Daily Astrology  
ದಿನ ಭವಿಷ್ಯ

ನಿತ್ಯ ಭವಿಷ್ಯ: ಈ ರಾಶಿಯವರು ಹಣಕಾಸಿನಲ್ಲಿ ವಿಚಾರದಲ್ಲಿ ದುಡುಕಬೇಡಿ

ಮೇಷ: ಮಾಡುವ ಕೆಲಸದಲ್ಲಿ ಹೆಚ್ಚು ಉತ್ಸಾಹ ಇರುತ್ತದೆ. ಔಷಧ ಮಾರಾಟದಲ್ಲಿ ಲಾಭ. ತುರ್ತಾಗಿ ದೂರ ಪ್ರಯಾಣ ನಿಗದಿಯಾಗಲಿದೆ. ಶುಭಸಂಖ್ಯೆ:5
ವೃಷಭ: ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ. ಕುಟುಂಬದ ಜತೆ ಸಂತೋಷದ ವಿಹಾರ. ಮಹಿಳೆಯರಿಗೆ ವಸ್ತ್ರ, ಆಭರಣ ಲಾಭ ಸಾಧ್ಯತೆ. ಶುಭಸಂಖ್ಯೆ: 1
ಮಿಥುನ: ಪ್ರಭಾವಿ ವ್ಯಕ್ತಿಗಳ ಸಂಪರ್ಕದಿಂದ ಕಾರ್ಯಸಾಧನೆ. ರಿಯಲ್ ಎಸ್ಟೇಟ್​ನಲ್ಲಿ ಹೊಸ ಪರಿಚಯ ಉಪಯೋಗಕ್ಕೆ ಬರುತ್ತವೆ. ಶುಭಸಂಖ್ಯೆ:9
ಕಟಕ: ಕೆಲಸದ ಒತ್ತಡ. ಸ್ವ-ಉದ್ಯೋಗದಲ್ಲಿರುವ ಮಹಿಳೆಯರ ಮನಸ್ಸು ಅಸ್ಥಿರವಾದೀತು. ವೈಮಾನಿಕ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ:8
ಸಿಂಹ: ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ. ನಿಮ್ಮಲ್ಲಿರುವ ನಾಯಕತ್ವದ ಗುಣಗಳು ಇಂದು ಪ್ರಯೋಜನಕ್ಕೆ ಬರಲಿವೆ. ಶುಭಸಂಖ್ಯೆ:2
ಕನ್ಯಾ: ವಾಣಿಜ್ಯ ವಿದ್ಯಾರ್ಥಿಗಳಿಗೆ ಯಶಸ್ಸು. ಸಂಗಾತಿಯ ಆರೋಗ್ಯದ ಕಡೆ ಗಮನ ಇರಲಿ. ಕಾಂಡಿಮೆಂಟ್ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 7
ತುಲಾ: ಸಂಬಂಧಗಳಲ್ಲಿ ಇದ್ದ ಬಿರುಕು ಇತ್ಯರ್ಥ. ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗುತ್ತವೆ. ಕಿರುತೆರೆ ನಿರ್ದೇಶಕರಿಗೆ ಶುಭದಿನ.ಶುಭಸಂಖ್ಯೆ:2
ವೃಶ್ಚಿಕ: ಆತ್ಮವಿಶ್ವಾಸ ವೃದ್ಧಿಸುವ ಘಟನೆ ನಡೆಯಲಿದೆ. ಹಣಕಾಸಿನಲ್ಲಿ ವಿಚಾರದಲ್ಲಿ ದುಡುಕಬೇಡಿ. ಸಿದ್ಧ ಉಡುಪು ಮಾರಾಟದಲ್ಲಿ ಲಾಭ. ಶುಭಸಂಖ್ಯೆ:4
ಧನುಸ್ಸು: ಸಾಲಗಾರರ ಕಿರಿಕಿರಿಯಿಂದ ಅಂತೂ ಮುಕ್ತಿ. ಸಂಗೀತ ಸಂಯೋಜಕರಿಗೆ ಬೇಡಿಕೆ. ಆಧುನಿಕ ನೃತ್ಯ ಕಲಾವಿದರಿಗೆ ವಿಶೇಷ ವೇದಿಕೆ. ಶುಭಸಂಖ್ಯೆ:6
ಮಕರ: ಕೆಲಸದಲ್ಲಿ ಹೊಣೆಗಾರಿಕೆ ಹೆಚ್ಚಲಿದೆ. ಕುಸುರಿಯ ಪ್ರವೀಣರಿಗೆ ಧನ ಲಾಭ. ಖಾದಿ ಉಡುಪುಗಳ ತಯಾರಕರಿಗೆ ಬೇಡಿಕೆ ಹೆಚ್ಚಲಿದೆ. ಶುಭಸಂಖ್ಯೆ:1
ಕುಂಭ: ಹೊಸ ಆಲೋಚನೆ ಕಾರ್ಯಗತ. ಸ್ನೇಹಿತರ ಸಹಕಾರದಿಂದ ಆಪತ್ತಿನಿಂದ ಪಾರು. ಬ್ಯಾಂಕ್ ಉದ್ಯೋಗಿಗಳಿಗೆ ವರ್ಗಾವಣೆ. ಶುಭಸಂಖ್ಯೆ:8
ಮೀನ: ಕೇಂದ್ರ ಸರ್ಕಾರಿ ನೌಕರರಿಗೆ ವರ್ಗಾವಣೆ. ಡೇರಿ ಉತ್ಪನ್ನಗಳ ಮಾರಾಟದಲ್ಲಿ ಹೆಚ್ಚು ಲಾಭ. ಬದಲಾದ ಕೃಷಿಯಿಂದ ಲಾಭಗಳಿಕೆ. ಶುಭಸಂಖ್ಯೆ:2