ಜ್ಯೋತಿಷ್ಯ 
ದಿನ ಭವಿಷ್ಯ

ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ವ್ಯಾಪಾರದಲ್ಲಿ ಲಾಭ

ಮೇಷ: ಸರ್ಕಾರಿ ಉದ್ಯೋಗದ ಅಸ್ಥಿರತೆಗೆ ಅಂತ್ಯ. ಕಾಫಿ ಬೆಳೆಗಾರರಿಗೆ ಲಾಭ. ಐಟಿ ಉದ್ಯೋಗದ ಮಹಿಳೆಯರಿಗೆ ವಿದೇಶ ಪ್ರಯಾಣ. ಶುಭಸಂಖ್ಯೆ: 9

ವೃಷಭ: ಹಣ್ಣಿನ ವ್ಯಾಪಾರದಲ್ಲಿ ಹಣ ಗಳಿಸುವಿರಿ. ನಾಲ್ಕು ಚಕ್ರದ ವಾಹನ ಖರೀದಿಗೆ ಸಾಲ ಸಿಗಲಿದೆ. ನೂತನ ಗೃಹ ನಿರ್ವಣಕ್ಕೆ ಚಾಲನೆ. ಶುಭಸಂಖ್ಯೆ: 6

ಮಿಥುನ: ನಿಮ್ಮ ಮಕ್ಕಳ ಪ್ರತಿಭೆಗೆ ತಕ್ಕ ಪುರಸ್ಕಾರ ಸಿಗಲಿದೆ. ಸಾರ್ವಜನಿಕವಾಗಿ ತಾಳ್ಮೆಯಿಂದಿರಿ. ಆತ್ಮೀಯ ಮಿತ್ರರೊಂದಿಗೆ ಪ್ರಯಾಣ. ಶುಭಸಂಖ್ಯೆ: 8

ಕಟಕ: ಚಾಲಕ ವೃತ್ತಿಯಲ್ಲಿ ಹಣ ಗಳಿಕೆ. ಮಕ್ಕಳ ಪರೀಕ್ಷೆಯ ಪ್ರಯತ್ನದಲ್ಲಿ ವೈಫಲ್ಯ. ದಿನಸಿ ವ್ಯಾಪಾರದಲ್ಲಿ ಲಾಭ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 3

ಸಿಂಹ: ಸ್ನೇಹಿತರ ಮನಸ್ತಾಪ ಇತ್ಯರ್ಥ. ಸ್ವಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಹೊಸ ಹೂಡಿಕೆದಾರರಿಂದ ಉದ್ಯಮದಲ್ಲಿ ಪ್ರಗತಿ.ಶುಭಸಂಖ್ಯೆ: 6

ಕನ್ಯಾ: ಶಿಕ್ಷಕ ವೃತ್ತಿಯವರಿಗೆ ವರ್ಗಾವಣೆ ಸಾಧ್ಯತೆ. ಕಿರುಚಿತ್ರ ನಿರ್ವಪಕರಿಗೆ ಅದೃಷ್ಟದ ದಿನ. ನಿಮ್ಮ ಪ್ರತಿಭೆಗೆ ತಕ್ಕ ಪುರಸ್ಕಾರ ಸಿಗಲಿದೆ. ಶುಭಸಂಖ್ಯೆ: 2

ತುಲಾ: ಸಾಲ ತೀರಿಸಲು ಸ್ನೇಹಿತರಿಂದ ಸಹಕಾರ ಸಿಗಲಿದೆ. ಉದ್ಯಮಸ್ಥ ಮಹಿಳೆಯರಿಗೆ ಹೆಚ್ಚಿದ ಒತ್ತಡ. ಕೊಟ್ಟ ಸಾಲ ತಿರುಗಿ ಬರಲಿದೆ. ಶುಭಸಂಖ್ಯೆ: 6

ವೃಷ್ಚಿಕ: ಲೋಹಗಳ ವ್ಯಾಪಾರದಿಂದ ಲಾಭ. ಸ್ತ್ರೀಯರು ಸವಾಲುಗಳನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ಜೇನು ಕೃಷಿಯಿಂದ ಆದಾಯ. ಶುಭಸಂಖ್ಯೆ: 9

ಧನಸ್ಸು: ಸಾಮಾಜಿಕ ಹೋರಾಟಗಾರರಿಗೆ ಸಾರ್ವಜನಿಕ ಗೌರವ. ಭತ್ತ, ಅಡಿಕೆ ಬೆಳೆಗಾರರಿಗೆ ಲಾಭ. ಯಕ್ಷಗಾನ ಕಲಾವಿದರಿಗೆ ಸನ್ಮಾನ. ಶುಭಸಂಖ್ಯೆ: 3

ಮಕರ: ತಾಂತ್ರಿಕ ಪದವೀಧರರಿಗೂ ಉದ್ಯೋಗ ಪ್ರಾಪ್ತಿ. ನಾಟ್ಯ ಕಲಾವಿದರಿಗೆ ಬೇಡಿಕೆ. ಸರ್ಕಾರಿ ಆಸ್ಪತ್ರೆ, ಕಚೇರಿಯಲ್ಲಿ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ: 7

ಕುಂಭ: ಕೃಷಿ ಭೂಮಿ ಖರೀದಿಗೆ ಇದ್ದ ಅಡೆತಡೆ ನಿವಾರಣೆ. ಪಿತ್ರಾರ್ಜಿತ ಆಸ್ತಿ ಹಂಚಿಕೆ. ಇವೆಂಟ್ ಮ್ಯಾನೇಜ್ಮೆಂಟ್ ಆಯೋಜಕರಿಗೆ ಲಾಭ. ಶುಭಸಂಖ್ಯೆ: 4

ಮೀನ: ಅವಿವಾಹಿತರಿಗೆ ವಿವಾಹ ನಿಶ್ಚಯವಾಗಿ ನೆಮ್ಮದಿ. ನೀವು ಬಯಸಿದ ನಿವೇಶನ ದೊರೆಯಲಿದೆ. ನವದಂಪತಿಗಳಿಗೆ ಶುಭ ಸುದ್ದಿ. ಶುಭಸಂಖ್ಯೆ:1