ಮೇಷ: ಸ್ನೇಹಿತನಿಂದ ಸಕಾಲಕ್ಕೆ ಹಣಕಾಸಿನ ಸಹಾಯ ಸಿಗಲಿದೆ. ತಾಮ್ರದ ವ್ಯಾಪಾರಸ್ಥರಿಗೆ ಬೇಡಿಕೆ. ರೇಷ್ಮೆ ಬೆಳೆಗಾರರಿಗೆ ಲಾಭ. ಶುಭಸಂಖ್ಯೆ: 5
ವೃಷಭ: ಕೃಷಿಯ ಕಡೆ ಒಲವು. ವೈದ್ಯಕೀಯ ವೃತ್ತಿಯ ಮಹಿಳೆಯರಿಗೆ ಅವಕಾಶ. ಬ್ಯಾಂಕಿಂಗ್ ಸಂಸ್ಥೆಗಳ ಉದ್ಯೋಗಿಗಳಿಗೆ ಆದಾಯ. ಶುಭಸಂಖ್ಯೆ:9
ಮಿಥುನ: ರಿಯಲ್ ಎಸ್ಟೇಟ್ನಲ್ಲಿ ಶುಭ ಸಮಾಚಾರ ಬರಲಿದೆ. ವಾಹನ ಚಾಲಕರಿಗೆ ಲಾಭವಾಗುವುದು. ವಿವಾಹಕ್ಕೆ ಶುಭದಾಯಕ ದಿನ. ಶುಭಸಂಖ್ಯೆ:4
ಕಟಕ: ಸಮಾಜಸೇವೆಯಿಂದ ಜನಪ್ರಿಯತೆ. ಮಕ್ಕಳ ಆರೋಗ್ಯದ ಕುರಿತು ಎಚ್ಚರ ವಹಿಸಿ. ರಾಜಕೀಯದಲ್ಲಿ ಯಶಸ್ಸು ದೊರೆಯುವುದು. ಶುಭಸಂಖ್ಯೆ: 9
ಸಿಂಹ: ಚರ್ಮವ್ಯಾಧಿ ಬಾಧಿಸಬಹುದು. ಹಾಡುಗಾರರಿಗೆ ಉತ್ತಮ ಅವಕಾಶ ದೊರೆತು ಸಂತಸ. ರಾಜಕಾರಣಿಗಳಿಗೆ ಸುಸಮಯ. ಶುಭಸಂಖ್ಯೆ:3
ಕನ್ಯಾ: ಹೂವು ತರಕಾರಿ ವ್ಯಾಪಾರಿಗಳಿಗೆ ಉತ್ತಮ ಆದಾಯ ಬರುವುದು. ರೈತರ ಫಸಲಿಗೆ ಬೇಡಿಕೆ ಬರಲಿದೆ. ಆರ್ಥಿಕತೆಯಲ್ಲಿ ಚೇತರಿಕೆ. ಶುಭಸಂಖ್ಯೆ:7
ತುಲಾ: ಗೃಹ ಮಾರಾಟಗಾರರಿಗೆ ಆದಾಯ. ವಿದ್ಯುತ್ ಸ್ಥಾವರದ ಕಾರ್ವಿುಕರು ಎಚ್ಚರದಿಂದಿರಿ. ವಸ್ತು ಸಂಗ್ರಹದಲ್ಲಿ ಆಸಕ್ತಿ. ಆಭರಣ ಲಾಭ. ಶುಭಸಂಖ್ಯೆ: 5
ವೃಶ್ಚಿಕ: ಆರೋಗ್ಯದಲ್ಲಿ ಅಡಚಣೆ. ಜಾಹೀರಾತು ಸಂಸ್ಥೆಗಳ ಉದ್ಯೋಗಿಗಳಿಗೆ ಲಾಭ. ವಿದೇಶೀ ವಸ್ತು ಉತ್ಪಾದಕರಿಗೆ ಹೆಚ್ಚು ಬೇಡಿಕೆ. ಶುಭಸಂಖ್ಯೆ:9
ಧನಸ್ಸು: ಹೈನುಗಾರಿಕೆ ಹಾಗೂ ಕೃಷಿಯಲ್ಲಿ ಅಭಿವೃದ್ಧಿ ಆಗಲಿದೆ. ಮನರಂಜನಾ ಕ್ಷೇತ್ರದಲ್ಲಿ ಅವಕಾಶ ಲಭ್ಯ. ವಿದ್ಯಾರ್ಥಿಗಳಿಗೆ ಅನುಕೂಲ. ಶುಭಸಂಖ್ಯೆ: 7
ಮಕರ: ನಿವೇಶನ ಖರೀದಿಯಲ್ಲಿ ಮೋಸ. ಪಾಲುದಾರಿಕೆಯಲ್ಲಿ ಸಮಸ್ಯೆ. ಆರಕ್ಷಕರು ಎಚ್ಚರದಿಂದಿರಿ. ಸಣ್ಣ ಕೈಗಾರಿಕೆಗಳಿಗೆ ಸುಸಮಯ. ಶುಭಸಂಖ್ಯೆ:6
ಕುಂಭ: ಔಷಧಿ ಸಗಟು ವ್ಯಾಪಾರದಲ್ಲಿ ನಷ್ಟ. ವಿದ್ಯಾರ್ಜನೆಯಲ್ಲಿ ಆಸಕ್ತಿ. ಧಾರ್ವಿುಕ ಕ್ಷೇತ್ರಗಳ ಭೇಟಿ. ಸ್ವಯಂ ಉದ್ಯೋಗಸ್ಥರಿಗೆ ಶುಭ. ಶುಭಸಂಖ್ಯೆ: 2
ಮೀನಾ: ಕಟ್ಟಡಸಾಮಗ್ರಿ ವ್ಯಾಪಾರದಲ್ಲಿ ಲಾಭ. ನಿದ್ರಾಹೀನತೆ. ಕುಶಲಕರ್ವಿುಗಳಿಗೆ ಬೇಡಿಕೆ. ಉದ್ಯೋಗಸ್ಥ ಮಹಿಳೆಯರಿಗೆ ವರ್ಗಾವಣೆ. ಶುಭಸಂಖ್ಯೆ: 8