ಜ್ಯೋತಿಷ್ಯ 
ದಿನ ಭವಿಷ್ಯ

ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಸಾಮಾಜಿಕ ಗೌರವ ಹೆಚ್ಚಳ

ಮೇಷ: ಹೊಸ ಕಾರ್ಯಗಳಿಗೆ ಕೈ ಹಾಕಲು ಸುವರ್ಣ ಕಾಲ. ತರಾತುರಿಯ ನಿರ್ಧಾರ ಬೇಡ. ಕೌಟುಂಬಿಕವಾಗಿ ಸಂತಸದ ವಾತಾವರಣ. ಶುಭಸಂಖ್ಯೆ: 6
ವೃಷಭ: ಆರ್ಥಿಕವಾಗಿ ಲಾಭದಾಯಕ ದಿನ. ಹಳೇ ಬಾಕಿ ಕೈ ಸೇರಲಿದೆ. ಆರೋಗ್ಯದತ್ತ ಸ್ವಲ್ಪ ಗಮನವಿರಲಿ. ದೇವತಾ ಕಾರ್ಯಗಳಲ್ಲಿ ಭಾಗಿ. ಶುಭಸಂಖ್ಯೆ:8
ಮಿಥುನ: ವೃತ್ತಿ ರಂಗದಲ್ಲಿ ಮೇಲಧಿಕಾರಿಗಳಿಂದ ಮೆಚ್ಚುಗೆ. ಸ್ನೇಹಿತರೊಂದಿಗೆ ಪ್ರವಾಸ ಮತ್ತು ಔತಣಕೂಟ. ಸಂವಹನದಲ್ಲಿ ಸ್ಪಷ್ಟತೆಯಿರಲಿ. ಶುಭಸಂಖ್ಯೆ:1
ಕಟಕ: ಕಚೇರಿಯಲ್ಲಿ ತಾಳ್ಮೆ ಮುಖ್ಯ. ಧಾರ್ವಿುಕ ಕಾರ್ಯಕ್ಕೆ ಸಮಯ ಮೀಸಲಿಡುವಿರಿ. ಹೂಡಿಕೆಗೆ ಮುನ್ನ ತಜ್ಞರ ಸಲಹೆ ಪಡೆಯಿರಿ. ಶುಭಸಂಖ್ಯೆ:4
ಸಿಂಹ: ಮಾಡುವ ವ್ಯಾಪಾರದಲ್ಲಿ ಪ್ರಗತಿ ಕಂಡುಬರುತ್ತದೆ. ಮಕ್ಕಳಿಂದ ಶುಭ ವಾರ್ತೆ ಕೇಳುವಿರಿ. ನಿಮ್ಮ ಕಾರ್ಯಕ್ಷಮತೆಗೆ ತಕ್ಕ ಪ್ರತಿಫಲ. ಶುಭಸಂಖ್ಯೆ:2

ಕನ್ಯಾ

:
ಮನೆಯಲ್ಲಿ ಶುಭ ಕಾರ್ಯ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವಿರಿ. ಉದ್ಯೋಗದಲ್ಲಿ ಬದಲಾವಣೆಯಾಗಲಿದೆ. ಶುಭಸಂಖ್ಯೆ:9

ತುಲಾ

:
ಮಾನಸಿಕ ನೆಮ್ಮದಿ. ದೂರ ಪ್ರಯಾಣ ಯೋಗ. ಸಾಮಾಜಿಕವಾಗಿ ನಿಮ್ಮ ಗೌರವ ಹೆಚ್ಚಾಗಲಿದೆ. ಆರ್ಥಿಕ ವಹಿವಾಟಿನಲ್ಲಿ ಎಚ್ಚರ. ಶುಭಸಂಖ್ಯೆ:3

ವೃಶ್ಚಿಕ

:
ವಿರೋಧಿಗಳ ಮೇಲೆ ಜಯ ಸಾಧಿಸುವಿರಿ. ವ್ಯಾಪಾರದಲ್ಲಿ ಲಾಭ. ಕೆಲಸದ ಒತ್ತಡ ಹೆಚ್ಚಿದ್ದರೂ ಯಶಸ್ವಿಯಾಗಿ ನಿಭಾಯಿಸುವಿರಿ. ಶುಭಸಂಖ್ಯೆ:2

ಧನಸ್ಸು: 

ಶೈಕ್ಷಣಿಕ ರಂಗದಲ್ಲಿರುವವರಿಗೆ ಉತ್ತಮ ಫಲಿತಾಂಶ. ಪ್ರೇಮದ ವಿಚಾರದಲ್ಲಿ ಯಶ ಸಿಗಬಹುದು. ಕಲಾತ್ಮಕ ಕೆಲಸಗಳಲ್ಲಿ ಆಸಕ್ತಿ . ಶುಭಸಂಖ್ಯೆ:7
ಮಕರ: ಆಸ್ತಿ ವಿವಾದ ಬಗೆಹರಿಯಲಿದೆ. ಬೃಹತ್ ವಾಹನ ಖರೀದಿಯ ಯೋಗವಿದೆ. ತಾಯಿಯ ಕಡೆಯಿಂದ ಹಣದ ಸಹಕಾರ ಸಿಗಲಿದೆ. ಶುಭಸಂಖ್ಯೆ:4
ಕುಂಭ: ಶ್ರಮಕ್ಕೆ ತಕ್ಕ ಫಲ ಸಿಗುವ ದಿನವಿದು. ಸೋದರ-ಸೋದರಿಯರೊಂದಿಗೆ ಸೌಹಾರ್ದ ಇರಲಿ. ಸಣ್ಣ ಪ್ರವಾಸ ಕೈಗೊಳ್ಳುವ ಸಾಧ್ಯತೆ. ಶುಭಸಂಖ್ಯೆ:5
ಮೀನ: ಮಾತಿನ ಚಾಕಚಕ್ಯತೆಯಿಂದ ಕಾರ್ಯ ಸಾಧನೆ. ಉತ್ತಮ ಉಡುಗೊರೆಗಳು ದೊರೆಯಲಿವೆ. ಉಳಿತಾಯದ ಕಡೆಗೆ ಗಮನ ನೀಡಿ. ಶುಭಸಂಖ್ಯೆ: 6