ಸಾಂದರ್ಭಿಕ ಚಿತ್ರ  
ದಿನ ಭವಿಷ್ಯ

ನಿತ್ಯಭವಿಷ್ಯ; ಈ ರಾಶಿಯವರಿಂದು ತಮ್ಮಿಷ್ಟದ ವಸ್ತುಗಳನ್ನು ಖರೀದಿ ಮಾಡಲಿದ್ದಾರೆ

ಮೇಷ: ವಿರೋಧಿಗಳನ್ನು ಮಟ್ಟ ಹಾಕುವಿರಿ. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಪುಣ್ಯಕ್ಷೇತ್ರ ದರ್ಶನ ಮಾಡುವಿರಿ. ಶುಭಸಂಖ್ಯೆ: 6
ವೃಷಭ: ಬಟ್ಟೆ ವ್ಯಾಪಾರಿಗಳಿಗೆ ಧನಾಗಮನ. ಟ್ರಾವೆಲ್ಸ್ನವರಿಗೆ ಚಾಲಕರ ಅಭಾವ ಕಾಡಲಿದೆ. ಹಿರಿಯರಿಂದ ಹಿತನುಡಿ ಕೇಳುವಿರಿ. ಶುಭಸಂಖ್ಯೆ: 7
ಮಿಥುನ: ಬೃಹತ್ ವಾಹನ ಖರೀದಿಸುವ ಯೋಗವಿದೆ. ಅಮೂಲ್ಯ ವಸ್ತುಗಳ ಸಂಗ್ರಹ. ನಾಟ್ಯ ತರಬೇತುದಾರರಿಗೆ ಬೇಡಿಕೆ ಹೆಚ್ಚಲಿದೆ. ಶುಭಸಂಖ್ಯೆ: 7
ಕಟಕ: ಕುಟುಂಬದಲ್ಲಿ ಮಗಳ ಮದುವೆಯ ಸಂಭ್ರಮ. ಗೃಹ ನಿರ್ಮಾಣ ಕಾರ್ಯ ಪ್ರಾರಂಭಿಸುವಿರಿ. ಮಾತಿನ ಮೇಲೆ ಹಿಡಿತ ಅಗತ್ಯ. ಶುಭಸಂಖ್ಯೆ:4
ಸಿಂಹ: ದೃಷ್ಟಿದೋಷದ ತೊಂದರೆ ವಾಸಿಯಾಗಲಿದೆ. ಕೊಟ್ಟ ಹಣ ಸಕಾಲಕ್ಕೆ ತಿರುಗಿ ಬರಲಿದೆ. ಕಾಫಿ ಬೆಳೆಗಾರರಿಗೆ ಲಾಭದಲ್ಲಿ ಏರಿಕೆ. ಶುಭಸಂಖ್ಯೆ:9
ಕನ್ಯಾ: ಮನಸ್ಸಿನ ಗೊಂದಲ ಪರಿಹಾರ. ದಂಡ ಕಟ್ಟುವ ಸಾಧ್ಯತೆ. ಸರ್ಕಾರಿ ಅಧಿಕಾರಿಗಳಿಂದ ಸಹಾಯ. ದುಶ್ಚಟದಿಂದ ದೂರವಿರಿ. ಶುಭಸಂಖ್ಯೆ:6
ತುಲಾ: ಇಷ್ಟ ವಸ್ತುಗಳನ್ನು ಖರೀದಿಸುವಿರಿ. ಭೂಲಾಭ. ಇಷ್ಟಪಟ್ಟು ಕಲಿಯುವ ವಿದ್ಯೆಯಲ್ಲಿ ಅಭಿವೃದ್ಧಿ. ವಿದೇಶ ಪ್ರಯಾಣ. ತಾಳ್ಮೆ ಅಗತ್ಯ. ಶುಭಸಂಖ್ಯೆ:3
ವೃಶ್ಚಿಕ: ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ. ಕುಟುಂಬದ ಸಂಭ್ರಮದಿಂದ ವಂಚಿತರಾಗುವಿರಿ. ಕುಲದೇವರ ದರ್ಶನದಿಂದ ಅನುಕೂಲ. ಶುಭಸಂಖ್ಯೆ:2
ಧನುಸ್ಸು: ತೀರ್ಥ ಕ್ಷೇತ್ರಗಳ ದರ್ಶನ ಮಾಡುವಿರಿ. ಪ್ರಭಾವಿ ವ್ಯಕ್ತಿಗಳ ಸಂಪರ್ಕವಾಗಲಿದೆ. ಗೃಹ ನೋಂದಣಿ ಕೆಲಸದಲ್ಲಿ ಜಯವಾಗಲಿದೆ. ಶುಭಸಂಖ್ಯೆ: 7
ಮಕರ: ಶುಭದಾಯಕ ಸುದ್ದಿ ಕೇಳುವಿರಿ. ಮಾನಸಿಕ ನೆಮ್ಮದಿ. ಸಕಾಲದಲ್ಲಿ ಕೈಗೊಂಡ ಕೆಲಸ ಪೂರ್ಣವಾಗಲಿದೆ. ಕೃಷಿಯಲ್ಲಿ ನಿರೀಕ್ಷಿತ ಲಾಭ. ಶುಭಸಂಖ್ಯೆ: 1
ಕುಂಭ: ಉದ್ಯೋಗಸ್ಥ ಮಹಿಳೆಯರಿಗೆ ವಿಶೇಷ ಲಾಭ. ರಾಜಕೀಯರಂಗದವರಿಗೆ ಮಾತಿನಲ್ಲಿ ಹಿಡಿತವಿರಲಿ. ಅಪರಿಚಿತರಿಂದ ಸಹಾಯ. ಶುಭಸಂಖ್ಯೆ: 1
ಮೀನು: ಕಚೇರಿಯಲ್ಲಿ ಯಾವ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬೇಡಿ. ಸ್ತ್ರೀಯರಿಗೆ ಮನೆಯಲ್ಲಿ ನೆಮ್ಮದಿ. ಅನಗತ್ಯ ಹಸ್ತಕ್ಷೇಪ ಮಾಡಬೇಡಿ. ಶುಭಸಂಖ್ಯೆ: 8