ಮೇಷ: ಹತಾಶೆ ಆರೋಗ್ಯದ ಮೇಲೆ ಪರಿಣಾಮ ಬೀರೀತು. ಸಕಾರಾತ್ಮಕವಾಗಿ ಯೋಚಿಸಿ. ಅಮೂಲ್ಯ ವಸ್ತುಗಳ ಖರೀದಿ ಯೋಗವಿದೆ. ಶುಭಸಂಖ್ಯೆ: 5
ವೃಷಭ: ಮಾಡುವ ವ್ಯಾಪಾರದಲ್ಲಿ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಸಂಬಂಧಪಡದ ವ್ಯವಹಾರದಲ್ಲಿ ತಲೆ ತೂರಿಸಬೇಡಿ. ಶುಭಸಂಖ್ಯೆ:1
ಮಿಥುನ: ಸ್ವಂತ ಉದ್ಯಮದಲ್ಲಿ ಆಸಕ್ತಿ ತಾಳುವಿರಿ. ಖರ್ಚಿನ ಮೇಲೆ ನಿಯಂತ್ರಣವಿರಲಿ. ಪದವಿ ಪ್ರಾಪ್ತಿಯಲ್ಲಿದ್ದ ನಿರ್ಬಂಧ ನಿವಾರಣೆ. ಶುಭಸಂಖ್ಯೆ:6
ಕಟಕ: ಕೌಟುಂಬಿಕ ಗೊಂದಲ ಪರಿಹಾರ. ಸ್ನೇಹಿತರೊಂದಿಗಿದ್ದ ಹಳೆಯ ಜಗಳ ಬಗೆಹರಿಸಿಕೊಳ್ಳಿ. ಹೂ-ಹಣ್ಣು ಮಾರಾಟದಲ್ಲಿ ಲಾಭ. ಶುಭಸಂಖ್ಯೆ:7
ಸಿಂಹ: ಮಾನಸಿಕ ಶಾಂತಿಗಾಗಿ ಕುಲದೇವತಾ ಪ್ರಾರ್ಥನೆ ಮಾಡುವುದು ಸೂಕ್ತ. ಅಲಂಕಾರಿಕ ವಸ್ತುಗಳ ವ್ಯಾಪಾರದಲ್ಲಿ ನಿರೀಕ್ಷಿತ ಲಾಭ. ಶುಭಸಂಖ್ಯೆ:1
ಕನ್ಯಾ: ಆಟೋಟ ಸ್ಪರ್ಧೆಯಲ್ಲಿ ಸಕಾರಾತ್ಮಕ ಫಲಿತಾಂಶ. ಸಂಗೀತಗಾರರಿಗೆ ವಿದೇಶಪ್ರವಾಸ ಯೋಗ. ಪಾಲುದಾರಿಕೆಯಲ್ಲಿ ಅಧಿಕ ಲಾಭ. ಶುಭಸಂಖ್ಯೆ:3
ತುಲಾ: ಮಗಳಿಗೆ ವಿವಾಹದ ಪ್ರಸ್ತಾಪಗಳು ಬರುವ ಸಾಧ್ಯತೆ. ಹೊಸ ಕೆಲಸದ ಕಡೆಗೆ ಗಮನವಿರಲಿ. ಗೃಹ ನಿರ್ಮಾಣದ ಆಸೆ ಈಡೇರಲಿದೆ. ಶುಭಸಂಖ್ಯೆ:2
ವೃಶ್ಚಿಕ: ಆಕರ್ಷಕ ವ್ಯಕ್ತಿತ್ವದಿಂದ ಗಮನ ಸೆಳೆಯುವಿರಿ. ಸಂವಹನ ಕೌಶಲದಿಂದ ಕಾರ್ಯ ಸಿದ್ಧಿ. ಔಷಧ ವ್ಯಾಪಾರ ಮಳಿಗೆಯವರಿಗೆ ಲಾಭ. ಶುಭಸಂಖ್ಯೆ: 9
ಧನಸ್ಸು: ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ. ಸಹೋದ್ಯೋಗಿಗಳ ಮೇಲೆ ಅನಗತ್ಯ ಒತ್ತಡ ಹೇರಬೇಡಿ. ದಾಂಪತ್ಯದಲ್ಲಿ ಪ್ರಮುಖ ಬದಲಾವಣೆ. ಶುಭಸಂಖ್ಯೆ: 7
ಮಕರ: ದೀರ್ಘಕಾಲದ ವ್ಯಾಯಾಮದಿಂದ ಆರೋಗ್ಯ ಸುಧಾರಣೆ. ಮಗನ ವಿವಾಹ ವಿಷಯದಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಿರಿ.ಶುಭಸಂಖ್ಯೆ:1
ಕುಂಭ: ಹೂಡಿಕೆಗೆ ಸಂಬಂಧಿಸಿದ ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸಲು ಸರಿಯಾದ ಸಮಯ. ರಫ್ತು ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ:6
ಮೀನ: ಹೊಸ ವ್ಯಾಪಾರದಲ್ಲಿ ಬದಲಾವಣೆಯ ದಿನ. ಕುಟುಂಬದೊಂದಿಗೆ ಸಮಯ ಕಳೆಯುವುದರಿಂದ ಒತ್ತಡ ನಿವಾರಣೆಯಾಗಲಿದೆ. ಶುಭಸಂಖ್ಯೆ: 3