ದಿನ ಭವಿಷ್ಯ

ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಸರ್ಕಾರಿ ಕೆಲಸಗಳಲ್ಲಿ ಯಶಸ್ಸು

ಮೇಷ: ದೀರ್ಘಕಾಲದ ಅನಾರೋಗ್ಯದಿಂದ ಚೇತರಿಕೆ. ಕೋರ್ಟ್ ಕಚೇರಿ ವ್ಯವಹಾರದಲ್ಲಿ ಅಭಿವೃದ್ಧಿ. ಉದ್ಯೋಗ ಬದಲಾವಣೆ ಸಾಧ್ಯತೆ. ಶುಭಸಂಖ್ಯೆ: 8

ವೃಷಭ: ತಾಂತ್ರಿಕ -ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಭ ಸುದ್ದಿ. ಬಾಡಿಗೆ ವಾಹನ ಚಾಲನೆಯಲ್ಲಿ ಸಮಸ್ಯೆ. ಮಹಿಳೆಯರಿಗೆ ಆಭರಣ ಲಾಭ. ಶುಭಸಂಖ್ಯೆ: 9

ಮಿಥುನ: ಕುಟುಂಬದೊಂದಿಗೆ ತೀರ್ಥಯಾತ್ರೆಯ ಯೋಗ. ಹಿತಶತ್ರುಗಳನ್ನು ನಿಗ್ರಹಿಸುವ ಶಕ್ತಿ ಬರುತ್ತದೆ. ಸಹೋದರರಿಂದ ಸಹಕಾರ. ಶುಭಸಂಖ್ಯೆ:2

ಕಟಕ: ಅಮೂಲ್ಯವಾದ ವಸ್ತುಗಳ ಮಾರಾಟದಲ್ಲಿ ಲಾಭ. ಪತ್ನಿಗೆ ಅನಾರೋಗ್ಯ ಸಮಸ್ಯೆ ಕಾಡಲಿದೆ. ರೇಷ್ಮೆ ಬೆಳಗಾರರಿಗೆ ಅಧಿಕ ಲಾಭ. ಶುಭಸಂಖ್ಯೆ: 4

ಸಿಂಹ: ಹೋಟೆಲ್ ವ್ಯವಹಾರದಲ್ಲಿ ಹಣಕಾಸಿನ ಮುಗ್ಗಟ್ಟು. ಕುಟುಂಬದ ಆಸ್ತಿ ವಿಚಾರದಲ್ಲಿ ಮನಸ್ತಾಪ. ಸಂಬಂಧಿಗಳಿಂದ ಸಹಾಯ. ಶುಭಸಂಖ್ಯೆ:3

ಕನ್ಯಾ: ಪತ್ನಿಗೆ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಲಭ್ಯ. ತರಕಾರಿ, ಹಣ್ಣು ಮಾರಾಟದಲ್ಲಿ ಲಾಭ. ಸಣ್ಣಪುಟ್ಟ ಶಾರೀರಿಕ ಗಾಯವಾದೀತು. ಶುಭಸಂಖ್ಯೆ:4

ತುಲಾ: ಸಂಗಾತಿಯ ಆರೋಗ್ಯ ಚೇತರಿಕೆ. ಎಲ್ಲ ಕೆಲಸಕ್ಕೂ ವಿಘ್ನಗಳು ಪದೇಪದೆ ಬರಲಿವೆ. ಯುವಕರಿಗೆ ಸಾಹಸ ಕಾರ್ಯದಲ್ಲಿ ಆಸಕ್ತಿ. ಶುಭಸಂಖ್ಯೆ:2

ವೃಶ್ಚಿಕ: ತಲೆನೋವಿನಿಂದ ಮುಕ್ತಿ. ಬದಲಾದ ಪರಿಸ್ಥಿತಿಯಿಂದ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಉನ್ನತ ವಿದ್ಯೆ ಅಭ್ಯಾಸದ ಕನಸು ನನಸು. ಶುಭಸಂಖ್ಯೆ:6

ಧನಸ್ಸು: ಸರ್ಕಾರಿ ಕೆಲಸಗಳಲ್ಲಿ ಯಶಸ್ಸು, ನೆರೆಹೊರೆಯವರಿಂದ ಸಹಾಯ. ದುಡುಕಿನ ನಿರ್ಧಾರದಿಂದ ಪೇಚಿಗೆ ಸಿಲುಕಿ ಹಾಕಿಕೊಳ್ಳುವಿರಿ. ಶುಭಸಂಖ್ಯೆ:9

ಮಕರ: ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಸಹೋದರರೊಂದಿಗೆ ರ್ಚಚಿಸಿ. ಮನೆಯ ಕ್ರಯ ವಿಕ್ರಯ ವ್ಯವಹಾರದಲ್ಲಿ ಅಧಿಕ ಲಾಭವಿದೆ. ಶುಭಸಂಖ್ಯೆ:4

ಕುಂಭ: ಪ್ರಭಾವಿಗಳ ಸಂಪರ್ಕ. ಧಾರ್ವಿುಕ ಕಾರ್ಯದಲ್ಲಿ ಮನಃಶಾಂತಿ ಕಾಣುವಿರಿ. ಅರ್ಧದಲ್ಲಿ ನಿಂತ ಕಾರ್ಯ ಮುಂದುವರಿಯುವುದು. ಶುಭಸಂಖ್ಯೆ:2

ಮೀನ: ಸ್ನೇಹಿತರೊಂದಿಗೆ ಪ್ರವಾಸ ಹೋಗುವಿರಿ. ಹೊಸದಾಗಿ ವ್ಯವಹಾರದಲ್ಲಿ ಉತ್ತಮ ಲಾಭ. ಮಕ್ಕಳೊಂದಿಗೆ ಸಮಯ ಕಳೆಯುವಿರಿ. ಶುಭಸಂಖ್ಯೆ: 3