ಮೇಷ: ಹಣಕಾಸಿನ ವಿಚಾರದಲ್ಲಿ ಬುದ್ಧಿವಂತಿಕೆ ನಿರ್ಧಾರ ತೆಗೆದುಕೊಳ್ಳಿ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವ ಆಸೆ ಈಡೇರಲಿವೆ. ಶುಭಸಂಖ್ಯೆ: 4
ವೃಷಭ: ಪೂರ್ವಿಕರ ಆಸ್ತಿಯಿಂದ ಲಾಭ ಆಗಲಿದೆ. ಕಲಾವಿದರಿಗೆ ವಿಶೇಷ ವೇದಿಕೆ ಲಭ್ಯ. ಆನ್ಲೈನ್ ವ್ಯವಹಾರದಲ್ಲಿ ಖರೀದಿಗೆ ಖರ್ಚು. ಶುಭಸಂಖ್ಯೆ: 8
ಮಿಥುನ: ಮಾನಸಿಕ ಒತ್ತಡದಿಂದ ಮುಕ್ತಿ. ಕೆಲಸದ ನಿಮಿತ್ತ ದೂರ ಪ್ರಯಾಣ ಸಾಧ್ಯತೆ. ಶೈಕ್ಷಣಿಕ ಕ್ಷೇತ್ರದ ಉದ್ಯೋಗಿಗಳಿಗೆ ವರ್ಗಾವಣೆ. ಶುಭಸಂಖ್ಯೆ: 7
ಕಟಕ: ಕುಟುಂಬ ಸದಸ್ಯರೊಂದಿಗೆ ವಿಹಾರ. ರಿಯಲ್ ಎಸ್ಟೇಟ್ನಲ್ಲಿ ಯೋಚಿಸಿ ಹೂಡಿಕೆ ಮಾಡಿ. ಸಾಮಾಜಿಕ ಕೆಲಸಗಳಲ್ಲಿ ಭಾಗಿ. ಶುಭಸಂಖ್ಯೆ: 2
ಸಿಂಹ: ಹಣಕಾಸಿನ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಆತ ಭಯದಿಂದ ಬಳಲುವಿರಿ. ವಕೀಲರಿಗೆ ವೃತ್ತಿಯಲ್ಲಿ ಅಭ್ಯುದಯ. ಶುಭಸಂಖ್ಯೆ: 4
ಕನ್ಯಾ: ನಿಮ್ಮ ಪ್ರತಿಭೆ, ಕೌಶಲಕ್ಕೆ ಗೌರವ ಸಿಗಲಿದೆ. ವಿಚ್ಛೇದಿತರಿಗೆ ಮರು ವಿವಾಹ ಸಾಧ್ಯತೆ. ಸಾರಿಗೆ ಕ್ಷೇತ್ರದ ಕಾರ್ಮಿಕರಿಗೆ ಶುಭದಿನ. ಶುಭಸಂಖ್ಯೆ: 1
ತುಲಾ: ಆಸ್ತಿ ಸಂಬಂಧಿತ ನಿರ್ಧಾರದಲ್ಲಿ ಎಚ್ಚರ. ಕೌಟುಂಬಿಕವಾಗಿ ಸಂತೋಷ. ಸಾಮಾಜಿಕ ತಾಣಗಳಲ್ಲಿ ಅಪಾರ ಯಶಸ್ಸು ಸಾಧಿಸುವಿರಿ. ಶುಭಸಂಖ್ಯೆ: 1
ವೃಶ್ಚಿಕ: ಗಂಡನ ಆರೋಗ್ಯ ಸುಧಾರಣೆ. ಹೊಸ ಅವಕಾಶ ಹುಡುಕಿ ಬರಲಿದೆ. ಹರಾಜಿನಲ್ಲಿ ಅಧಿಕ ಲಾಭ. ಕುಟುಂಬದಲ್ಲಿ ಶುಭ ಕಾರ್ಯ. ಶುಭಸಂಖ್ಯೆ: 9
ಧನಸ್ಸು: ಒಡಹುಟ್ಟಿದವರೊಂದಿಗೆ ಪುಣ್ಯಕ್ಷೇತ್ರ ದರ್ಶನ. ಮನೆ ಮಾರಾಟ ಸಾಧ್ಯತೆ. ಹಿರಿಯರ ಮಾರ್ಗದರ್ಶನ. ಪಾಲುದಾರಿಕೆಯಲ್ಲಿ ನಷ್ಟ. ಶುಭಸಂಖ್ಯೆ: 4
ಮಕರ: ಗೃಹೋಪಯೋಗಿ ವಸ್ತುಗಳ ಖರೀದಿಗೆ ಹಣ ವೆಚ್ಚ. ರಣ ಕ್ಷೇತ್ರದವರಿಗೆ ಶುಭದಿನ. ನಂಬಿದವರಿಂದಲೇ ಮೋಸವಾದೀತು. ಶುಭಸಂಖ್ಯೆ: 8
ಕುಂಭ: ಆಲಸ್ಯದಿಂದಾಗಿ ಅವಕಾಶ ವಂಚಿತರಾಗುವಿರಿ. ಮಾರಾಟದಲ್ಲಿ ರೈತರಿಗೆ ಲಾಭ. ರೇಷ್ಮೆ ಕೃಷಿಯಲ್ಲಿ ಪ್ರಗತಿ. ಆಧ್ಯಾತ್ಮಿಕದತ್ತ ಮನಸ್ಸು. ಶುಭಸಂಖ್ಯೆ: 5
ಮೀನ: ಮಹಿಳಾ ಉದ್ಯಮಿಗಳಿಗೆ ಇಂದು ಶುಭದಾಯಕ ದಿನ. ವಿದೇಶದಲ್ಲಿರುವ ಮಕ್ಕಳಿಂದ ಸಂತೋಷ. ನವದಂಪತಿಗಳಿಗೆ ಶುಭ ಸುದ್ದಿ. ಶುಭಸಂಖ್ಯೆ: 2