ಮೇಷ: ಉದ್ಯೋಗ, ವ್ಯವಹಾರ ಕ್ಷೇತ್ರದಲ್ಲಿ ಹೊಸ ಅವಕಾಶ. ಐಟಿ&ಬಿಟಿ ಉದ್ಯೋಗಿಗಳಿಗೆ ಕೆಲಸದ ಒತ್ತಡ ಹೆಚ್ಚಾದರೂ ಉತ್ತಮ ಫಲ. ಶುಭಸಂಖ್ಯೆ: 6
ವೃಷಭ: ಸರ್ಕಾರಿ ಉದ್ಯೋಗಿಗಳಿಗೆ ಗೊಂದಲಮಯ ಸಂದರ್ಭಗಳು ಎದುರಾಗಬಹುದು. ಮಹಿಳಾ ಉದ್ಯಮಿಗಳಿಗೆ ಹೊಸ ಜವಾಬ್ದಾರಿ. ಶುಭಸಂಖ್ಯೆ: 2
ಮಿಥುನ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ. ಐಟಿ&ಬಿಟಿ ಕ್ಷೇತ್ರದಲ್ಲಿ ಹೊಸ ಯೋಜನೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಶುಭಸಂಖ್ಯೆ: 7
ಕಟಕ: ದವಸ ಧಾನ್ಯಗಳ ವ್ಯಾಪಾರಿಗಳಿಗೆ ಸಾಮಾನ್ಯ ಪ್ರಗತಿ. ಕೃಷಿ ಸಂಬಂಧಿತ ಕೆಲಸಗಳಲ್ಲಿ ಸಾಧಾರಣ ಲಾಭ ಬರುವುದು. ಶುಭಸಂಖ್ಯೆ: 6
ಸಿಂಹ: ಉದ್ಯೋಗ ಸ್ಥಳದಲ್ಲಿ ಅಧಿಕಾರಿಗಳ ಮೆಚ್ಚುಗೆ. ವ್ಯಾಪಾರದಲ್ಲಿ ಹೊಸ ಸಂಪರ್ಕ ಲಾಭಕರ. ದೂರ ಪ್ರಯಾಣದ ಸಾಧ್ಯತೆ. ಶುಭಸಂಖ್ಯೆ: 7
ಕನ್ಯಾ: ಯೋಜಿತ ಕೆಲಸಗಳು ನಿಧಾನವಾಗಿ ಯಶಸ್ಸಿನತ್ತ ಸಾಗುತ್ತವೆ. ನಾಟ್ಯ ಕಲಾವಿದರಿಗೆ ಉತ್ತಮ ಅವಕಾಶಗಳು ದೊರೆಯಲಿವೆ. ಶುಭಸಂಖ್ಯೆ: 1
ತುಲಾ: ಒಳಾಂಗಣ ವಿನ್ಯಾಸದ ವಸ್ತುಗಳ ವ್ಯವಹಾರಗಳಲ್ಲಿ ಲಾಭ. ಐಟಿ&ಬಿಟಿ ಉದ್ಯೋಗಿಗಳಿಗೆ ಹೊಸ ಜವಾಬ್ದಾರಿ ಬರಬಹುದು. ಶುಭಸಂಖ್ಯೆ: 9
ವೃಶ್ಚಿಕ: ಕೃಷಿ ಉಪಕರಣ ವ್ಯಾಪಾರಿಗಳಿಗೆ ಲಾಭ. ಆರೋಗ್ಯದ ಜಾಗ್ರತೆ ಇರಲಿ. ವಿಮಾನ ತಯಾರಿಕೆಯ ಕಾರ್ಖಾನೆಯಲ್ಲಿ ಉದ್ಯೋಗ. ಶುಭಸಂಖ್ಯೆ: 9
ಧನಸ್ಸು: ವಿದೇಶಿ ಸಂಬಂಧಿ ಸಂಸ್ಥೆಗಳಲ್ಲಿ ಅವಕಾಶ ಬರಲಿದೆ. ಸರ್ಕಾರಿ ಕೆಲಸಗಳಲ್ಲಿ ನಿರೀಕ್ಷಿತ ಫಲ ಸ್ವಲ್ಪ ವಿಳಂಬವಾಗಿ ಸಿಗುವ ಸಾಧ್ಯತೆ. ಶುಭಸಂಖ್ಯೆ: 6
ಮಕರ: ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ವ್ಯಾಪಾರದಲ್ಲಿ ಹೊಸ ಸಂಪರ್ಕ ಸಿಗಲಿದೆ. ಕುಟುಂಬದಲ್ಲಿ ಶಾಂತಿ ಹಾಗೂ ಸಂತೋಷ. ಶುಭಸಂಖ್ಯೆ: 9
ಕುಂಭ: ಹೊಸ ಯೋಜನೆ, ಆಲೋಚನೆಯನ್ನು ಕಾರ್ಯ ರೂಪಕ್ಕೆ ತರಲು ಅನುಕೂಲಕರ ದಿನ. ಐಟಿ&ಬಿಟಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಗತಿ. ಶುಭಸಂಖ್ಯೆ: 7
ಮೀನ: ಮನಸ್ಸಿಗೆ ಶಾಂತಿ ಸಮಾಧಾನ ದೊರೆಯುವ ದಿನ. ಮಹಿಳೆಯರಿಗೆ ಹೊಸಜವಾಬ್ದಾರಿ. ತಾಯಿಯ ಆರೋಗ್ಯದಲ್ಲಿ ಸುಧಾರಣೆ. ಶುಭಸಂಖ್ಯೆ: 3