ಮೇಷ: ಕುಸುರಿ ವಸ್ತು ಮಾರಾಟಗಾರರಿಗೆ ಲಾಭ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಶ್ರಮದಿಂದ ಯಶಸ್ಸು. ಹಿರಿಯರ ಆರೋಗ್ಯಕ್ಕಾಗಿ ವ್ಯಯ. ಶುಭಸಂಖ್ಯೆ: 6
ವೃಷಭ: ಸ್ನೇಹಿತರ ಮನೆಯ ಧಾರ್ವಿುಕ ಸಮಾರಂಭದಲ್ಲಿ ಭಾಗಿಯಾಗುವಿರಿ. ಕಾನೂನು ವಿಚಾರದಲ್ಲಿ ಜಯ. ವೃತ್ತಿ ನಿಮಿತ್ತ ಪ್ರಯಾಣ. ಶುಭಸಂಖ್ಯೆ:3
ಮಿಥುನ: ಕರಕುಶಲ ವಸ್ತುಗಳಿಂದ ಲಾಭ. ಕೋರ್ಟ್ ದಾವೆಗಳಲ್ಲಿ ಅಪಜಯ. ಸಾಲ ಮರುಪಾವತಿಸಲು ಸುಸಮಯ ಕೂಡಿ ಬರಲಿದೆ. ಶುಭಸಂಖ್ಯೆ: 2
ಕಟಕ: ಮೂಳೆಯ ತಜ್ಞರಿಗೆ ಬೇಡಿಕೆ. ಐಟಿ ಕ್ಷೇತ್ರದ ಪದವೀಧರರಿಗೆ ಕೃಷಿಯ ಕಡೆ ಆಸಕ್ತಿ. ನಿಸ್ವಾರ್ಥ ಸೇವೆಗಳಿಂದ ಯಶಸ್ಸು, ಗೌರವ. ಶುಭಸಂಖ್ಯೆ:4
ಸಿಂಹ: ಸರ್ಕಾರಿ ನೌಕರರಿಗೆ ಒತ್ತಡ. ಹೊಸ ಯೋಜನೆ ಆರಂಭಕ್ಕೆ ಶುಭದಿನ. ವಿದ್ಯಾರ್ಥಿಗಳು ಶ್ರಮವಹಿಸಿದರೆ ನಿರೀಕ್ಷೆಗೂ ಮೀರಿ ಫಲ. ಶುಭಸಂಖ್ಯೆ:4
ಕನ್ಯಾ: ಬೆಂಕಿಯಿಂದ ಎಚ್ಚರ. ಎಲೆಕ್ಟ್ರಾನಿಕ್ಸ್ ಉಪಕರಣಗಳ ವ್ಯಾಪಾರದಲ್ಲಿ ಅಭಿವೃದ್ಧಿ. ಸಂಗಾತಿಯ ವಿದೇಶ ಯಾತ್ರೆಯ ಕನಸು ನನಸು. ಶುಭಸಂಖ್ಯೆ:8
ತುಲಾ: ಹೊಸ ವಸ್ತುಗಳನ್ನು ಖರೀದಿಸುವ ಸಮಯ. ಗುರು ಹಿರಿಯರಿಂದ ಆಶೀರ್ವಾದ ಸಿಗುವುದು.ಎಲೆಕ್ಟ್ರಾನಿಕ್ಸ್ ತಂತ್ರಜ್ಞರಿಗೆ ಬೇಡಿಕೆ. ಶುಭಸಂಖ್ಯೆ:4
ವೃಶ್ಚಿಕ: ಕಠೋರ ಮಾತುಗಳು ಬೇಡ. ಆಪ್ತ ಸಲಹೆಗಾರರಿಗೆ ಬೇಡಿಕೆ ಹೆಚ್ಚಾಗಲಿದೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೆಚ್ಚು ಆದಾಯ. ಶುಭಸಂಖ್ಯೆ:1
ಧನಸ್ಸು: ಕಾರ್ಖಾನೆ ಮಾಲೀಕರಿಗೆ ವಿಶೇಷ ದಿನ. ಷೇರು ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಲಾಭ. ಆಹಾರ ಉತ್ಪನ್ನಗಳ ಮಾರಾಟದಲ್ಲಿ ಲಾಭ. ಶುಭಸಂಖ್ಯೆ:9
ಮಕರ: ಆಸ್ತಿ ಸಮಸ್ಯೆಗೆ ಮುಕ್ತಿ. ಚಿಕ್ಕ ಪುಟ್ಟ ವ್ಯವಹಾರದಿಂದ ಲಾಭಗಳಿಸುವಿರಿ. ವಿವಾಹ ಸಮಸ್ಯೆ ಹಿರಿಯರ ಮಧ್ಯಸ್ಥಿಕೆಯಿಂದ ಇತ್ಯರ್ಥ. ಶುಭಸಂಖ್ಯೆ: 3
ಕುಂಭ: ಆತ್ಮೀಯ ಸ್ನೇಹಿತರ ಭೇಟಿ. ಪಾಲುದಾರಿಕೆಯಲ್ಲಿ ಲಾಭ. ವಾಣಿಜ್ಯ ವಿದ್ಯಾರ್ಥಿಗಳಿಗೆ ಪ್ರಗತಿ. ವಾಹನ ದುರಸ್ತಿಗೆ ಹಣ ವ್ಯಯ. ಶುಭಸಂಖ್ಯೆ:8
ಮೀನ: ವ್ಯವಹಾರಗಳ ಮಧ್ಯವರ್ತಿಗೆ ಶುಭ. ಗೃಹಾಲಂಕಾರ ವಸ್ತುಗಳ ಖರೀದಿ. ಪಾಲುದಾರಿಕೆ ವ್ಯವಹಾರದಲ್ಲಿ ಮಹಿಳೆಯರಿಗೆ ಯಶಸ್ಸು. ಶುಭಸಂಖ್ಯೆ: 7