ಮೇಷ: ಧಾರ್ವಿುಕ ಕ್ಷೇತ್ರದ ಪ್ರಮುಖರಿಗೆ ಶುಭದಿನ. ಕಾರ್ಯನಿಮಿತ್ತ ವಿದೇಶ ಪ್ರಯಾಣ ಸಾಧ್ಯತೆ. ಹೂವು- ಹಣ್ಣು ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:1
ವೃಷಭ: ಹೊಸ ಹೂಡಿಕೆದಾರರ ಸೇರ್ಪಡೆಯಿಂದ ಆರ್ಥಿಕ ಸಮಸ್ಯೆಗೆ ಪರಿಹಾರ. ಹಿತಶತ್ರುಗಳಿಂದ ಕಿರಿಕಿರಿ. ನಿವೇಶನ ಖರೀದಿ ನಿರ್ಧಾರ. ಶುಭಸಂಖ್ಯೆ: 6
ಮಿಥುನ: ಐಟಿ ಉದ್ಯಮಿಗಳಿಗೆ ಒತ್ತಡ. ಕ್ರೀಡಾಪಟುಗಳಿಗೆ ಕೇಂದ್ರ ಸರ್ಕಾರದಿಂದ ಸನ್ಮಾನ. ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಸಾಧನೆ. ಶುಭಸಂಖ್ಯೆ:3
ಕಟಕ: ನಂಬಿದವರಿಂದಲೇ ಮೋಸ ಹೋಗುವ ಸಾಧ್ಯತೆ ಇದೆ ಎಚ್ಚರದಿಂದಿರಿ. ದವಸಧಾನ್ಯಗಳ ಬೆಳೆಗಾರರಿಗೆ ನಿರೀಕ್ಷಿತ ಧನ ಲಾಭ. ಶುಭಸಂಖ್ಯೆ:8
ಸಿಂಹ: ಕಚೇರಿ ಕೆಲಸದಲ್ಲಿ ಅನಿರೀಕ್ಷಿತ ಬದಲಾವಣೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು. ಪ್ರೀತಿ ಪ್ರೇಮದ ವಿಷಯದಲ್ಲಿ ಜಾಗರೂಕತೆ ಇರಲಿ. ಶುಭಸಂಖ್ಯೆ: 7
ತುಲಾ: ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಉನ್ನತ ಸ್ಥಾನಮಾನ ಬರುವ ಸಾಧ್ಯತೆ. ಹೃದಯ ಸಂಬಂಧಿ ಸಮಸ್ಯೆ ಇರುವವರು ಹುಷಾರು. ಶುಭಸಂಖ್ಯೆ:4
ಕನ್ಯಾ: ಸಾಲ ತೀರಿಸಲು ಮಿತ್ರರಿಂದ ಸಹಾಯ. ನಾಟ್ಯ ಕಲಾವಿದರಿಗೆ ಬೇಡಿಕೆ ಹೆಚ್ಚಲಿದೆ. ಛಾಯಾಗ್ರಾಹಕರಿಗೆ ದೂರ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 9
ವೃಶ್ಚಿಕ: ದೂರಾಲೋಚನೆಗಳು ಪ್ರಯೋಜನಕಾರಿ. ರೆಸ್ಟೋರೆಂಟ್ ವ್ಯವಹಾರದಲ್ಲಿ ಲಾಭ. ದೈಹಿಕ ಕಸರತ್ತಿನ ತರಬೇತುದಾರರಿಗೆ ಬೇಡಿಕೆ. ಶುಭಸಂಖ್ಯೆ: 2
ಧನಸ್ಸು: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ. ಸ್ವಂತ ಕೆಲಸಗಳಲ್ಲಿ ನಿರಾಸಕ್ತಿ. ಮಾತೃ ಮೂಲವಾದ ಆಸ್ತಿ ವಿವಾದ ಬಗೆಹರಿಯಲಿದೆ. ಶುಭಸಂಖ್ಯೆ: 1
ಮಕರ: ಮಕ್ಕಳ ಆರೋಗ್ಯದಲ್ಲಿ ಏರುಪೇರು. ಪ್ರೀತಿ ಪಾತ್ರರ ಭೇಟಿ. ಭಾವನಾತ್ಮಕವಾಗಿ ವರ್ತಿಸಬೇಡಿ. ದಿನದ ಅಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ:6
ಕುಂಭ: ಕುಟುಂಬದ ಆಸ್ತಿಯ ವಿಚಾರಕ್ಕೆ ರ್ತಾಕ ಅಂತ್ಯ ಒದಗಲಿದೆ. ಕುಲದೇವತಾ ದರ್ಶನ. ಕೇಂದ್ರ ಸರ್ಕಾರ ನೌಕರರಿಗೆ ವರ್ಗಾವಣೆ. ಶುಭಸಂಖ್ಯೆ: 5
ಮೀನ: ಅಮೂಲ್ಯ ವಸ್ತುಗಳನ್ನು ಖರೀದಿಸುವಿರಿ. ಸಂಗೀತ ಕಲಾವಿದರಿಗೆ ವಿಶೇಷ ದಿನವಾಗಲಿದೆ. ಹಣ ಹೂಡಿಕೆಯಲ್ಲಿ ಅನಿರೀಕ್ಷಿತ ಲಾಭ. ಶುಭಸಂಖ್ಯೆ:4