ಜ್ಯೋತಿಷ್ಯ 
ದಿನ ಭವಿಷ್ಯ

ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಭೂ ವ್ಯವಹಾರದಲ್ಲಿ ಮುಂದುವರಿದರೆ ಫಲ

ಪ್ರಮುಖ ಮುಖ್ಯಾಂಶಗಳು

  • ವಿಜಯವಾಣಿ ನಿತ್ಯ ಭವಿಷ್ಯ ನವೆಂಬರ್​ 15
  • ಈ ರಾಶಿಯವರು ಇಂದು ಮನೆಯ ನವೀಕರಣದಲ್ಲಿ ಆಸಕ್ತಿ ತೋರುತ್ತೀರಿ
  • ಈ ರಾಶಿಯವರಿಗೆ ಹೊಸ ಯೋಜನೆಗಳು ಕಾರ್ಯಗತವಾಗಲಿವೆ

ಮೇಷ: ಮನೆಯ ನವೀಕರಣದಲ್ಲಿ ಆಸಕ್ತಿ ತೋರುತ್ತೀರಿ. ನ್ಯಾಯಾಲಯದ ಕೆಲಸಗಳಲ್ಲಿ ಯಶಸ್ಸು. ಹಣಕಾಸು ವಿಚಾರದಲ್ಲಿ ಎಚ್ಚರ. ಶುಭಸಂಖ್ಯೆ: 9

ವೃಷಭ: ಮನೆಯಲ್ಲಿ ಸಮಾರಂಭದ ವಾತಾವರಣ. ಆಸ್ತಿ ಸಂಬಂಧಿ ಕೆಲಸಗಳಲ್ಲಿ ಗೊಂದಲ. ವಿದೇಶದಲ್ಲಿರುವ ಮಕ್ಕಳಿಂದ ಶುಭ ಸುದ್ದಿ. ಶುಭಸಂಖ್ಯೆ:7

ಮಿಥುನ: ಕಿರುಚಿತ್ರ ನಟರಿಗೆ ಹೊಸ ಅವಕಾಶಗಳು ದೊರೆಯುವ ಸಾಧ್ಯತೆ. ಆತ್ಮವಿಶ್ವಾಸದಿಂದ ಹೊಸ ವ್ಯವಹಾರ ಪ್ರಾರಂಭಿಸಿದರೆ ಲಾಭ. ಶುಭಸಂಖ್ಯೆ: 1

ಕಟಕ: ಸಂಗಾತಿ ಆರೋಗ್ಯದಲ್ಲಿ ಚೇತರಿಕೆ. ವ್ಯವಹಾರದಲ್ಲಿ ಸ್ಪರ್ಧೆ ಜಾಸ್ತಿ. ಮಗಳ ವಿವಾಹದ ವಿಷಯದಲ್ಲಿ ಶಾಂತವಾಗಿ ನಿರ್ಣಯಿಸಿ. ಶುಭಸಂಖ್ಯೆ:3

ಸಿಂಹ: ಹೊಸ ಯೋಜನೆಗಳು ಕಾರ್ಯಗತವಾಗಲಿವೆ. ಗಾಯಕರಿಗೆ ಗೌರವ ಪ್ರಾಪ್ತಿ. ರೆಸ್ಟೋರೆಂಟ್ ವ್ಯವಹಾರದಲ್ಲಿ ಲಾಭವಾಗುವುದು. ಶುಭಸಂಖ್ಯೆ:8

ಕನ್ಯಾ: ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರ. ಷೇರು ಮೇಲಿನ ಹೂಡಿಕೆ ಮುಂದೂಡಿರಿ. ಆಸ್ತಿ ವಿಚಾರದ ಸಂಭಾಷಣೆ ಫಲಪ್ರದ. ಶುಭಸಂಖ್ಯೆ:8

ತುಲಾ: ಐಟಿ ಕೆಲಸಗಾರರಿಗೆ ಶ್ರಮ ಹೆಚ್ಚಾಗಬಹುದು. ಸೌಂದರ್ಯ ವರ್ಧಕ ವ್ಯವಹಾರದಲ್ಲಿ ಲಾಭ. ಸಾಲ ತೀರಿಸಲು ಸ್ನೇಹಿತರ ಸಹಕಾರ. ಶುಭಸಂಖ್ಯೆ: 3

ವೃಶ್ಚಿಕ: ನನೆಗುದಿಗೆ ಬಿದ್ದ ಕೆಲಸ ಪೂರ್ಣಗೊಳ್ಳುವುದು. ಧಾರ್ವಿುಕ ಚಟುವಟಿಕೆಗಳಲ್ಲಿ ಆಸಕ್ತಿ. ಅಪರಿಚಿತರಿಂದ ಸಹಾಯ ಹಸ್ತ ಸಿಗಲಿದೆ. ಶುಭಸಂಖ್ಯೆ:9

ಧನಸ್ಸು: ಉದ್ಯೋಗದಲ್ಲಿ ಉತ್ತಮ ಪ್ರಗತಿ. ಹೊಸ ಸಂಬಂಧಗಳು ಲಾಭ ತರಬಹುದು. ಬೇರೆ ರಾಜ್ಯಕ್ಕೆ ಪ್ರಯಾಣ ಮಾಡುವ ಯೋಗ. ಶುಭಸಂಖ್ಯೆ:4

ಮಕರ; ಆರ್ಥಿಕ ವಿಷಯಗಳಲ್ಲಿ ಚಿಂತನೆ ಅಗತ್ಯ. ಆರೋಗ್ಯದ ಕಡೆ ಎಚ್ಚರ ವಹಿಸಿ. ಮೆಡಿಕಲ್ ಶಾಪ್ ಮಾಲೀಕರಿಗೆ ವಿಶೇಷ ಲಾಭ. ಶುಭಸಂಖ್ಯೆ:7

ಕುಂಭ: ಹೊಸ ಯೋಜನೆ ಯಶಸ್ವಿ. ಮಗಳ ವಿವಾಹದ ಯತ್ನ ಸಫಲವಾಗಲಿದೆ. ಪ್ರಮುಖ ನಿರ್ಧಾರಕ್ಕೆ ಆತ್ಮೀಯರ ಬೆಂಬಲವಿರುವುದು. ಶುಭಸಂಖ್ಯೆ:4

ಮೀನ: ಕೋರ್ಟ್ ಕೆಲಸದಲ್ಲಿ ವಿಳಂಬ ಆದೀತು. ಭೂ ವ್ಯವಹಾರದಲ್ಲಿ ಮುಂದುವರಿದರೆ ಫಲ. ಧಾರ್ವಿುಕ ಚಿಂತನೆಯಿಂದ ಮನಶಾಂತಿ. ಶುಭಸಂಖ್ಯೆ:1