ಮೇಷ: ಅರಣ್ಯ ನೌಕರರಿಗೆ ವರ್ಗಾವಣೆ. ಸಾಲ ತೀರಿಸುವ ಚಿಂತೆ ಪರಿಹಾರ. ಸಾರ್ವಜನಿಕವಾಗಿ ಮಾತಿನಿಂದ ಕಾರ್ಯ ಸಾಧನೆ. ಶುಭಸಂಖ್ಯೆ: 5
ವೃಷಭ: ಚಿಕ್ಕಪುಟ್ಟ ಶಸ್ತ್ರಚಿಕಿತ್ಸೆ ಸಾಧ್ಯತೆ. ಸ್ವಂತ ವ್ಯಾಪಾರದಲ್ಲಿ ಹಣ ಗಳಿಕೆ ಹೆಚ್ಚಲಿದೆ. ಮಕ್ಕಳಿಗಾಗಿ ಅನವಶ್ಯಕ ಖರ್ಚು ಆದೀತು. ಶುಭಸಂಖ್ಯೆ: 9
ಮಿಥುನ: ಕಾನೂನು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಮುನ್ನಡೆ. ಬಂಧುಗಳಿಂದ ಮಗಳ ವಿವಾಹಕ್ಕೆ ಸಹಾಯ. ಕಚೇರಿಯಲ್ಲಿ ಒತ್ತಡ. ಶುಭಸಂಖ್ಯೆ: 6
ಕಟಕ: ಅರಣ್ಯ ಉತ್ಪನ್ನಗಳ ವಸ್ತುಗಳಿಂದ ಲಾಭ. ಆರ್ಥಿಕ ಒತ್ತಡ ನಿಭಾಯಿಸಲು ಮಾರ್ಗ ಸಿಗಲಿದೆ. ವಿದೇಶ ಪ್ರವಾಸದ ಕನಸಿನ ಸಾಕಾರ. ಶುಭಸಂಖ್ಯೆ: 4
ಸಿಂಹ: ಆರೋಗ್ಯ ವ್ಯತ್ಯಾಸದಿಂದ ಚೇತರಿಸಿಕೊಳ್ಳುವಿರಿ. ರೇಷ್ಮೆ ಬಟ್ಟೆ ಖರೀದಿಯಲ್ಲಿ ಲಾಭ. ಶಿಕ್ಷಕ ವೃತ್ತಿಗೆ ಆಯ್ಕೆಯಾಗುವ ಸಾಧ್ಯತೆ. ಶುಭಸಂಖ್ಯೆ: 2
ಕನ್ಯಾ: ದೊಡ್ಡ ಉದ್ದಿಮೆದಾರರಿಗೆ ವಿದೇಶದಲ್ಲಿ ಸನ್ಮಾನ. ಮಾತಿನಿಂದ ಹೆಸರು ಗಳಿಸುವಿರಿ. ಪ್ರಯಾಣದಲ್ಲಿ ಹಳೆಯ ಸ್ನೇಹಿತನ ಭೇಟಿ. ಶುಭಸಂಖ್ಯೆ: 7
ತುಲಾ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಮುನ್ನಡೆ. ಹಿರಿಯ ಅಧಿಕಾರಿಗಳಿಂದ ಉದ್ಯೋಗ ಸ್ಥಿರತೆಯ ಭರವಸೆ. ದುಶ್ಚಟಕ್ಕೆ ವೆಚ್ಚ. ಶುಭಸಂಖ್ಯೆ: 1
ವೃಶ್ಚಿಕ: ಸಂಗಾತಿಯಿಂದ ವ್ಯಾಪಾರ ಅಭಿವೃದ್ಧಿಗೆ ಸಲಹೆ. ಧಾರ್ಮಿಕ ಆಲೋಚನೆ ಕಾರ್ಯಗತ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ. ಶುಭಸಂಖ್ಯೆ: 8
ಧನಸ್ಸು: ಸ್ನೇಹಿತನಿಂದ ಮನೆಯ ನವೀಕರಣಕ್ಕೆ ಸಹಕಾರ. ಐಟಿ ಉದ್ಯೋಗಿಗಳಿಗೆ ದೂರದೂರಿಗೆ ವರ್ಗಾವಣೆ. ಕಲಾವಿದರಿಗೆ ಪುರಸ್ಕಾರ. ಶುಭಸಂಖ್ಯೆ: 1
ಮಕರ: ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಾಣುವುದು. ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುವಿರಿ. ಸಗಟು ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 3
ಕುಂಭ: ಸ್ಥಿರಾಸ್ತಿಯಿಂದ ಆದಾಯ ಹೆಚ್ಚಲಿದೆ. ಮಾನಸಿಕವಾಗಿ ದೃಢವಾಗುವಿರಿ. ದಾಂಪತ್ಯದಲ್ಲಿ ಸಮಸ್ಯೆ. ಬಾಳೆ ಕೃಷಿಕರಿಗೆ ಅನುಕೂಲ. ಶುಭಸಂಖ್ಯೆ: 5
ಮೀನ: ಹೋಟೆಲ್ ಉದ್ಯಮದಲ್ಲಿ ಅಭಿವೃದ್ಧಿ. ಸಂಬಂಧಪಡದ ವಿಷಯದಲ್ಲಿ ತಲೆ ತೂರಿಸಬೇಡಿ. ಉನ್ನತ ಸ್ಥಾನದ ಪರೀಕ್ಷೆಯಲ್ಲಿ ತೇರ್ಗಡೆ. ಶುಭಸಂಖ್ಯೆ: 7