ಮೇಷ: ಭಾಗ್ಯದ ಚಂದ್ರನಿಂದ ಪ್ರಗತಿ ಕಾಣುವಿರಿ. ಕ್ರೀಡಾಳು ಗಳಿಗೆ ಸನ್ಮಾನ. ಆಹಾರ ಧಾನ್ಯ ವ್ಯಾಪಾರದಲ್ಲಿ ಲಾಭ. ದಿನಾಂತ್ಯದಲ್ಲಿ ಬೇಸರ. ಶುಭಸಂಖ್ಯೆ: 5
ವೃಷಭ: ಉದ್ಯಮಿ ಮಹಿಳೆಯರಿಗೆ ಹೆಚ್ಚಿನ ಒತ್ತಡ. ಕಟ್ಟಡಗಳ ಸಾಮಗ್ರಿಗಳ ಖರೀದಿಯಲ್ಲಿ ಮೋಸವಾದೀತು. ಧಾರ್ವಿುಕ ವ್ಯಕ್ತಿಗಳ ಭೇಟಿ. ಶುಭಸಂಖ್ಯೆ:1
ಮಿಥುನ: ಶಿಕ್ಷಕ ವೃತ್ತಿಯವರಿಗೆ ಶುಭದಾಯಕ ದಿನ. ಕಮಿಷನ್ ವ್ಯವಹಾರದಲ್ಲಿ ನಿರೀಕ್ಷಿತ ಆದಾಯ. ವಾಹನ ಚಾಲನೆಯಲ್ಲಿ ಎಚ್ಚರ ವಹಿಸಿ. ಶುಭಸಂಖ್ಯೆ: 9
ಕಟಕ: ಮಾನಸಿಕ ಉತ್ಸಾಹ ವೃದ್ಧಿಯಾಗುವುದು. ಮಿತ್ರರಿಂದ ವಿರೋಧ ಬರಬಹುದು. ಕೃಷಿ ಮೂಲದ ಉತ್ಪಾದಕರಿಗೆ ಲಾಭ. ಶುಭಸಂಖ್ಯೆ: 4
ಸಿಂಹ: ಹಣಕಾಸಿನ ವ್ಯವಹಾರದಲ್ಲಿ ಲಾಭ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅಡೆತಡೆ. ಚಂಚಲ ಮನಸ್ಸು ಸಮಸ್ಯೆಗೆ ಕಾರಣವಾಗಲಿದೆ. ಶುಭಸಂಖ್ಯೆ: 5
ಕನ್ಯಾ: ಹೋಟೆಲ್ ಉದ್ಯಮದಲ್ಲಿ ಬಂಡವಾಳ ಹೂಡಿಕೆ ಮಾಡುವಿರಿ. ಗಣ್ಯ ವ್ಯಕ್ತಿಗಳ ಸಹಾಯ. ಸಣ್ಣಪುಟ್ಟ ಗಾಯಗಳಾಗುವ ಸಂಭವ. ಶುಭಸಂಖ್ಯೆ: 1
ತುಲಾ: ಸ್ತ್ರೀಯರಿಗೆ ಶುಭದಿನವಲ್ಲ. ವೃತ್ತಿಯಲ್ಲಿ ಉನ್ನತ ಹುದ್ದೆಗೆ ನೇಮಕವಾಗಿ ಸಂತಸ. ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ಅನುಕೂಲ. ಶುಭಸಂಖ್ಯೆ: 3
ವೃಶ್ಚಿಕ: ಕಾರ್ವಿುಕರಿಗೆ ಅಧಿಕ ಶ್ರಮವಾದರೂ, ಉತ್ತಮ ಗಳಿಕೆ. ಯಂತ್ರೋಪಕರಣಗಳಿಂದ ಎಚ್ಚರ. ಕುಟುಂಬದಲ್ಲಿ ಸಾಮರಸ್ಯ ಕಾಪಾಡಿ. ಶುಭಸಂಖ್ಯೆ: 8
ಧನಸ್ಸು: ಹೈನುಗಾರಿಕೆಯಲ್ಲಿ ಅಧಿಕ ಲಾಭ ಬರಲಿದೆ. ನೀರು ಸರಬರಾಜು ಕಾರ್ಯದಲ್ಲಿ ಆದಾಯ. ಲೇಖಕರಿಗೆ ಪ್ರಶಸ್ತಿ, ಸನ್ಮಾನ ಲಭಿಸುತ್ತದೆ. ಶುಭಸಂಖ್ಯೆ: 2
ಮಕರ: ಸಂಗಾತಿಯೊಂದಿಗೆ ಸಮಾಧಾನದಿಂದ ವರ್ತಿಸಿ. ವಕೀಲರಿಗೆ ಗೆಲುವು ಕಷ್ಟವಾಗಬಹುದು. ಇಲಾಖಾ ಪರೀಕ್ಷೆಯಲ್ಲಿ ಬಡ್ತಿ ಸಿಗಲಿದೆ. ಶುಭಸಂಖ್ಯೆ:7
ಕುಂಭ: ಧಾರ್ವಿುಕ ಕಾರ್ಯ ಮಾಡುವಿರಿ. ಸರ್ಕಾರಿ ಉದ್ಯೋಗಿಗಳಿಗೆ ಮುಂಬಡ್ತಿ ದೊರೆಯಲಿದೆ. ರಫ್ತು ವ್ಯವಹಾರದವರಿಗೆ ವಿಶೇಷ ದಿನ. ಶುಭಸಂಖ್ಯೆ:1
ಮೀನ: ಭೂವಿವಾದ, ಎಲೆಕ್ಟ್ರಾನಿಕ್ಸ್ ವ್ಯಾಪಾರದಲ್ಲಿ ಪ್ರಗತಿಯಾಗುವುದು. ನೂತನ ವಸ್ತು ಖರೀದಿಗೆ ಧನವ್ಯಯ. ಹೊಸ ವಾಹನ ಖರೀದಿ. ಶುಭಸಂಖ್ಯೆ:9