ನಿತ್ಯಭವಿಷ್ಯ; ಈ ರಾಶಿಯವರಿಗಿಂದು ಪರಿಶ್ರಮಕ್ಕೆ ತಕ್ಕ ಪುರಸ್ಕಾರ ಸಿಗಲಿದೆ 
ದಿನ ಭವಿಷ್ಯ

ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಉನ್ನತ ವಿದ್ಯಾಭ್ಯಾಸದ ಕನಸು ನನಸು

ಮೇಷ: ಹೃದಯ ಸಂಬಂಧಿ ವ್ಯಾಧಿಗೆ ಸೂಕ್ತ ಚಿಕಿತ್ಸೆ. ಉದ್ಯೋಗಸ್ಥ ಮಹಿಳೆಯರಿಗೆ ಕೆಲಸದ ಒತ್ತಡ, ಸಹೋದ್ಯೋಗಿಗಳಿಂದ ಸಹಾಯ. ಶುಭಸಂಖ್ಯೆ: 5

ವೃಷಭ: ಧಾರ್ಮಿಕ ಮುಖಂಡರಿಗೆ ಸಾರ್ವಜನಿಕವಾಗಿ ಹೆಚ್ಚಿದ ಒತ್ತಡ. ವಾಣಿಜ್ಯ ಮತ್ತು ತಾಂತ್ರಿಕ ವಿದ್ಯಾರ್ಥಿಗಳಿಗೆ ಶುಭದಾಯಕ ದಿನ. ಶುಭಸಂಖ್ಯೆ: 7

ಮಿಥುನ: ಯೋಗಪಟುಗಳಿಗೆ ವಿದೇಶ ಪ್ರಯಾಣ. ಗೃಹ ನಿರ್ಮಾಣಕ್ಕೆ ಚಾಲನೆ. ಆಸ್ತಿ ನೋಂದಣಿಗಿದ್ದ ತಡೆ ನಿವಾರಣೆ. ಮಕ್ಕಳಿಂದ ಶುಭ. ಶುಭಸಂಖ್ಯೆ: 1

ಕಟಕ: ರಾಜಕೀಯ ಕ್ಷೇತ್ರದ ನೇತಾರರಿಗೆ ಧನ ಲಾಭ. ರೇಷ್ಮೆ ಕೃಷಿಕರಿಗೆ ಸರ್ಕಾರದಿಂದ ಸಹಾಯ. ಜಾನಪದ ಕಲಾವಿದರಿಗೆ ವಿಶೇಷ ದಿನ. ಶುಭಸಂಖ್ಯೆ: 7

ಸಿಂಹ: ಯಶಸ್ಸಿಗೆ ಬಂಧುಗಳಿಂದ ಪ್ರಶಂಸೆ. ಬ್ಯಾಂಕ್​ ಉದ್ಯೋಗಿಗಳಿಗೆ ಸ್ಥಳ ಬದಲಾವಣೆ. ಕಟ್ಟಡ ನಿರ್ಮಾಣ ಕಾರ್ಯದಲ್ಲಿ ವಿಳಂಬ. ಶುಭಸಂಖ್ಯೆ: 3

ಕನ್ಯಾ: ಬಟ್ಟೆ ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿ ಗಳಿಕೆ. ದಾಂಪತ್ಯದಲ್ಲಿ ತಾಳ್ಮೆಯಿಂದ ವರ್ತಿಸಿ. ಡೇರಿ ಉತ್ಪನ್ನಗಳ ಮಾರಾಟದಿಂದ ಲಾಭ. ಶುಭಸಂಖ್ಯೆ: 9

ತುಲಾ: ಉನ್ನತ ವಿದ್ಯಾಭ್ಯಾಸದ ಕನಸು ನನಸು. ವಿವಾಹದ ಪ್ರಯತ್ನ ಫಲಕಾರಿಯಾಗುವುದು. ನ್ಯಾಯಾಲಯದ ಕೆಲಸಗಳಲ್ಲಿ ನಿಧಾನಗತಿ. ಶುಭಸಂಖ್ಯೆ: 4

ವೃಶ್ಚಿಕ: ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಗೃಹ ನಿರ್ಮಾಣ ಮಂದಗತಿಯಲ್ಲಿ ಸಾಗಲಿದೆ. ಕ್ರೀಡಾಪಟುಗಳಿಗೆ ಧನ ಲಾಭ. ಶುಭಸಂಖ್ಯೆ: 1

ಧನಸ್ಸು: ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಆದಾಯ ತೆರಿಗೆ ನೌಕರರಿಗೆ ವರ್ಗ. ವೈಮಾನಿಕ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ: 2

ಮಕರ: ಹಳೆಯ ಸ್ನೇಹಿತರ ಭೇಟಿಯಿಂದ ಉಲ್ಲಾಸದ ಕ್ಷಣಗಳು. ಆಹಾರ ಸೇವನೆಯಲ್ಲಿ ಎಚ್ಚರವಿರಲಿ. ಕುಟುಂಬದಲ್ಲಿ ಅನಿರೀಕ್ಷಿತ ಘಟನೆ. ಶುಭಸಂಖ್ಯೆ: 3

ಕುಂಭ: ಪ್ರತಿಭೆಗೆ ತಕ್ಕ ಪುರಸ್ಕಾರ ಸಿಗಲಿದೆ. ಹೊಸ ಪರಿಚಯದಿಂದ ಪ್ರಯೋಜನ. ಪೀಠೋಪಕರಣಗಳ ಖರೀದಿಯಲ್ಲಿ ಹಣವ್ಯಯ. ಶುಭಸಂಖ್ಯೆ: 9

ಮೀನ: ನಿಮ್ಮ ಸಮಸ್ಯೆಗೆ ಅಧಿಕಾರಿಗಳಿಂದ ಸ್ಪಂದನೆ. ಕಾರು ಮಳಿಗೆಯ ಮಾಲೀಕರಿಗೆ ಲಾಭ. ಕಟ್ಟಡ ಸಾಮಗ್ರಿ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 5