ಮೇಷ: ವ್ಯವಹಾರ ಕ್ಷೇತ್ರ ಅಭಿವೃದ್ಧಿಪಡಿಸಲು ಹಣಕಾಸಿನ ಅನುಕೂಲ ಒದಗಿ ಬರಲಿದೆ. ಆರ್ಥಿಕ ಇಲಾಖೆಯ ಅಧಿಕಾರಿಗಳಿಗೆ ವರ್ಗಾವಣೆ. ಶುಭಸಂಖ್ಯೆ: 4
ವೃಷಭ: ಬರಹಗಾರರಿಗೆ ಸಮಾಜದಲ್ಲಿ ಸನ್ಮಾನ. ಧಾರ್ವಿುಕ ಕಾರ್ಯದಲ್ಲಿ ಭಾಗವಹಿಸುವಿರಿ. ಕ್ರೀಡಾಪಟುಗಳಿಗೆ ವಿದೇಶ ಪ್ರಯಾಣ. ಶುಭಸಂಖ್ಯೆ: 9
ಮಿಥುನ: ಸಂಗಾತಿಯೊಂದಿಗೆ ಇದ್ದ ಮನಸ್ತಾಪ ಬಗೆಹರಿಯಲಿದೆ. ಸೀರೆ ಮಾರಾಟದಲ್ಲಿ ಲಾಭ. ಪ್ರಭಾವಿ ವ್ಯಕ್ತಿಗಳ ಸಂಪರ್ಕವಾಗುವುದು. ಶುಭಸಂಖ್ಯೆ: 7
ಕಟಕ: ಅವಿವಾಹಿತರಿಗೆ ವಿವಾಹ ಕೂಡಿ ಬರಲಿದೆ. ಕೇಂದ್ರ ಸರ್ಕಾರಿ ಸೇವೆಯ ಆಸೆ ಈಡೇರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ.ಶುಭಸಂಖ್ಯೆ:5
ಸಿಂಹ: ಸ್ನೇಹಿತನಿಂದ ಕಷ್ಟಕಾಲದಲ್ಲಿ ಸಹಾಯ. ಕುಟುಂಬದೊಂದಿಗೆ ದೂರ ಪ್ರಯಾಣ. ಕೃಷಿ ಜಮೀನಿನ ಮಾರಾಟದಲ್ಲಿ ಅಧಿಕ ಲಾಭ. ಶುಭಸಂಖ್ಯೆ:8
ಕನ್ಯಾ: ವಿದ್ಯುತ್ ಉಪಕರಣ ಕಾರ್ಖಾನೆ ಮಾಲೀಕರಿಗೆ ಲಾಭ. ನೂತನ ಗೃಹ ನಿರ್ಮಾಣ ಪ್ರಾರಂಭ. ರೇಷ್ಮೆ, ಜೇನು ಕೃಷಿಕರಿಗೆ ಧನ ಲಾಭ. ಶುಭಸಂಖ್ಯೆ: 6
ತುಲಾ: ದುಬಾರಿ ವಸ್ತುಗಳ ಖರೀದಿಗೆ ಹಣ ವೆಚ್ಚ. ಬ್ಯಾಂಕಿಂಗ್ ನೌಕರರಿಗೆ ವರ್ಗಾವಣೆ. ಐಟಿ ಉದ್ಯೋಗಿಗಳಿಗೆ ಹೊಸ ಪ್ರಾಜೆಕ್ಟ್ ಲಭ್ಯ. ಶುಭಸಂಖ್ಯೆ:3
ವೃಶ್ಚಿಕ: ಕಾನೂನು ಸಲಹೆಗಾರ ವೃತ್ತಿಯಲ್ಲಿ ಹಣ ಗಳಿಸುವಿರಿ. ಧಾರ್ವಿುಕ ವ್ಯಕ್ತಿಗಳ ಮಾರ್ಗದರ್ಶನ ಸಿಗಲಿದೆ. ಪದವಿ ಕೈತಪ್ಪುವ ಸಾಧ್ಯತೆ. ಶುಭಸಂಖ್ಯೆ:6
ಧನುಸ್ಸು: ಭೂ ವ್ಯವಹಾರದಲ್ಲಿ ಅಸಮಾಧಾನ. ಸಂಗಾತಿಯ ಮಾರ್ಗದರ್ಶನದೊಂದಿಗೆ ನೂತನ ಮನೆ ಖರೀದಿ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ:4
ಮಕರ: ಕುಟುಂಬದೊಂದಿಗೆ ವಿದೇಶ ಪ್ರಯಾಣ ಯೋಗ. ಐಷಾರಾಮಿ ಜೀವನಕ್ಕೆ ಅಧಿಕ ಖರ್ಚು. ಷೇರು ಹೂಡಿಕೆಗೆ ಸೂಕ್ತ ಸಮಯ. ಶುಭಸಂಖ್ಯೆ:7
ಕುಂಭ: ಸಾಲ ತಿರುಗಿ ಬರಲಿದೆ. ಕ್ರೀಡಾ ಪರಿಣಿತರಿಗೆ ಬೇಡಿಕೆ. ಗೃಹ ನಿರ್ವಣದ ಅಡ್ಡಿ ನಿವಾರಣೆ. ರಾಜಕೀಯದವರಿಗೆ ಅಧಿಕಾರ ಪ್ರಾಪ್ತಿ. ಶುಭಸಂಖ್ಯೆ:2
ಮೀನ: ಕೃಷಿ ಉತ್ಪನ್ನಗಳ ಮಾರಾಟದಲ್ಲಿ ಅಧಿಕ ಲಾಭ. ಸಹೋದ್ಯೋಗಿಗಳ ನೆರವು. ನನೆಗುದಿಗೆ ಬಿದ್ದ ಕೆಲಸಕ್ಕೆ ಮರುಚಾಲನೆ ಸಿಗಲಿದೆ. ಶುಭಸಂಖ್ಯೆ: 7