ಜ್ಯೋತಿಷ್ಯ

ಈ ರಾಶಿಯವರಿಂದು ವ್ಯಾಪಾರ ಒಪ್ಪಂದಗಳನ್ನು ಮುಂದೂಡುವುದು ಒಳ್ಳೆಯದು.: ನಿತ್ಯಭವಿಷ್ಯ


ಮೇಷ: ಆಹಾರ ಸೇವನೆಯಲ್ಲಿ ಎಚ್ಚರ. ವ್ಯಾಪಾರದಲ್ಲಿ ವಿದೇಶಿ ಹೂಡಿಕೆದಾರ ಸೇರ್ಪಡೆ. ಆರೋಗ್ಯ ಇಲಾಖೆಯ ಕ್ಷೇತ್ರದವರಿಗೆ ಶುಭ. ಶುಭಸಂಖ್ಯೆ: 9

ವೃಷಭ: ರಕ್ತ ಸಂಬಂಧೀ ತೊಂದರೆ. ವಿಚ್ಚೇದನ ವಿಷಯದಲ್ಲಿ ದೃಢ ತೀರ್ಮಾನ ಅಗತ್ಯ. ಆಹಾರ ಪದಾರ್ಥಗಳ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:3

ಮಿಥುನ: ಸಮಸ್ಯೆಗಳಿಗೆ ಆತ್ಮವಿಶ್ವಾಸದಿಂದ ಪರಿಹಾರ ಹುಡುಕುವಿರಿ. ಆದಾಯಕ್ಕೆ ತಕ್ಕ ವೆಚ್ಚ. ಮನೆ ಬದಲಾವಣೆ ಮಾಡುವ ಯೋಚನೆ. ಶುಭಸಂಖ್ಯೆ:1

ಕಟಕ: ನಿಮ್ಮ ಪ್ರತಿಭೆಗೆ ದೈವಾನುಗ್ರಹ ಇರಲಿದೆ. ಉನ್ನತ ಅಧ್ಯಯನದಲ್ಲಿ ತೊಂದರೆ. ಬಂಧುಗಳಿಂದ ಸಾಲ ಮರುಪಾವತಿಗೆ ಸಹಕಾರ. ಶುಭಸಂಖ್ಯೆ: 8

ಸಿಂಹ: ಆಭರಣ ಮಾರಾಟಗಾರರಿಗೆ ಶುಭದಿನ. ಧಾರ್ವಿುಕ ವಿಚಾರದಲ್ಲಿ ಆಸಕ್ತಿ. ಚಿನ್ನ ಬೆಳ್ಳಿ ವಸ್ತುಗಳ ಖರೀದಿ ಮಾಡುವ ಸಾಧ್ಯತೆ ಇದೆ. ಶುಭಸಂಖ್ಯೆ:9

ಕನ್ಯಾ: ವ್ಯಾಪಾರ ಒಪ್ಪಂದಗಳನ್ನು ಮುಂದೂಡುವುದು ಒಳ್ಳೆಯದು. ಹಿತ ಶತ್ರುಗಳ ಬಗ್ಗೆ ಮೃದು ಧೋರಣೆ. ಕುಟುಂಬದಲ್ಲಿ ಅಶಾಂತಿ. ಶುಭಸಂಖ್ಯೆ: 6

ತುಲಾ: ಸಣ್ಣ ವ್ಯಾಪಾರದಲ್ಲಿ ನಿರೀಕ್ಷಿತ ಆದಾಯ. ಮಹಿಳಾ ವಿದ್ಯಾರ್ಥಿಗಳಿಗೆ ಹೆಚ್ಚು ಶ್ರಮದ ಅಗತ್ಯವಿದೆ. ಗರ್ಭಿಣಿಯರಿಗೆ ವಿಶೇಷ ದಿನ. ಶುಭಸಂಖ್ಯೆ: 5

ವೃಶ್ಚಿಕ: ಕೃಷಿ ಬೆಳೆಗಳ ಕ್ರಯವಿಕ್ರಮದಲ್ಲಿ ಮೋಸ. ಹೋಟೆಲ್ ವ್ಯವಹಾರದಲ್ಲಿ ಲಾಭ ಬರುವುದು. ಷೇರು ವ್ಯವಹಾರದಲ್ಲಿ ಎಚ್ಚರಿಕೆ. ಶುಭಸಂಖ್ಯೆ:8

ಧನಸ್ಸು: ಸಾಲವನ್ನು ನೀಡಬೇಡಿ. ವಸ್ತ್ರಗಳ ರಫ್ತಿನ ವ್ಯಾಪಾರದಲ್ಲಿ ಲಾಭವಾಗುವುದು. ಯೋಚನಾಬದ್ಧ ನಿರ್ಧಾರದಿಂದ ಸೂಕ್ತ ಫಲ. ಶುಭಸಂಖ್ಯೆ: 7

ಮಕರ: ಶಾರೀರಿಕ ಪೀಡೆಗೆ ಸೂಕ್ತ ಚಿಕಿತ್ಸೆ. ಸಗಟು ವ್ಯಾಪಾರದಲ್ಲಿ ಲಾಭ ಬರುವ ದಿನ. ಸಹೋದರರಿಂದ ಸಹಕಾರ ದೊರೆಯುವುದು. ಶುಭಸಂಖ್ಯೆ:9

ಕುಂಭ: ಗಣಿ ವ್ಯವಹಾರದಲ್ಲಿ ಆದಾಯ. ದಾಂಪತ್ಯದಲ್ಲಿ ಸಾಮರಸ್ಯ ಇರುವುದು. ಮರದ ಕೆಲಸದಲ್ಲಿ ಒತ್ತಡ. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ: 1

ಮೀನ: ಶಿಕ್ಷಣ ಸಂಸ್ಥೆಯವರಿಗೆ ಅನುಕೂಲಕರ ದಿವಸ. ಹಿರಿಯರಿಗೆ ರಕ್ತದೊತ್ತಡದ ಸಮಸ್ಯೆ ಕಾಡೀತು. ಹೊಸ ಒಪ್ಪಂದಗಳಿಂದ ಲಾಭ. ಶುಭಸಂಖ್ಯೆ:3