ಜ್ಯೋತಿಷ್ಯ

ನಿತ್ಯಭವಿಷ್ಯ: ಈ ರಾಶಿಯವರಿಗಿಂದು ವಿದೇಶ ಪ್ರಯಾಣ ಮಾಡುವ ಸಾಧ್ಯತೆ

ಮೇಷ: ಆತ್ಮೀಯರ ಭೇಟಿ. ಚಂಚಲ ಮನಸ್ಸು. ದುಶ್ಚಟಗಳಿಂದ ಹಣ ನಷ್ಟ. ಶತ್ರು ಬಾಧೆ ಕಾಡೀತು. ದ್ರವ ರೂಪದ ವಸ್ತುಗಳಿಂದ ಲಾಭ. ಶುಭಸಂಖ್ಯೆ: 5

ವೃಷಭ: ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ವಿರೋಧಿಗಳಿಂದ ತೊಂದರೆಯಿದೆ. ಹೂವು, ಹಣ್ಣು ವ್ಯಾಪಾರಿಗಳಿಗೆ ಸಾಧಾರಣ. ಶುಭಸಂಖ್ಯೆ: 9

ಮಿಥುನ: ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಭಾಗಿ. ಆರೋಗ್ಯದಲ್ಲಿ ಏರುಪೇರು. ಅನಿರೀಕ್ಷಿತ ತಿರುವು. ಅಧಿಕ ತಿರುಗಾಟ ಆದೀತು. ಶುಭಸಂಖ್ಯೆ:2

ಕಟಕ: ವಿವಾದಗಳಲ್ಲಿ ಎಚ್ಚರ. ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು. ಬಂಧುಗಳ ಆಗಮನ. ಶ್ರಮಕ್ಕೆ ಸಾಧಾರಣ ಫಲ ಸಿಗುವುದು. ಶುಭಸಂಖ್ಯೆ:3

ಸಿಂಹ: ಗುರು ಹಿರಿಯರಲ್ಲಿ ಭಕ್ತಿ. ಕ್ರಯ ವಿಕ್ರಯಗಳಿಂದ ಲಾಭ ಬರಲಿದೆ. ಕುಟುಂಬ ಸೌಖ್ಯವಿದೆ. ವಿದೇಶ ಪ್ರಯಾಣ ಮಾಡುವ ಸಾಧ್ಯತೆ. ಶುಭಸಂಖ್ಯೆ:3

ಕನ್ಯಾ: ಕೈಗೊಂಡ ಕೆಲಸ ಕಾರ್ಯಗಳಲ್ಲಿ ವಿಳಂಬ. ಸಹೋದ್ಯೋಗಿಗಳಿಂದ ನಿಂದನೆ. ವೃಥಾ ತಿರುಗಾಟ. ಸ್ನೇಹಿತರು ನೆರವು ನೀಡುವರು. ಶುಭಸಂಖ್ಯೆ:9

ತುಲಾ: ಆಪ್ತರ ಹಿತನುಡಿ ಆಲಿಸಿ. ಸಹೋದರರಿಂದ ಬೆಂಬಲ. ಅಭಿವೃದ್ಧಿ ಕುಂಠಿತ. ವಿಪರೀತ ಖರ್ಚು. ಅತಿಯಾದ ಮುಂಗೋಪ ಬೇಡ. ಶುಭಸಂಖ್ಯೆ:3

ವೃಶ್ಚಿಕ: ಮನೆಯಲ್ಲಿ ಅಶಾಂತಿ. ನ್ಯಾಯಾಲಯದ ಕೆಲಸದಲ್ಲಿ ಅಪಜಯ. ವಿದ್ಯಾರ್ಥಿಗಳಿಗೆ ಹಿನ್ನಡೆ. ಉಪಕಾರ ಮಾಡುವಿರಿ. ಅತಿ ನಿದ್ರೆ. ಶುಭಸಂಖ್ಯೆ:2

ಧನಸ್ಸು: ವಿವಿಧ ಮೂಲಗಳಿಂದ ಲಾಭ. ಆರೋಗ್ಯದ ಕಾಳಜಿ ಅಗತ್ಯ. ಅಕಾಲ ಭೋಜನ. ಹೊಸ ಪಾಲುದಾರರನ್ನು ಪಡೆಯುವ ಸಮಯ. ಶುಭಸಂಖ್ಯೆ: 1

ಮಕರ: ಕಲಾವಿದರಿಗೆ ಕಾರ್ಯಕ್ಷೇತ್ರದಲ್ಲಿ ಒತ್ತಡ. ಕೆಲಸ ಬದಲಾಯಿಸುವ ಆಲೋಚನೆ. ಕೃಷಿಕರಿಗೆ ಅಲ್ಪ ಲಾಭ. ವಿವಾಹ ಯೋಗ. ಶುಭಸಂಖ್ಯೆ: 9

ಕುಂಭ: ಸ್ವಂತ ಪರಿಶ್ರಮದಿಂದ ಯಶಸ್ಸು. ವಿಶ್ರಾಂತಿ ಇಲ್ಲದ ಕೆಲಸಗಳು. ಸ್ತ್ರೀಯರಿಗೆ ಅನುಕೂಲ. ಭೂ ವ್ಯವಹಾರಗಳಿಂದ ತೊಂದರೆ. ಶುಭಸಂಖ್ಯೆ: 4

ಮೀನಾ: ಪ್ರತಿಭೆಗೆ ತಕ್ಕ ಪುರಸ್ಕಾರ ಸಿಗಲಿದೆ. ಅಧಿಕಾರಿಗಳಿಂದ ಕಿರಿಕಿರಿ. ದೈವಿಕ ಚಿಂತನೆ. ಶರೀರದಲ್ಲಿ ತಳಮಳ. ಪುಣ್ಯಕ್ಷೇತ್ರ ದರ್ಶನ. ಶುಭಸಂಖ್ಯೆ:5