ಜ್ಯೋತಿಷ್ಯ 
ದಿನ ಭವಿಷ್ಯ

ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ವ್ಯಾಪಾರದಲ್ಲಿ ಲಾಭ ದೊರೆಯಲಿದೆ

ಮೇಷ: ಕೆಲಸದಲ್ಲಿ ಆದಾಯ ಹೆಚ್ಚಾಗುತ್ತದೆ. ಕಲಾತ್ಮಕ ಚಟುವಟಿಕೆಗೆ ಪೋ›ತ್ಸಾಹ ದೊರೆಯಲಿದೆ. ನಾಟ್ಯ ಶಿಕ್ಷಕರಿಗೆ ಬೇಡಿಕೆ ಹೆಚ್ಚಾಗಲಿದೆ. ಶುಭಸಂಖ್ಯೆ: 9

ವೃಷಭ: ಸಹೋದ್ಯೋಗಿಗಳ ಜತೆ ಭಿನ್ನಾಭಿಪ್ರಾಯ ಮೂಡದಂತೆ ಎಚ್ಚರಿಕೆ ವಹಿಸಿ. ಹಣಕಾಸಿನ ವ್ಯವಹಾರದಲ್ಲಿ ಜಾಗರೂಕರಾಗಿರಿ. ಶುಭಸಂಖ್ಯೆ: 3

ಮಿಥುನ: ಉದ್ಯೋಗದಲ್ಲಿ ಬದಲಾವಣೆ ಯೋಗವಿದೆ. ಆಮದು ವ್ಯವಹಾರದಲ್ಲಿ ಆರ್ಥಿಕ ಬೆಳವಣಿಗೆ. ಬರಹಗಾರರು ಕೀರ್ತಿ ಗಳಿಸಲಿದ್ದೀರಿ. ಶುಭಸಂಖ್ಯೆ:3

ಕಟಕ: ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಹೊಸ ಹೂಡಿಕೆಗೆ ಸೂಕ್ತ ದಿನವಲ್ಲ. ನಟನಾ ಕ್ಷೇತ್ರದವರಿಗೆ ಅವಕಾಶ. ಶುಭಸಂಖ್ಯೆ:7

ಸಿಂಹ: ರಾಜಕೀಯವಾಗಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ. ಪಾಲುದಾರಿಕೆ ವ್ಯಾಪಾರದಲ್ಲಿ ಲಾಭ. ಚಿತ್ರ, ಶಿಲ್ಪಕಲಾವಿದರಿಗೆ ಬೇಡಿಕೆ ಹೆಚ್ಚಲಿದೆ. ಶುಭಸಂಖ್ಯೆ: 8

ಕನ್ಯಾ: ವಿದೇಶಿ ವ್ಯವಹಾರಗಳಲ್ಲಿ ಪ್ರಗತಿ. ಐಟಿ ಉದ್ಯೋಗಿಗಳಿಗೆ ದೂರ ಪ್ರಯಾಣದ ಸೂಚನೆ ಇದೆ. ನಟನೆಯಲ್ಲಿ ಗುರುತಿಸಿಕೊಳ್ಳುವಿರಿ. ಶುಭಸಂಖ್ಯೆ: 2

ತುಲಾ: ಸ್ವಉದ್ಯಮದ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಹಳೆಯ ಬಾಕಿ ವಾಪಸ್ ಬರಲಿದೆ. ನೃತ್ಯ, ಫ್ಯಾಷನ್ ಡಿಸೈನಿಂಗ್​ನಿಂದ ಸಂಪಾದನೆ. ಶುಭಸಂಖ್ಯೆ: 6

ವೃಶ್ಚಿಕ: ಕೆಲಸದ ಸ್ಥಳದಲ್ಲಿ ಹಿತಶತ್ರುಗಳ ಬಗ್ಗೆ ಎಚ್ಚರ. ವ್ಯಾಪಾರದಲ್ಲಿ ಹೊಸ ಯೋಜನೆಗಳನ್ನು ಜಾರಿಗೆ ತರಲು ಇದು ಸರಿಯಾದ ಸಮಯ. ಶುಭಸಂಖ್ಯೆ: 8

ಧನಸ್ಸು: ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಮಾನಸಿಕ ಸಿದ್ಧತೆ ಮಾಡಿಕೊಳ್ಳಿ. ಸ್ವಂತ ಉದ್ಯಮ ಆರಂಭಿಸುವವರಿಗೆ ಶುಭದಿನ. ಶುಭಸಂಖ್ಯೆ: 3

ಮಕರ: ಹಿರಿಯ ಅಧಿಕಾರಿಗಳ ಜತೆ ಚರ್ಚೆ. ಕಬ್ಬಿಣ, ಕಟ್ಟಡ ಸಾಮಗ್ರಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ. ನಾಟಕ ರಂಗದವರಿಗೆ ಶುಭದಿನ. ಶುಭಸಂಖ್ಯೆ:3

ಕುಂಭ: ಹೊಸ ಆಲೋಚನೆ ಕೆಲಸದಲ್ಲಿ ಜಯ ತರಲಿದೆೆ. ಆರ್ಥಿಕವಾಗಿ ಖರ್ಚು ಹೆಚ್ಚಾಗುವ ಸಾಧ್ಯತೆ. ಡಿಜಿಟಲ್ ಕಲೆ ಪರಿಣಿತರಿಗೆ ಬೇಡಿಕೆ. ಶುಭಸಂಖ್ಯೆ: 9

ಮೀನ: ಗುರುಬಲದಿಂದಾಗಿ ಎಲ್ಲ ಕ್ಷೇತ್ರದಲ್ಲಿ ಯಶಸ್ಸು. ಆದಾಯದ ಹೊಸ ಮೂಲ ಸೃಷ್ಟಿಯಾಗಲಿವೆ. ಸಂಗಾತಿಯ ಆರೋಗ್ಯ ಸುಧಾರಣೆ.ಶುಭಸಂಖ್ಯೆ: 3