್ಮ ವಿರೋಧಿಗಳು ಸಹ ಕಾರ್ಯಗಳಲ್ಲಿ ಬೆಂಬಲ ಸೂಚಿಸುವರು. ಶುಭಸಂಖ್ಯೆ: 8

ಮಿಥುನ: ಹಿರಿಯರ ಸಲಹೆಗಳಿಂದ ಸಮಸ್ಯೆಗೆ ಪರಿಹಾರ. ಮಕ್ಕಳ ಆರೋಗ್ಯದತ್ತ ಹೆಚ್ಚಿನ ಗಮನ ಅಗತ್ಯ. ಹಣದ ವ್ಯವಹಾರಗಳಲ್ಲಿ ಪ್ರಗತಿ.ಶುಭಸಂಖ್ಯೆ:9

ಕಟಕ: ನಿರ್ಧಾರಗಳನ್ನು ಬದಲಿಸುವ ನಡವಳಿಕೆಯಿಂದಾಗಿ ಕುಟುಂಬದಲ್ಲಿ ಅಸಹನೆ. ಸಿಹಿ ಅಂಗಡಿ ಮಾಲೀಕರಿಗೆ ಲಾಭ ಹೆಚ್ಚುತ್ತದೆ. ಶುಭಸಂಖ್ಯೆ:2

ಸಿಂಹ: ಆರೋಗ್ಯದ ವಿಚಾರದಲ್ಲಿ ಆತುರದ ನಿರ್ಧಾರ ಬೇಡ. ಮಹಿಳೆಯರಿಗೆ ವ್ಯವಹಾರದಲ್ಲಿ ತೃಪ್ತಿ. ಸಾಮಾಜಿಕ ಕಾರ್ಯದಲ್ಲಿ ಭಾಗಿ. ಶುಭಸಂಖ್ಯೆ: 2

ಕನ್ಯಾ: ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ ಹೋಗಲಾಡಿಸಿ ಕೊಳ್ಳಿ. ಸಾಲ ಮರುಪಾವತಿ ಮಾಡುವಿರಿ. ಪಿತ್ರಾರ್ಜಿತ ಆಸ್ತಿ ವಿವಾದ ಇತ್ಯರ್ಥ. ಶುಭಸಂಖ್ಯೆ: 6

ತುಲಾ: ಸಂಪನ್ಮೂಲ ಕ್ರೋಡೀಕರಿಸುವ ಪ್ರಯತ್ನ ಫಲ ನೀಡಲಿದೆ. ಸ್ವಯಂ ಉದ್ಯೋಗ ಮಾಡುವವರಿಗೆ ಉತ್ತಮ ಆದಾಯ ಹೆಚ್ಚುತ್ತದೆ.ಶುಭಸಂಖ್ಯೆ: 6

ವೃಶ್ಚಿಕ: ಅನಿರೀಕ್ಷಿತ ಮೂಲಗಳಿಂದ ಆರ್ಥಿಕ ಸಹಾಯ ಒದಗುವ ಸಾಧ್ಯತೆ ಇದೆ. ಬಾಹ್ಯಾಕಾಶ ಸಂಸ್ಥೆ ಉದ್ಯೋಗಿಗಳಿಗೆ ವರ್ಗಾವಣೆ. ಶುಭಸಂಖ್ಯೆ: 8

ಧನಸ್ಸು: ಕಚೇರಿಯಲ್ಲಿ ಸಮಾಧಾನ ಚಿತ್ತದಿಂದ ವ್ಯವಹರಿಸಿರಿ. ಬ್ಯಾಂಕ್ ವ್ಯವಹಾರ ನಡೆಸುವವರಿಗೆ ವ್ಯವಹಾರದಲ್ಲಿ ಮುನ್ನಡೆ ಇರುತ್ತದೆ. ಶುಭಸಂಖ್ಯೆ: 1

ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಆಂತರಿಕ ಗೊಂದಲ ನಿವಾರಣೆ. ಹಣಕಾಸಿನ ವಿಷಯದಲ್ಲಿ ಜಾಗರೂಕತೆ ಇರುವುದು ಅಗತ್ಯ. ಶುಭಸಂಖ್ಯೆ: 7

ಕುಂಭ: ಕೃಷಿ ಯಂತ್ರ ಹೊಂದಿರುವವರಿಗೆ ಹೆಚ್ಚಿನ ಆದಾಯ ಇದೆ. ಪ್ರೇಮಿಗಳಿಗೆ ಹಿನ್ನಡೆ .ರಿಯಲ್ ಎಸ್ಟೇಟ್ ವ್ಯವಹಾರದವರಿಗೆ ಮುನ್ನಡೆ. ಶುಭಸಂಖ್ಯೆ: 9

ಮೀನ: ಸಾಮರ್ಥ್ಯಕ್ಕೆ ಸರಿಯಾದ ಕೆಲಸ ಸಿಗಲಿದೆ . ಪೊಲೀಸ್ ವೃತ್ತಿ ಯಲ್ಲಿ ಬಯಸಿದ್ದ ಸ್ಥಳಕ್ಕೆ ವರ್ಗಾವಣೆ ದೊರೆಯುವ ಸಾಧ್ಯತೆ ಇದೆ. ಶುಭಸಂಖ್ಯೆ: 3