ಮೇಷ: ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಮುತ್ತು ರತ್ನಗಳ ವ್ಯಾಪಾರಸ್ಥರಿಗೆ ಬೇಡಿಕೆ, ರೇಷ್ಮೆ ಬೆಳೆಗಾರರಿಗೆ ಗಳಿಕೆ ಹೆಚ್ಚಲಿದೆ. ಶುಭಸಂಖ್ಯೆ: 9
ವೃಷಭ: ತಾಂತ್ರಿಕ ಪದವೀಧರರಿಗೆ ಕೃಷಿಯ ಕಡೆ ಒಲವು, ಮಹಿಳಾ ವೈದ್ಯರಿಗೆ ವಿಶೇಷ ದಿನ. ಬ್ಯಾಂಕಿಂಗ್ ಸಂಸ್ಥೆಗಳಿಗೆ ಆದಾಯ. ಶುಭಸಂಖ್ಯೆ: 5
ಮಿಥುನ: ರಿಯಲ್ ಎಸ್ಟೇಟ್ನಲ್ಲಿ ಅಭಿವೃದ್ಧಿಯಾಗಲಿದೆ. ವಾಹನ ಚಾಲಕರಿಗೆ ಲಾಭವಾಗುವುದು. ವಿವಾಹಕ್ಕೆ ಕಂಕಣ ಕೂಡಿಬರಲಿದೆ. ಶುಭಸಂಖ್ಯೆ:2
ಕಟಕ: ಸಮಾಜಸೇವೆಯಿಂದ ಜನ ಮನ್ನಣೆ ಗಳಿಸುವಿರಿ. ಮಕ್ಕಳ ಆರೋಗ್ಯದಲ್ಲಿ ಸುಧಾರಣೆ. ರಾಜಕೀಯ ಕ್ಷೇತ್ರದಲ್ಲಿ ಅನಿರೀಕ್ಷಿತ ಘಟನೆ. ಶುಭಸಂಖ್ಯೆ: 9
ಸಿಂಹ: ಚರ್ಮವ್ಯಾಧಿ ಗುಣಮುಖವಾಗಲು ಸೂಕ್ತ ಚಿಕಿತ್ಸೆ. ಚಲನಚಿತ್ರ ಹಾಡುಗಾರರಿಗೆ ಉತ್ತಮ ಅವಕಾಶ, ಹಣ ಹೂಡಿಕೆಗೆ ಸುಸಮಯ. ಶುಭಸಂಖ್ಯೆ: 4
ಕನ್ಯಾ: ದಿನಸಿ, ಧಾನ್ಯಗಳ ವ್ಯಾಪಾರಿಗಳಿಗೆ ಆದಾಯ. ರೈತರ ಫಸಲಿಗೆ ಬೇಡಿಕೆ. ಉದ್ಯಮಿ ಮಹಿಳೆಯರ ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ. ಶುಭಸಂಖ್ಯೆ: 8
ತುಲಾ: ಕಬ್ಬಿಣ, ಮರಳು ಮಾರಾಟಸ್ಥರಿಗೆ ಆದಾಯ, ವಿದ್ಯುತ್ ಇಲಾಖೆ ಕಾರ್ಮಿಕರಿಗೆ ವೇತನ ಹೆಚ್ಚಳ. ಹಳೆಯ ವಸ್ತು ಸಂಗ್ರಹದಲ್ಲಿ ಆಸಕ್ತಿ. ಶುಭಸಂಖ್ಯೆ: 4
ವೃಶ್ಚಿಕ: ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆಯಾಗಿ ಸಂತಸ. ಜಾಹೀರಾತು ಸಂಸ್ಥೆಗಳಿಗೆ ಲಾಭ. ವಿದೇಶಿವಸ್ತು ಉತ್ಪಾದಕರಿಗೆ ಬೇಡಿಕೆ. ಶುಭಸಂಖ್ಯೆ: 7
ಧನಸ್ಸು: ಮುತ್ತು & ರತ್ನ ಮಾರಾಟಗಾರರಿಗೆ ಬೇಡಿಕೆ. ನಾಟ್ಯ ಶಿಕ್ಷಕರಿಗೆ ವಿದೇಶ ಪ್ರಯಾಣ. ಕಾನೂನು ವಿದ್ಯಾರ್ಥಿಗಳಿಗೆ ಅನುಕೂಲ. ಶುಭಸಂಖ್ಯೆ:6
ಮಕರ: ಪಾಲುದಾರಿಕೆಯಲ್ಲಿ ಹೊಂದಾಣಿಕೆಯ ಸಮಸ್ಯೆ. ಆರೋಗ್ಯ ಕ್ಷೇತ್ರದಲ್ಲಿ ಉದ್ಯೋಗ. ಸಣ್ಣ ಕೈಗಾರಿಕೆಗಳ ಪ್ರಾರಂಭಕ್ಕೆ ಸುಸಮಯ. ಶುಭಸಂಖ್ಯೆ: 7
ಕುಂಭ: ಉನ್ನತ ವಿದ್ಯಾಭ್ಯಾಸಕ್ಕಾಗಿ ಅನಿರೀಕ್ಷಿತವಾಗಿ ವಿದೇಶಕ್ಕೆ ಹೋಗುವ ಸಂದರ್ಭ. ಕುಟುಂಬ ಸಮೇತ ದೇವಾಲಯಗಳಿಗೆ ಭೇಟಿ. ಶುಭಸಂಖ್ಯೆ:2
ಮೀನ: ಆಸ್ತಿ ವಿಚಾರದಲ್ಲಿ ದುಡುಕಿನ ನಿರ್ಧಾರ ಬೇಡ. ಕುಶಲಕರ್ಮಿಕರಿಗೆ ಬೇಡಿಕೆ. ಕೇಂದ್ರ ಸರ್ಕಾರಿ ನೌಕರರಿಗೆ ವರ್ಗಾವಣೆ ಸಾಧ್ಯತೆ. ಶುಭಸಂಖ್ಯೆ: 8