ಜ್ಯೋತಿಷ್ಯ

ಈ ರಾಶಿಯವರಿಗಿಂದು ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ಸಿಗಲಿದೆ: ನಿತ್ಯಭವಿಷ್ಯ

ಮೇಷ: ಅನಾರೋಗ್ಯ ಕಾಡಬಹುದು ಕಾಳಜಿ ವಹಿಸಿ. ಮಕ್ಕಳಿಂದ ತೊಂದರೆಯಾಗುವುದು. ಹಿರಿಯರ ಶಾಪಕ್ಕೆ ಗುರಿಯಾಗುವಿರಿ. ಶುಭಸಂಖ್ಯೆ: 5

ವೃಷಭ: ಋಣ ರೋಗ ಬಾಧೆಗಳಿಂದ ಮುಕ್ತಿ. ಕುಟುಂಬದಲ್ಲಿ ವಾಗ್ವಾದಗಳು. ಪಾಲುದಾರಿಕೆಯಲ್ಲಿ ಆರ್ಥಿಕ ಸಂಕಷ್ಟಗಳು ಎದುರಾದಾವು. ಶುಭಸಂಖ್ಯೆ: 9

ಮಿಥುನ: ನಾನಾ ಕಾರಣಗಳಿಂದ ಸಂಕಷ್ಟಕ್ಕೆ ಸಿಲುಕುವಿರಿ. ಶುಭ ಕಾರ್ಯ ಮುಂದೂಡಲ್ಪಡುವುದು. ಅನಾರೋಗ್ಯ ಸಮಸ್ಯೆ ಉಂಟಾದೀತು. ಶುಭಸಂಖ್ಯೆ: 2

ಕಟಕ: ಮಾನಸಿಕ ಕಿರಿಕಿರಿ ಮತ್ತು ತೊಂದರೆ. ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ಸಿಗಲಿದೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲ. ಶುಭಸಂಖ್ಯೆ: 7

ಸಿಂಹ: ಮಕ್ಕಳಿಂದ ಕಿರಿಕಿರಿ ಅನುಭವಿಸುವಿರಿ. ಅನಾರೋಗ್ಯ ನಿವಾರಣೆಗೆ ವೈದ್ಯರನ್ನು ಭೇಟಿ ಮಾಡಿ. ಕೆಲಸ ಕಾರ್ಯಗಳಲ್ಲಿ ವಿಘ್ನ. ಶುಭಸಂಖ್ಯೆ:9

ಕನ್ಯಾ: ಉದ್ಯೋಗ ಲಾಭವಿದೆ. ಸಾಲಗಾರರಿಂದ ಮುಕ್ತಿ. ಶತ್ರು ದಮನವಾಗುವುದು. ತಂತ್ರ ಬಾಧೆಗಳಿಗೆ ಗುರುಗಳಿಂದ ಮಾರ್ಗದರ್ಶನ. ಶುಭಸಂಖ್ಯೆ:4

ತುಲಾ: ಉದ್ಯೋಗದಲ್ಲಿ ಒತ್ತಡಗಳು ಹೆಚ್ಚುವವು. ಕಾಲು ನೋವು. ಮಂದತ್ವ. ಬುದ್ಧಿ ಚಾಂಚಲ್ಯ. ವೈರಾಗ್ಯದ ಭಾವ ಹೆಚ್ಚು ಕಾಡುವುದು. ಶುಭಸಂಖ್ಯೆ: 3

ವೃಶ್ಚಿಕ: ಆಕಸ್ಮಿಕ ಅವಘಡಗಳಿಂದ ಖರ್ಚು. ಸ್ಥಿರಾಸ್ತಿ, ಭೂಮಿ, ವಾಹನ ಖರೀದಿಯಲ್ಲಿ ಮೋಸ. ಕೆಲಸ ಕಾರ್ಯಗಳಲ್ಲಿ ಸೋಮಾರಿತನ. ಶುಭಸಂಖ್ಯೆ: 8

ಧನಸ್ಸು: ಕುಟುಂಬದಲ್ಲಿ ಕಿರಿಕಿರಿ ಮತ್ತು ಕಲಹ. ಪ್ರಯಾಣಕ್ಕೆ ಅಡೆತಡೆ ಉಂಟಾಗುವುದು. ಅವಮಾನಗಳಿಗೆ ಗುರಿಯಾಗುವ ಸಂದರ್ಭ. ಶುಭಸಂಖ್ಯೆ: 1

ಮಕರ: ವ್ಯವಹಾರ ಸ್ಥಳದಲ್ಲಿ ಕಿರಿಕಿರಿ ಅನುಭವಿಸುವಿರಿ. ಆರ್ಥಿಕ ಸಹಾಯ ಬರಲಿದೆ. ದಾಯಾದಿ ಕಲಹ, ಕೋರ್ಟ್ ಕೇಸುಗಳಲ್ಲಿ ಜಯ. ಶುಭಸಂಖ್ಯೆ:4

ಕುಂಭ: ಪಿತ್ರಾರ್ಜಿತ ಆಸ್ತಿಯಿಂದ ಲಾಭವಾಗುವುದು. ಉದ್ಯೋಗ ಬದಲಾವಣೆಗೆ ಅಡೆತಡೆ. ದಾಂಪತ್ಯದಲ್ಲಿ ವಿರಸ. ಸಮಾಧಾನಚಿತ್ತರಾಗಿರಿ.ಶುಭಸಂಖ್ಯೆ: 6

ಮೀನ: ಅನಿರೀಕ್ಷಿತ ಘಟನೆಗಳಿಂದ ಮಾನಸಿಕ ಕಿರಿಕಿರಿ. ವಾಹನಗಳಿಂದ, ಕಬ್ಬಿಣದ ವಸ್ತುಗಳಿಂದ ಪೆಟ್ಟು. ಕೆಲಸ ಕಾರ್ಯಗಳಲ್ಲಿ ಅಡೆತಡೆ. ಶುಭಸಂಖ್ಯೆ: 3