ಜ್ಯೋತಿಷ್ಯ 
ದಿನ ಭವಿಷ್ಯ

ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಪ್ರೀತಿ ಪಾತ್ರರಿಂದ ಅನುಕೂಲ

ಮೇಷ: ಸಾಮಾಜಿಕ ಕೆಲಸಗಳಿಂದ ಅನುಕೂಲ, ಕುಟುಂಬದಲ್ಲಿ ಆಸ್ತಿ ವಿವಾದ, ಆತ್ಮಗೌರವಕ್ಕಾಗಿ ಸ್ನೇಹಿತರಿಂದ ದೂರವಾಗಬಹುದು. ಶುಭಸಂಖ್ಯೆ: 8
ವೃಷಭ: ಬಂಧುಗಳೊಂದಿಗೆ ದೂರ ಪ್ರಯಾಣ ಮಾಡುವಿರಿ. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ. ಸ್ಥಿರಾಸ್ತಿ ಖರೀದಿಗೆ ಸೂಕ್ತ ಸಮಯ. ಶುಭಸಂಖ್ಯೆ: 2
ಮಿಥುನ: ನಿರೀಕ್ಷಿತ ಪ್ರಯಾಣದ ವೇಳೆ ಹಳೆಯ ಸ್ನೇಹಿತರ ಭೇಟಿಯಾಗುವುದು. ಪ್ರೀತಿ-ಪ್ರೇಮದ ವಿಷಯಗಳ ಪ್ರಸ್ತಾಪ ಫಲಪ್ರದವಾಗಲಿದೆ. ಶುಭಸಂಖ್ಯೆ:1
ಕಟಕ: ಭೂಮಿ ಖರೀದಿಗೆ ಸಹೋದರಿಯಿಂದ ಸಹಾಯ. ವಾಣಿಜ್ಯ, ಕಾನೂನು ವಿದ್ಯಾರ್ಥಿಗಳಿಗೆ ಶುಭ. ಸ್ನೇಹಿತರ ವೈಮನಸ್ಯ ಇತ್ಯರ್ಥ. ಶುಭಸಂಖ್ಯೆ: 8
ಸಿಂಹ: ಕಾರ್ಯ ಸ್ಥಳದಲ್ಲಿ ಉಲ್ಲಾಸದ ವಾತಾವರಣ ಇರುವುದು. ಮಕ್ಕಳ ಪ್ರಗತಿಯಿಂದ ಹೆಮ್ಮೆ. ಪ್ರೀತಿ-ಪ್ರೇಮದ ವಿಷಯಗಳಿಂದ ಚಿಂತೆ.ಶುಭಸಂಖ್ಯೆ: 5
ಕನ್ಯಾ: ರಾಜಕೀಯ ವ್ಯಕ್ತಿಗಳಿಂದ ಅನುಕೂಲವಾಗಲಿದೆ. ಸಂಗಾತಿ ಆರೋಗ್ಯದಲ್ಲಿ ಸುಧಾರಣೆ. ಮಹಿಳೆಯರಿಗೆ ವಸ್ತ್ರಾಭರಣ ಲಾಭ. ಶುಭಸಂಖ್ಯೆ:7
ತುಲಾ: ಮಿತ್ರರು ಶತ್ರುಗಳಾಗಿ ಪರಿವರ್ತನೆಯಾಗುವರು. ಆತ್ಮವಿಶ್ವಾಸ ವೃದ್ಧಿ. ನಾಟ್ಯ ಕಲಾವಿದರಿಗೆ ಉತ್ತಮ ಅವಕಾಶಗಳು ಬರಲಿವೆ. ಶುಭಸಂಖ್ಯೆ:2
ವೃಶ್ಚಿಕ: ದುರಾಲೋಚನೆ ದಾರಿತಪ್ಪಿಸಬಹುದು. ಎಚ್ಚರಿಕೆಯ ಹೆಜ್ಜೆಯನ್ನು ಇಡಿ. ವಿವಾಹಿತರಿಗೆ ಶುಭ ಸುದ್ದಿ. ಐಟಿ ಕ್ಷೇತ್ರದಲ್ಲಿ ಉದ್ಯೋಗ. ಶುಭಸಂಖ್ಯೆ:9
ಧನಸ್ಸು: ಆತ್ಮೀಯರಿಂದ ಸಾಲದ ಸಹಾಯ. ದೇವತಾ ಕಾರ್ಯಗಳಲ್ಲಿ ಆಸಕ್ತಿ. ಸರಕು ಸಾಗಾಣಿಕೆ ವಾಹನದ ವ್ಯಾಪಾರಸ್ಥರಿಗೆ ಲಾಭ. ಶುಭಸಂಖ್ಯೆ: 3
ಮಕರ: ಮಕ್ಕಳ ಆರೋಗ್ಯದಲ್ಲಿ ಚೇತರಿಕೆಯಾಗುವುದು. ಆರ್ಥಿಕ ಸಮಸ್ಯೆಗಳು ಪರಿಹಾರವಾಗುತ್ತವೆ. ಪ್ರೀತಿಪಾತ್ರರ ಜತೆ ಔತಣ ಕೂಟ. ಶುಭಸಂಖ್ಯೆ: 8
ಕುಂಭ: ಕುಟುಂಬ ಜೀವನದಲ್ಲಿ ಅನಿರೀಕ್ಷಿತ ತಿರುವು. ಭವಿಷ್ಯದ ಚಿಂತನೆಗಳು ಪ್ರಯೋಜನಕಾರಿ ಆಗಲಿದೆ. ಶಕ್ತಿ ದೇವತೆಗಳ ದರ್ಶನ. ಶುಭಸಂಖ್ಯೆ:6
ಮೀನ: ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶದಿಂದ ಹೊರ ಬರುವಿರಿ. ಸಾಹಿತಿಗಳು, ಬರಹಗಾರರಿಗೆ ಪುರಸ್ಕಾರ. ಕೃಷಿಕರಿಗೆ ಸೂಕ್ತ ಲಾಭ. ಶುಭಸಂಖ್ಯೆ: 4