ಜ್ಯೋತಿಷ್ಯ

ನಿತ್ಯಭವಿಷ್ಯ: ಈ ರಾಶಿಯವರಿಗಿಂದು ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ

ಮೇಷ: ಸಣ್ಣವಿಷಯದಿಂದ ಕಲಹ. ಮಕ್ಕಳಿಂದ ಶುಭಸುದ್ದಿ ಕೇಳುವಿರಿ. ಉತ್ತಮ ಬುದ್ಧಿಶಕ್ತಿ. ಕೆಲಸ ಕಾರ್ಯಗಳಲ್ಲಿ ಜಯ. ಸಾಲಬಾಧೆ. ಶುಭಸಂಖ್ಯೆ: 5

ವೃಷಭ: ಭೂಮಿ ಕೊಳ್ಳುವಿಕೆಗೆ ಚಾಲನೆ. ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ. ಮನಕ್ಲೇಷ. ಸ್ತ್ರೀಯರಿಂದ ಲಾಭ. ತಾಯಿಯಿಂದ ನೆರವು. ಶುಭಸಂಖ್ಯೆ: 9

ಮಿಥುನ: ಆತ್ಮೀಯರ ಆಗಮನದಿಂದ ಮನಶ್ಶಾಂತಿ ಸಿಗಲಿದೆ. ಪ್ರತಿಭೆಗೆ ತಕ್ಕ ಫಲ. ಮಾನಸಿಕ ನೆಮ್ಮದಿ. ಬಾಕಿ ಹಣ ವಸೂಲಿಯಾಗುವುದು. ಶುಭಸಂಖ್ಯೆ:4

ಕಟಕ: ಆಧ್ಯಾತ್ಮಿಕ ವಿಚಾರದಲ್ಲಿ ಹಿರಿಯರ ಬೆಂಬಲ. ಸ್ಥಳ ಬದಲಾವಣೆ. ಅಪಕೀರ್ತಿ. ವಾಹನದಿಂದ ತೊಂದರೆಯಾಗುವ ಸಾಧ್ಯತೆ. ಶುಭಸಂಖ್ಯೆ:7

ಸಿಂಹ: ಅನ್ಯ ಜನರಲ್ಲಿ ವಿಶ್ವಾಸ ತೋರುವಿರಿ. ಶತ್ರು ಬಾಧೆ. ಆರ್ಥಿಕ ಪರಿಸ್ಥಿತಿಯಲ್ಲಿ ಏರು ಪೇರು. ಉದ್ಯೋಗದಲ್ಲಿ ಪ್ರಗತಿ. ಮನಃಶಾಂತಿ. ಶುಭಸಂಖ್ಯೆ:3

ಕನ್ಯಾ: ನೂತನ ಗೃಹಾರಂಭ. ಸಲ್ಲದ ಅಪವಾದ. ಉದ್ಯೋಗದಲ್ಲಿ ಕಿರಿ-ಕಿರಿ. ವಾಹನ ಅಪಘಾತ ಸಾಧ್ಯತೆಯಿದೆ, ಎಚ್ಚರದಿಂದಿರಿ. ಶುಭಸಂಖ್ಯೆ:6

ತುಲಾ: ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ. ಅಧಿಕ ಧನವ್ಯಯ. ಔಷಧಿ ವ್ಯಾಪಾರಿಗಳಿಗೆ ನಷ್ಟ. ಪತಿ-ಪತ್ನಿಯರಲ್ಲಿ ವಿರಸ ಬೇಡ. ಶುಭಸಂಖ್ಯೆ:9

ವೃಶ್ಚಿಕ: ಸಾಲಗಾರರಿಂದ ತೊಂದರೆ. ಮಾನಸಿಕ ಒತ್ತಡ. ಕಾರ್ಖಾನೆಯಲ್ಲಿ ಅಶಾಂತಿ, ಕಾರ್ಯ ವಿಕಲ್ಪ. ಅತಿಯಾದ ನೋವು ಕಾಡೀತು. ಶುಭಸಂಖ್ಯೆ:3

ಧನಸ್ಸು: ಕಲಾವಿದರು, ಕಿರುತೆರೆ ನಟರಿಗೆ ವಿಶೇಷ ಸನ್ಮಾನ. ಗುರು ಹಿರಿಯರಲ್ಲಿ ಭಕ್ತಿ. ಸರ್ಕಾರಿ ಸ್ಥಾನಮಾನ. ಮನಸ್ಸಿನ ಭಯ ನಿವಾರಣೆ. ಶುಭಸಂಖ್ಯೆ:7

ಮಕರ: ಪ್ರಕೃತಿ ವಿಕೋಪದ ಭೀತಿ. ಸ್ತ್ರೀ ಸಂಬಂಧ ವ್ಯವಹಾರದ ಚಿಂತೆ. ಅಕಾಲ ಭೋಜನ ಮಾಡಬೇಕಾದೀತು. ಹಳೇ ಗೆಳೆಯನ ಭೇಟಿ. ಶುಭಸಂಖ್ಯೆ: 9

ಕುಂಭ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ. ಆಲಸ್ಯ ಮನೋಭಾವ. ಅನಗತ್ಯತಿರುಗಾಟ. ಪಿತ್ರಾರ್ಜಿತ ಆಸ್ತಿಯಲ್ಲಿ ಲಾಭ. ದಾಯಾದಿ ಕಲಹ. ಶುಭಸಂಖ್ಯೆ:5

ಮೀನ: ಕೆಲಸ ಕಾರ್ಯಗಳಲ್ಲಿ ಜಯ. ವಿದ್ಯಾರ್ಥಿಗಳಲ್ಲಿ ಹಿನ್ನಡೆ. ನೀಚ ಜನರ ಸಹವಾಸ. ಸಾಮಾನ್ಯ ಸೌಖ್ಯಕ್ಕೆ ಧಕ್ಕೆ. ಸ್ಥಳ ಬದಲಾವಣೆ. ಶುಭಸಂಖ್ಯೆ: 7