ಮೇಷ: ಸಂಗಾತಿಯ ಆರೋಗ್ಯ ಸುಧಾರಿಸಲಿದೆ. ಕೈಗೊಂಡ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಧಾರ್ವಿುಕ ಕಾರ್ಯದಲ್ಲಿ ಭಾಗವಹಿಸುವಿರಿ. ಶುಭಸಂಖ್ಯೆ:5
ವೃಷಭ: ಹಣಕಾಸಿನ ವಿಷಯದಲ್ಲಿ ಜಾಗರೂಕರಾಗಿರಿ. ಕೆಲಸದ ಸ್ಥಳದಲ್ಲಿ ತಾಳ್ಮೆಯಿಂದ ವರ್ತಿಸುವುದು ಒಳಿತು. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ:1
ಮಿಥುನ: ವ್ಯಾಪಾರದಲ್ಲಿ ಲಾಭ. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ. ಕುಟುಂಬ ಸಮೇತ ದೂರ ಪ್ರವಾಸದ ಯೋಗವಿದೆ. ಶುಭಸಂಖ್ಯೆ: 2
ಕಟಕ: ಅನಗತ್ಯ ಖರ್ಚು ನಿಯಂತ್ರಿಸುವುದು ಅನಿವಾರ್ಯ. ತಾಯಿಯ ಆರೋಗ್ಯದತ್ತ ಗಮನ ಹರಿಸಿ. ವೀಸಾ ಸಮಸ್ಯೆಗೆ ಪರಿಹಾರ. ಶುಭಸಂಖ್ಯೆ:7
ಸಿಂಹ: ಉದ್ಯೋಗದಲ್ಲಿ ಬಡ್ತಿ. ಉದ್ಯೋಗ ಸಂಬಂಧಿ ಶುಭಸುದ್ದಿ ಸಿಗುವ ಸಾಧ್ಯತೆ. ಆಸ್ತಿ ವಿಷಯದಲ್ಲಿ ಕುಟುಂಬದ ಹಿರಿಯರ ಬೆಂಬಲ. ಶುಭಸಂಖ್ಯೆ:3
ಕನ್ಯಾ: ಒತ್ತಡ ಹೆಚ್ಚಿದ್ದರೂ ಗುರಿ ತಲುಪುವಿರಿ. ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ, ಹಣಕಾಸಿನ ವಿಚಾರದಲ್ಲಿ ಯೋಚಿಸಿ ಹೆಜ್ಜೆ ಇಡಿ. ಶುಭಸಂಖ್ಯೆ: 9
ತುಲಾ: ಹಳೆಯ ಸಮಸ್ಯೆಗಳು ಬಗೆಹರಿದು ಸಮಾಧಾನ ವಾಗಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದ್ದು, ಆರ್ಥಿಕ ಸ್ಥಿತಿ ಸ್ಥಿರವಾಗಿರಲಿದೆ. ಶುಭಸಂಖ್ಯೆ:6
ವೃಶ್ಚಿಕ: ಉನ್ನತ ವಿದ್ಯಾಭ್ಯಾಸದ ಕನಸು ನನಸು. ಗೃಹ ನಿರ್ವಣಕ್ಕೆ ಚಾಲನೆ ದೊರೆಯುವುದು. ಆಟೋ ಮೊಬೈಲ್ಸ್ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 3
ಧನಸ್ಸು: ಮಕ್ಕಳಿಂದ ಶುಭ ವಾರ್ತೆ ಕೇಳುವಿರಿ. ಹೊಸ ಯೋಜನೆ ಆರಂಭಿಸಲು ಇದು ಸುಸಮಯ. ಆಕಸ್ಮಿಕವಾಗಿ ಧನ ಲಾಭವಿದೆ. ಶುಭಸಂಖ್ಯೆ:8
ಮಕರ: ಕೋರ್ಟ್ ವ್ಯವಹಾರಗಳಲ್ಲಿ ಪ್ರಗತಿ. ಮನೆಯ ವಾತಾವರಣ ಸುಖಮಯವಾಗಿರುತ್ತದೆ. ಖಾದಿ ವಸ್ತ್ರಗಳ ಮಾರಾಟದಲ್ಲಿ ಲಾಭ. ಶುಭಸಂಖ್ಯೆ:2
ಕಂಭ: ಕೆಲವು ಘಟನೆಗಳಿಂದ ಆತ್ಮವಿಶ್ವಾಸ ಹೆಚ್ಚಾಗಲಿದೆ. ಸಣ್ಣ ಪ್ರಯಾಣವು ಲಾಭದಾಯಕ. ಸಾಲ ತೀರಿಸಲು ಬಂಧುಗಳ ಸಹಕಾರ. ಶುಭಸಂಖ್ಯೆ:7
ಮೀನ: ಮಾತಿನಲ್ಲಿ ಮಧುರತೆ ಇರಲಿ. ಸರ್ಕಾರಿ ಕೆಲಸಗಳು ಸುಲಭವಾಗುತ್ತವೆ. ಆರ್ಥಿಕವಾಗಿ ಉತ್ತಮ ದಿನ. ನೆಮ್ಮದಿ ದೊರೆಯಲಿದೆ. ಶುಭಸಂಖ್ಯೆ: 8