Daily Astrology  
ದಿನ ಭವಿಷ್ಯ

ನಿತ್ಯಭವಿಷ್ಯ; ಈ ರಾಶಿಯವರಿಗಿಂದು ಆಕಸ್ಮಿಕ ಧನ ಲಾಭ

ಮೇಷ: ದಾಂಪತ್ಯದಲ್ಲಿ ಪ್ರೀತಿ, ಕೆಲಸಗಾರರ ಸಹಾಯದಿಂದ ಆಪತ್ತಿನಿಂದ ಪಾರು. ಯಂತ್ರೋಪಕರಣಗಳ ಖರೀದಿಯಲ್ಲಿ ಲಾಭ. ಶುಭಸಂಖ್ಯೆ: 6
ವೃಷಭ: ಯತ್ನ ಕಾರ್ಯಗಳಲ್ಲಿ ಮುನ್ನಡೆ. ಯಂತ್ರೋಪಕರಣಗಳ ದುರಸ್ತಿಗೆ ಅನಿರೀಕ್ಷಿತ ಖರ್ಚು. ಏಲಕ್ಕಿ ಮೆಣಸು ಕೃಷಿಯಲ್ಲಿ ಲಾಭ. ಶುಭಸಂಖ್ಯೆ:2
ಮಿಥುನ: ಖಾಸಗಿ ಉದ್ಯೋಗದಲ್ಲಿ ಬಡ್ತಿ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಮನಸ್ಸು ಚಂಚಲವಾಗುವುದು. ವಾಹನ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 8
ಕಟಕ: ನಿವೇಶನ ಖರೀದಿಯಲ್ಲಿ ಇದ್ದ ದಾಖಲೆ ಸಮಸ್ಯೆಗೆ ಪರಿಹಾರ. ಆಕಸ್ಮಿಕ ಧನ ಲಾಭ. ತಾಯಿಯ ಅನಾರೋಗ್ಯ ಸಮಸ್ಯೆ ನಿವಾರಣೆ. ಶುಭಸಂಖ್ಯೆ: 9
ಸಿಂಹ: ಗುರು ಹಿರಿಯರ ಸಲಹೆಯಿಂದ ಕಾರ್ಯ ಸಾಧನೆ. ದಿನಸಿ ಪದಾರ್ಥಗಳ ವ್ಯಾಪಾರದಲ್ಲಿ ಲಾಭ. ಶುಭ ಕಾರ್ಯಕ್ಕೆ ಅಧಿಕ ಖರ್ಚು. ಶುಭಸಂಖ್ಯೆ: 7
ಕನ್ಯಾ: ಬಂಧುಗಳಿಂದ ಆರ್ಥಿಕ ಸಹಾಯ ದೊರೆಯಲಿದೆ. ಸಂಗಾತಿ ಜತೆಗೆ ವಿದೇಶ ಪ್ರಯಾಣ. ಹಣದ ಅಡಚಣೆಗೆ ಪರಿಹಾರ. ಶುಭಸಂಖ್ಯೆ:6
ತುಲಾ: ನಿಮ್ಮ ಪ್ರತಿಭೆಗೆ ಸಾರ್ವಜನಿಕ ಪ್ರಶಂಸೆ. ಹೋಟೆಲ್ ವ್ಯವಹಾರದಲ್ಲಿ ಲಾಭದ ಪ್ರಮಾಣ ಹೆಚ್ಚಲಿದೆ. ವಾಹನ ದುರಸ್ತಿಗೆ ಖರ್ಚು. ಶುಭಸಂಖ್ಯೆ:3
ವೃಶ್ಚಿಕ: ಹೃದಯ ಸಂಬಂಧಿ ರೋಗದಿಂದ ಸಮಸ್ಯೆ. ಎಲೆಕ್ಟ್ರಾನಿಕ್ಸ್ ಉಪಕರಣಗಳ ಮಾರಾಟದಲ್ಲಿ ಲಾಭ. ಸ್ತ್ರೀಯರಿಗೆ ತಾಳ್ಮೆ ಅಗತ್ಯ. ಶುಭಸಂಖ್ಯೆ:1
ಧನುಸ್ಸು: ನಟನಾ ಕ್ಷೇತ್ರದಲ್ಲಿ ಸಾಧನೆ ಮಾಡುವಿರಿ. ಅಪರಿಚಿತರಿಂದ ಲಾಭವಿದೆ. ಹೃದಯ ಸಂಬಂಧಿ ರೋಗ ಉಪಶಮನವಾಗುವುದು. ಶುಭಸಂಖ್ಯೆ:8
ಮಕರ: ಸಾರ್ವಜನಿಕವಾಗಿ ಪ್ರೀತಿ ವಿಶ್ವಾಸ ಗಳಿಸುವಿರಿ. ಯಾರನ್ನೂ ಹೆಚ್ಚಾಗಿ ನಂಬಬೇಡಿ. ನೂತನ ವಾಹನ ಖರೀದಿಗೆ ಶುಭ ಸಮಯ. ಶುಭಸಂಖ್ಯೆ: 3
ಕುಂಭ: ಸ್ಥಿರಾಸ್ತಿ ಮಾರಾಟ ಮಾಡಲು ನಿರ್ಧಾರ. ಪೀಠೋಪಕರಣಗಳ ಖರೀದಿಯಲ್ಲಿ ಲಾಭ. ಧಾರ್ವಿುಕ ವೃತ್ತಿಪರರಿಗೆ ಬಿಡುವಿಲ್ಲದ ಕೆಲಸ. ಶುಭಸಂಖ್ಯೆ:3
ಮೀನ: ಕೊಟ್ಟ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿ ಹೆಸರುಗಳಿಸುವಿರಿ. ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ನಿರೀಕ್ಷಿತ ಆದಾಯ. ಶುಭಸಂಖ್ಯೆ:5