ಜ್ಯೋತಿಷ್ಯ

ನಿತ್ಯ ಭವಿಷ್ಯ: ಸೋಲಲು ಸಾಧ್ಯವೇ ಇಲ್ಲ ಎಂದು ಅತಿಯಾದ ನಂಬಿಕೆ ಈ ರಾಶಿಯವರಿಗೆ ಬೇಡ, ಮುನ್ನುಗ್ಗಿ.

malli

ಮೇಷ: ಆರೋಗ್ಯವೇ ಭಾಗ್ಯ ಎಂಬ ಮಾತನ್ನು ಮರೆಯದಿರಿ. ಅಪಾರವಾದ ಬಲವನ್ನು ಸಂಪಾದಿಸಿ. ಲಾಭವಿದೆ. ಶುಭಸಂಖ್ಯೆ: 4

ವೃಷಭ: ಬಹು ದೊಡ್ಡ ವ್ಯವಹಾರವನ್ನು ಕುದುರಿಸುವಲ್ಲಿ ತಾಳ್ಮೆ ಹಾಗೂ ಚಾತುರ್ಯ ಇರಲಿ. ಅತಿಯಾದ ಮಾತು ಬೇಡ. ಶುಭಸಂಖ್ಯೆ: 8

ಮಿಥುನ: ಹೊಸದೇ ಆದ ಜನರು ನಿಮಗೆ ಕೆಲವು ಹೊಸ ದಾರಿಗಳನ್ನು ತೋರಿಸಲು ಕಾಲ ಕೂಡಿ ಬಂದಿದೆ. ಬಳಸಿಕೊಳ್ಳಿ. ಶುಭಸಂಖ್ಯೆ: 7

ಕಟಕ: ತಾಯಿ ಚೌಡೇಶ್ವರಿದೇವಿಯನ್ನು ಭಕ್ತಿಭಾವಗಳಿಂದ ಸ್ತುತಿಸಿ. ಬಿಕ್ಕಟ್ಟುಗಳು ಶೀಘ್ರದಲ್ಲಿಯೇ ದೂರವಾಗಲಿವೆ. ಶುಭಸಂಖ್ಯೆ: 5

ಸಿಂಹ: ನಿಮ್ಮ ವಾಕ್ ಶಕ್ತಿಯ ಕುರಿತಾದ ಪ್ರಶಂಸೆ ಲಭ್ಯವಾಗಲಿದೆ. ನಿಮಗೆ ಇದು ಬಹಳ ಸಂತಸದ ದಿನವೂ ಆಗಲಿದೆ. ಶುಭಸಂಖ್ಯೆ: 3

ಕನ್ಯಾ: ವೈದ್ಯರ ಸಲಹೆಯ ಹೊರತಾಗಿ ನಿಮಗೆ ನೀವೇ ಚಿಕಿತ್ಸೆ ಮಾಡಿಕೊಳ್ಳಲು ಮುಂದಾಗದಿರಿ. ಅಪಾಯವಾದೀತು. ಶುಭಸಂಖ್ಯೆ: 9

ತುಲಾ: ಯಾವ ಕಾರಣಕ್ಕೂ ಜೂಜು, ಹಣ ಕಳೆಯುವ, ಸುಲಭವಾಗಿ ಧನಾಗಮನಕ್ಕಾಗಿಯೋ ಪ್ರಯತ್ನ ಮಾಡದಿರಿ. ಶುಭಸಂಖ್ಯೆ: 2

ವೃಶ್ಚಿಕ: ಸೋಲಲು ಸಾಧ್ಯವೇ ಇಲ್ಲ ಎಂದು ಅತಿಯಾದ ನಂಬಿಕೆ ಬೇಡ. ಮುನ್ನುಗ್ಗಿ. ಆದರೆ ಅವಸರ ಮಾಡದಿರಿ. ಶುಭಸಂಖ್ಯೆ: 5

ಧನಸ್ಸು: ಪರಶಿವನನ್ನು ಭಕ್ತಿಯಿಂದ ಆರಾಧನೆ ಮಾಡಿ ನಿಮ್ಮ ಸಂಕಲ್ಪವನ್ನು ಸಿದ್ಧಿಸಿಕೊಳ್ಳಿ. ಇದರಿಂದ ನಿರಾಳರಾಗಿರಿ. ಶುಭಸಂಖ್ಯೆ: 8

ಮಕರ: ಶಾಂತಿ, ಸಮಾಧಾನಗಳಿಂದ ನಿಮ್ಮ ನಿತ್ಯದ ಕೆಲಸಗಳನ್ನು ಶುರು ಮಾಡಿ. ಹೆಚ್ಚಿನದಾದ ಹರ್ಷ ಸಾಧ್ಯವಾಗಲಿದೆ. ಶುಭಸಂಖ್ಯೆ: 1

ಕುಂಭ: ಈ ಬದುಕು ಅಜ್ಞಾತವಾಸದ ಹಾಗಾಗಿದೆಯಲ್ಲ ಎಂಬ ನಿರಾಸೆಯಿಂದ ಹೊರಬರುವ ಅವಕಾಶಗಳು ಜಾಸ್ತಿ. ಶುಭಸಂಖ್ಯೆ: 4

ಮೀನ: ಗುರುಮುಖೇನ ದೊರೆಯುವ ಕೆಲವು ಸಲಹೆ ಸೂಚನೆಗಳಿಂದ ವಿಜಯದ ಮಾರ್ಗವು ಸುಗಮವಾಗಲಿದೆ. ಶುಭಸಂಖ್ಯೆ: 6