ಮೇಷ: ಹಿರಿಯ ಅಧಿಕಾರಿಗಳೊಂದಿಗೆ ವಾದ ಬೇಡ. ಕುಟುಂಬದ ಆಸ್ತಿ ವಿವಾದ ಬಗೆಹರಿಯಲಿದೆ. ಬ್ಯಾಂಕ್ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ: 9
ವೃಷಭ: ಮಕ್ಕಳ ಬಗ್ಗೆ ಇದ್ದ ಆತಂಕ ನಿವಾರಣೆಯಾಗಿ ನೆಮ್ಮದಿ. ನಿವೇಶನ ಖರೀದಿಯಲ್ಲಿ ಎಚ್ಚರಿಕೆ ಇರಲಿ. ಕೊಟ್ಟ ಸಾಲ ತಿರುಗಿ ಬರಲಿದೆ. ಶುಭಸಂಖ್ಯೆ: 3
ಮಿಥುನ: ಪಾಲುದಾರಿಕೆಯ ವ್ಯವಹಾರದಲ್ಲಿ ಪ್ರಗತಿ. ಅನಗತ್ಯ ಖರ್ಚುಗಳಿಗೆ ನಿಯಂತ್ರಣ ಹಾಕಿ. ನಿಮ್ಮ ಪ್ರಾಮಾಣಿಕತೆಗೆ ಮೆಚ್ಚುಗೆ ಸಿಗಲಿದೆ. ಶುಭಸಂಖ್ಯೆ: 6
ಕಟಕ: ವ್ಯಾವಹಾರಿಕವಾಗಿ ಶತ್ರುಗಳ ಮೇಲೆ ವಿಜಯ. ಆಹಾರ ಸೇವನೆಯಲ್ಲಿ ಎಚ್ಚರಿಕೆ ಇರಲಿ. ಆಸ್ತಿ ವಿಚಾರಗಳಲ್ಲಿ ಗೆಲುವು ಸಿಗಲಿದೆ. ಶುಭಸಂಖ್ಯೆ: 1
ಸಿಂಹ: ಮಕ್ಕಳಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿ ಕೇಳಲಿದ್ದೀರಿ. ಕಲಾವಿದರ ಪ್ರತಿಭೆಗೆ ಸೂಕ್ತ ಪುರಸ್ಕಾರ. ರಚನಾತ್ಮಕ ಕೆಲಸಗಳಿಂದ ಗೌರವ. ಶುಭಸಂಖ್ಯೆ: 5
ಕನ್ಯಾ: ಮನೆ ಖರೀದಿ ಮಾಡಲು ಶುಭದಿನ. ಸಹೋದರನಿಂದ ಆರ್ಥಿಕ ನೆರವು. ಮಹಿಳಾ ಉದ್ಯೋಗಿಗಳು ಒತ್ತಡವನ್ನು ನಿರ್ವಹಿಸುವಿರಿ. ಶುಭಸಂಖ್ಯೆ: 8
ತುಲಾ: ಉನ್ನತ ವಿದ್ಯಾಭ್ಯಾಸದಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಹೊಸ ಪಾಲುದಾರರ ಆಗಮನ. ಆಸ್ತಿ ವಿಚಾರದಲ್ಲಿ ಎಚ್ಚರ. ಶುಭಸಂಖ್ಯೆ: 2
ವೃಶ್ಚಿಕ: ಕೊಟ್ಟ ಹಣ ತಿರುಗಿ ಬರಲಿದೆ. ಗುರು ಹಿರಿಯರೊಂದಿಗೆ ವಿಧೇಯತೆಯಿಂದ ವರ್ತಿಸಿ. ಕಚೇರಿ ಬದಲಾವಣೆಗೆ ನಿರ್ಧಾರ. ಶುಭಸಂಖ್ಯೆ: 9
ಧನಸ್ಸು: ಕಿರುಚಿತ್ರ ನಿರ್ವಪಕರಿಗೆ ಧನ ಲಾಭ. ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಸುದಿನ. ಸರ್ಕಾರಿ ಒಪ್ಪಂದ ಅಂತಿಮವಾಗಲಿದೆ. ಶುಭಸಂಖ್ಯೆ: 4
ಮಕರ: ಅಲಂಕಾರಿಕ ವಸ್ತು ಖರೀದಿಯಲ್ಲಿ ಹಣ ವೆಚ್ಚವಾಗಲಿದೆ. ಆಧ್ಯಾತ್ಮಿಕ ವಿಷಯಗಳತ್ತ ಮನಸ್ಸು. ಆನ್ಲೈನ್ ವ್ಯಾಪಾರದಿಂದ ಲಾಭ. ಶುಭಸಂಖ್ಯೆ: 8
ಕುಂಭ: ಉದ್ಯಮದಲ್ಲಿರುವ ಮಹಿಳೆಯರಿಗೆ ವಿದೇಶ ಪ್ರವಾಸ ಸಾಧ್ಯತೆ. ಉದ್ಯೋಗ ಸ್ಥಳದಲ್ಲಿ ಹಿರಿಯ ಅಧಿಕಾರಿಗಳಿಂದ ಮಾರ್ಗದರ್ಶನ. ಶುಭಸಂಖ್ಯೆ: 6
ಮೀನ: ಕೆಲಸದ ಹೊರೆ ಹೆಚ್ಚಾಗಲಿದೆ. ಜೇನು, ರೇಷ್ಮೆ ವ್ಯವಸಾಯದಲ್ಲಿ ನಿರೀಕ್ಷಿತ ಲಾಭ. ನಾಟ್ಯ ಸಂಯೋಜಕರಿಗೆ ಬೇಡಿಕೆ ಹೆಚ್ಚಲಿದೆ. ಶುಭಸಂಖ್ಯೆ: 6