ಜ್ಯೋತಿಷ್ಯ 
ದಿನ ಭವಿಷ್ಯ

ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಆತ್ಮೀಯರ ಬೆಂಬಲದಿಂದ ಜನಮನ್ನಣೆ ದೊರೆಯಲಿದೆ

ಮೇಷ: ಹೊಸ ಕೆಲಸದಲ್ಲಿ ಹಣ ಗಳಿಸುವಿರಿ. ವಿವಾಹದ ವಿಷಯದಲ್ಲಿ ಆತ್ಮೀಯರ ಸಹಕಾರ ಸಿಗುವುದು. ಹಣಕಾಸು ವಿಚಾರದಲ್ಲಿ ಎಚ್ಚರ. ಶುಭಸಂಖ್ಯೆ: 9

ವೃಷಭ: ಸಮಾಜ ಕಾರ್ಯದಲ್ಲಿ ಪಾಲ್ಗೊಳ್ಳುವ ಭಾಗ್ಯ. ವಿವಾಹ ವಿಚಾರದಲ್ಲಿ ಸಂಧಾನ. ಅನಿರೀಕ್ಷಿತ ಘಟನೆಯಿಂದ ಆತ್ಮಸ್ಥೈರ್ಯ ವೃದ್ಧಿ. ಶುಭಸಂಖ್ಯೆ:3

ಮಿಥುನ: ಲೋಹ ವ್ಯಾಪಾರದಲ್ಲಿ ಲಾಭ. ಉದ್ಯೋಗ ಸಂಬಂಧಿ ಪ್ರಯಾಣಗಳು ಯಶಸ್ವಿ. ಹೊಸಬರ ಸಂಪರ್ಕದಿಂದ ಪ್ರಯೋಜನ. ಶುಭಸಂಖ್ಯೆ:2

ಕಟಕ: ಬಹು ದಿನಗಳ ನಂತರ ಆರ್ಥಿಕ ಸ್ಥಿತಿ ಸುಧಾರಣೆ. ಹಳೇ ಸ್ನೇಹಿತರ ಭೇಟಿಯಿಂದ ಸಂತಸ. ಉದ್ಯೋಗದಲ್ಲಿ ಬದಲಾವಣೆ ಸಾಧ್ಯ. ಶುಭಸಂಖ್ಯೆ:6

ಸಿಂಹ: ಕೆಲಸದಲ್ಲಿ ಒತ್ತಡ ಇದ್ದರೂ ಯಶಸ್ವಿಯಾಗಿ ನಿಭಾಯಿಸುವಿರಿ. ಹಿರಿಯರ ಸಲಹೆ ಉಪಯುಕ್ತ. ಹೊಸ ಯೋಜನೆಗೆ ಸುಸಮಯ. ಶುಭಸಂಖ್ಯೆ: 4

ಕನ್ಯಾ: ಆರೋಗ್ಯದ ಕುರಿತು ಎಚ್ಚರಿಕೆ ಅಗತ್ಯ. ಮನೆ ಕಾರ್ಯದಲ್ಲಿ ತೊಂದರೆ ಎದುರಾದೀತು. ಆರ್ಥಿಕ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಶುಭಸಂಖ್ಯೆ:7

ತುಲಾ: ಭೂ ವ್ಯವಹಾರದಲ್ಲಿ ಯಶಸ್ಸು. ಕುಟುಂಬದಲ್ಲಿ ಸಂತೋಷದ ವಾತಾವರಣ. ಕೋರ್ಟ್ ಕೇಸ್ ವಿಷಯದಲ್ಲಿ ಉತ್ತಮ ಬೆಳವಣಿಗೆ. ಶುಭಸಂಖ್ಯೆ:3

ವೃಶ್ಚಿಕ: ಹಣಕಾಸು ವಿಚಾರದಲ್ಲಿ ಹೊಸ ಯೋಜನೆ ಫಲಕಾರಿ. ಸ್ನೇಹಿತರ ಸಹಾಯದಿಂದ ಪ್ರಮುಖ ಜವಾಬ್ದಾರಿಯನ್ನು ನಿರ್ವಹಿಸುತ್ತೀರಿ. ಶುಭಸಂಖ್ಯೆ:7

ಧನಸ್ಸು: ಮಾಡುವ ಕೆಲಸದಲ್ಲಿ ವಿಳಂಬವಾದರೂ ಯಶಸ್ಸು ದೊರೆಯುತ್ತದೆ. ದೂರ ಪ್ರಯಾಣದ ಯೋಗ. ಆರೋಗ್ಯದಲ್ಲಿ ಸುಧಾರಣೆ. ಶುಭಸಂಖ್ಯೆ: 8

ಮಕರ: ಆಲಸ್ಯದಿಂದ ಅವಕಾಶ ವಂಚಿತವಾಗುವಿರಿ. ಸಂಶೋಧನಾ ವಿದ್ಯಾರ್ಥಿಗಳಿಗೆ ಯಶಸ್ಸು. ಹಿರಿಯರ ಮಾರ್ಗದರ್ಶನ ಒಳ್ಳೆಯದು. ಶುಭಸಂಖ್ಯೆ:9

ಕುಂಭ: ಭೂ ಸಂಬಂಧಿ ವ್ಯವಹಾರಗಳಲ್ಲಿ ಎಚ್ಚರಿಕೆ ವಹಿಸಿ. ಆತ್ಮೀಯರ ಬೆಂಬಲದಿಂದ ಜನಮನ್ನಣೆ. ಹೊಸದಾದ ಕೆಲಸದಲ್ಲಿ ಪ್ರಗತಿ. ಶುಭಸಂಖ್ಯೆ: 4

ಮೀನ: ಹೊಸ ಅವಕಾಶಗಳು ಸಿಗುತ್ತವೆ. ಆಧ್ಯಾತ್ಮಿಕ ಸಾಧನೆಯಿಂದ ಮಾನಸಿಕ ಶಾಂತಿ ಹೆಚ್ಚಾಗುತ್ತದೆ. ವಾಹನ ಮಾಲೀಕರಿಗೆ ಧನ ಲಾಭ. ಶುಭಸಂಖ್ಯೆ:8