ಜ್ಯೋತಿಷ್ಯ

ನಿತ್ಯಭವಿಷ್ಯ: ಈ ರಾಶಿಯವರಿಗೆ ಪ್ರೇಮ ವಿಚಾರದಲ್ಲಿ ಅಡೆತಡೆ.

ಮೇಷ: ಕೂಡಿಟ್ಟ ಹಣ ನಷ್ಟವಾಗುವುದು. ವಾಹನ ಚಾಲನೆಯಲ್ಲಿ ಎಚ್ಚರಿಕೆ ಇರಲಿ. ಆಸ್ತಿ ವಿಚಾರವಾಗಿ ನ್ಯಾಯಾಲಯಕ್ಕೆ ಅಲೆದಾಟ. ಶುಭಸಂಖ್ಯೆ: 9

ವೃಷಭ: ದಾಂಪತ್ಯದಲ್ಲಿ ಹೊಂದಾಣಿಕೆ. ಮಹಿಳಾ ನಿರುದ್ಯೋಗಿಗಳಿಗೆ ಉದ್ಯೋಗದ ಭರವಸೆ. ಸಂಗಾತಿಯಿಂದ ಸೂಕ್ತ ಸಲಹೆ. ಶುಭಸಂಖ್ಯೆ: 2

ಮಿಥುನ: ಸಾಲ ಮಾಡುವ ಸಂಭವ. ಕುಟುಂಬ ಸಮೇತ ಸ್ವಗ್ರಾಮಕ್ಕೆ ಪ್ರಯಾಣ ಮಾಡುವಿರಿ. ಮಾತಿನಿಂದ ಶತ್ರುಗಳು ಅಧಿಕವಾದಾರು. ಶುಭಸಂಖ್ಯೆ: 9

ಕಟಕ: ದಿನಸಿ ವ್ಯಾಪಾರಿಗಳಿಗೆ ಕಳವಿನ ಭೀತಿ. ಪ್ರೇಮ ವಿಚಾರದಲ್ಲಿ ಅಡೆತಡೆ. ಹಿರಿಯರಿಗೆ ಆರೋಗ್ಯ ಸಮಸ್ಯೆ. ಕುಲದೇವರ ದರ್ಶನ. ಶುಭಸಂಖ್ಯೆ: 3

ಸಿಂಹ: ಆಸ್ತಿ ವಿಚಾರದಲ್ಲಿ ಗೊಂದಲ. ನೆರೆಹೊರೆಯವ ರೊಡನೆ ಕಿರಿಕಿರಿ. ಸಹೋದರರೊಂದಿಗೆ ವೈರತ್ವ. ಮಕ್ಕಳಿಗೆ ಉನ್ನತ ಹುದ್ದೆ ಪ್ರಾಪ್ತಿ. ಶುಭಸಂಖ್ಯೆ: 7

ಕನ್ಯಾ: ತೆಂಗು ಮತ್ತು ಭತ್ತದ ಬೆಳೆಗಾರರಿಗೆ ಧನಲಾಭ. ಕುಟುಂಬದ ಸಮಸ್ಯೆಗಳಿಂದ ಮುಕ್ತಿ. ಮಗಳ ವಿವಾಹ ಸಮಸ್ಯೆ. ನೆಮ್ಮದಿ ಪ್ರಾಪ್ತಿ. ಶುಭಸಂಖ್ಯೆ: 6

ತುಲಾ: ವಾಹನದಿಂದ ಅನಾಹುತ. ಕಲಾವಿದರು ಅವಕಾಶ ವಂಚಿತರಾಗುವಿರಿ. ಪೆಟ್ರೋಲ್ ಬಂಕ್ ಮಾಲೀಕರಿಗೆ ಕೆಲಸಗಾರರಿಂದ ನಷ್ಟ. ಶುಭಸಂಖ್ಯೆ: 1

ವೃಶ್ಚಿಕ: ನೂತನ ಗೃಹ ನಿರ್ವಣಕ್ಕೆ ಚಾಲನೆ. ಅಧಿಕ ನಿದ್ರೆ ಮಾಡುವಿರಿ. ಆತ್ಮೀಯರ ಜೊತೆ ವಿಹಾರ. ಮಹಿಳೆಯರಿಗೆ ಆಭರಣ ಲಾಭ. ಶುಭಸಂಖ್ಯೆ: 8

ಧನಸ್ಸು: ನನೆಗುದಿಗೆ ಬಿದ್ದ ಕೆಲಸಕ್ಕೆ ಮರುಚಾಲನೆ. ಪಾಲುದಾರಿಕೆಯಲ್ಲಿ ಭಿನ್ನಾಭಿಪ್ರಾಯ. ಮಕ್ಕಳಿಂದ ಅನುಕೂಲ. ಅಧಿಕ ಆದಾಯ. ಶುಭಸಂಖ್ಯೆ: 6

ಮಕರ: ಪಶು ಸಂಗೋಪನೆಯಲ್ಲಿ ಕೆಲಸಗಾರರ ಸಮಸ್ಯೆಯಿಂದ ನಷ್ಟ. ಆರೋಗ್ಯ ವ್ಯತ್ಯಾಸದಿಂದ ಸಮಸ್ಯೆ, ಉದ್ಯೋಗದಲ್ಲಿ ವರ್ಗಾವಣೆ. ಶುಭಸಂಖ್ಯೆ: 7

ಕುಂಭ: ಪತ್ರ ವ್ಯವಹಾರಗಳಿಂದ ಸಂಕಷ್ಟ. ಪ್ರಯಾಣದಲ್ಲಿ ತೊಂದರೆ. ಗಾಯಕರು, ವಾದಕರು ಮತ್ತು ನಟರಿಗೆ ಅವಮಾನ ಸಂಭವ. ಶುಭಸಂಖ್ಯೆ: 6

ಮೀನ: ವ್ಯವಹಾರದಲ್ಲಿ ಆರ್ಥಿಕವಾಗಿ ಹಿನ್ನಡೆಯಾಗುವುದು. ಅನಗತ್ಯ ಮಾತಿನಿಂದ ಸಮಸ್ಯೆ ಸಾಧ್ಯತೆ. ಸಣ್ಣ ವ್ಯವಹಾರಗಳಲ್ಲಿ ಹಿನ್ನಡೆ. ಶುಭಸಂಖ್ಯೆ: 7