ಮೇಷ: ಕೆಲವೊಮ್ಮೆ ನಿಮ್ಮದೇ ತಪ್ಪಿಗೆ ಕ್ಷಮೆಯನ್ನು ಕೇಳಲಾರಿರಿ. ಅದು ಅಪಾರ್ಥಕ್ಕೆ ಕಾರಣ ಆಗುತ್ತದೆ. ಸೌಮ್ಯ ನಡೆ ಇರಲಿ. ಶುಭಸಂಖ್ಯೆ: 1
ವೃಷಭ: ರಾತ್ರಿ ಕಾಣಿಸಿದ ಕೆಟ್ಟ ಕನಸುಗಳಿಂದಾಗಿ ನಿಮ್ಮಲ್ಲಿ ಲವಲವಿಕೆಯೇ ಕಂಡುಬರುವುದಿಲ್ಲ. ಆದಷ್ಟು ತಾಳ್ಮೆ ಇರಲಿ. ಶುಭಸಂಖ್ಯೆ: 5
ಮಿಥುನ: ಕೋರ್ಟು ತೀರ್ಪು ನಿಮ್ಮ ಪರವಾಗಿಯೇ ಬರುವುದರಿಂದ ಮನಸ್ಸಿಗೆ ಸಂತಸ. ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ಶುಭಸಂಖ್ಯೆ: 9
ಕಟಕ: ಹೊಸ ಸ್ನೇಹಿತರ ಪರಿಚಯ ಉಂಟಾಗಲಿದೆ. ಅವರ ಜತೆಗಿನ ಮಾತುಕತೆ ಹೊಸದೇ ಆದ ಉದ್ಯಮಕ್ಕೆ ನಾಂದಿ ಹಾಡಲಿದೆ. ಶುಭಸಂಖ್ಯೆ: 2
ಸಿಂಹ: ಕಾರ್ಯ ಯಶಸ್ವಿಯಾಗಲು ಲೌಕಿಕ ಪ್ರಯತ್ನ ಮಾತ್ರ ಸಾಲದು. ದೈವದ ಆಶೀರ್ವಾದವೂ ಬೇಕು. ಶಿವಸ್ತುತಿ ಮಾಡಿ. ಶುಭಸಂಖ್ಯೆ: 8
ಕನ್ಯಾ: ಎಚ್ಚರ ವಹಿಸಿದರೂ ಕೆಲಸದಲ್ಲಿ ಕೆಲವು ತಪ್ಪುಗಳಾದಾವು. ಅದನ್ನು ನೇರವಾಗಿ ಒಪ್ಪಿದರೆ ಮೇಲಧಿಕಾರಿಗಳು ಮೆಚ್ಚುವರು. ಶುಭಸಂಖ್ಯೆ: 6
ತುಲಾ: ವೃತ್ತಿಗೆ ಸಂಬಂಧಪಟ್ಟಂತಹ ಕೆಲಸಗಳೆಲ್ಲ ಸರಾಗವಾಗಿ ನಡೆಯಲಿವೆ. ಗ್ರಹಗಳ ತೃಪ್ತಿಗೆ ನವಗ್ರಹ ಸ್ತೋತ್ರ ಪಠಿಸಿ. ಶುಭಸಂಖ್ಯೆ: 3
ವೃಶ್ಚಿಕ: ಬಯಸಿದ ಕಾರ್ಯ ಈಡೇರಲು ಹೆಚ್ಚು ಶ್ರಮಿಸುತ್ತಿದ್ದೀರಿ. ವಿಷ್ಣು ಸಹಸ್ರನಾಮ ಓದಿ. ಇದರಿಂದ ಒಳಿತಾಗಲಿದೆ. ಶುಭಸಂಖ್ಯೆ: 7
ಧನಸ್ಸು: ಉದ್ಯೋಗಕ್ಷೇತ್ರದಲ್ಲಿ ಸ್ವಲ್ಪ ಕಿರಿಕಿರಿಯಾಗುವ ಸಂಭವ ಇದೆ. ಸಣ್ಣಪುಟ್ಟ ವಿಷಯಗಳಿಗೂ ಸಿಟ್ಟಾಗಿ ಕೂಗಾಡುವಿರಿ. ಶುಭಸಂಖ್ಯೆ: 4
ಮಕರ: ನೀವು ಎಷ್ಟೇ ಪ್ರಯತ್ನಿಸಿದರೂ ಯಶಸ್ಸು ಮರೀಚಿಕೆಯೇ ಆಗುತ್ತಿದೆ. ಆದಿತ್ಯಹೃದಯ ಸ್ತೋತ್ರದ ಪಠಣ ಮಾಡಿ. ಶುಭಸಂಖ್ಯೆ: 1
ಕುಂಭ: ತಟಸ್ಥಗೊಂಡಿದ್ದ ಕಾರ್ಯಗಳಿಗೆ ಚಾಲನೆ ಸಿಗಲಿದೆ. ಬೆಳ್ಳಗಿರುವುದೆಲ್ಲ ಹಾಲು ಎಂದು ನಂಬಿ ಮೋಸ ಹೋಗದಿರಿ. ಶುಭಸಂಖ್ಯೆ: 5
ಮೀನ: ಬೆಲೆಬಾಳುವ ವಸ್ತು, ಒಡವೆಗಳ ಬಗ್ಗೆ ಎಚ್ಚರವಿರಲಿ. ಮರೆವಿನ ಕಾರಣಕ್ಕೆ ಅವುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಶುಭಸಂಖ್ಯೆ: 9