ಮೇಷ: ಹುಟ್ಟುಗುಣ ಸುಟ್ಟರೂ ಹೋಗದು ಎಂಬ ಮಾತಿದೆ. ಆದರೆ ಬದಲಾವಣೆಗೆ ದಾರಿ ಮಾಡಿಕೊಂಡರೆ ಕ್ಷೇಮ. ಶುಭಸಂಖ್ಯೆ: 4
ವೃಸಭ: ಅನಿರೀಕ್ಷಿತ ಧನಲಾಭವಾಗುವ ಸಾಧ್ಯತೆಯಿದೆ. ಶ್ರೀ ಲಲಿತಾದೇವಿ ಅಷ್ಟೋತ್ತರ ಶತನಾಮ ಪಠಣ ಮಾಡುವುದು ಉತ್ತಮ. ಶುಭಸಂಖ್ಯೆ: 7
ಮಿಥುನ: ಕಚೇರಿಯಲ್ಲಿ ಮೇಲಧಿಕಾರಿಗಳು ನಿಮಗೆ ಅನವಶ್ಯಕವಾದ ಕಿರಿಕಿರಿ ನೀಡಿದರೂ ದಿನದ ಕೊನೆಗೆ ಮೆಚ್ಚುಗೆ ಗಳಿಸುವಿರಿ. ಶುಭಸಂಖ್ಯೆ: 1
ಕಟಕ: ಸುಬ್ರಹ್ಮಣ್ಯನನ್ನು ಶ್ರದ್ಧೆಯಿಂದ ಆರಾಧಿಸಿ. ಆರೋಗ್ಯದ ವಿಚಾರದಲ್ಲಿ ಬೇಗನೆ ಚೇತರಿಕೆಯನ್ನು ಕಾಣಲಿದ್ದೀರಿ. ಶುಭಸಂಖ್ಯೆ: 3
ಸಿಂಹ: ಆಫೀಸಿನಲ್ಲಿ ಸಹೋದ್ಯೋಗಿಗಳ ಕಾಟ ಹೆಚ್ಚಾಗಬಹುದು. ರೇಗದೆಯೇ ನಗುನಗುತ್ತಲೇ ಅವರನ್ನು ನಿರ್ಲಕ್ಷಿಸಿಬಿಡಿ. ಶುಭಸಂಖ್ಯೆ: 5
ಕನ್ಯಾ: ಸಿಹಿ-ಕಹಿ ಎರಡೂ ಬಗೆಯ ಸಮಾಚಾರಗಳೂ ಲಭ್ಯವಾಗಲಿವೆ. ನಿರಾಶೆ ಹೊಂದಬೇಡಿ. ಮುಂದೆ ಶುಭವಾಗಲಿದೆ. ಶುಭಸಂಖ್ಯೆ: 9
ತುಲಾ: ಹೊಸ ಮನೆಯನ್ನು ನಿರ್ವಿುಸುವ ವಿಚಾರದಲ್ಲಿ ಬಹಳ ಪ್ರಮುಖವಾದ ಬೆಳವಣಿಗೆಯೊಂದು ಶೀಘ್ರದಲ್ಲೇ ಸಂಭವಿಸಲಿದೆ. ಶುಭಸಂಖ್ಯೆ: 2
ವೃಶ್ಚಿಕ: ಅಕ್ಕಪಕ್ಕದವರ ಜತೆಗೆ ಮಾತುಕತೆ ಇದ್ದೇ ಇರಲಿ. ಆದರೆ ಯಾರನ್ನೂ ಸಂಪೂರ್ಣವಾಗಿ ನಂಬಿ ಮೂರ್ಖರಾಗದಿರಿ. ಶುಭಸಂಖ್ಯೆ: 6
ಧನಸ್ಸು: ಪ್ರಾಣಿಗಳನ್ನು ಸಾಕುವವರು, ರೈತವರ್ಗದವರು ಹೆಚ್ಚಿನದಾದ ಲಾಭವನ್ನು ಕಾಣುವಂತಹ ಉತ್ತಮ ಯೋಗಬಲವಿದೆ. ಶುಭಸಂಖ್ಯೆ: 8
ಮಕರ: ಆರ್ಥಿಕ ವಿಷಯಕ್ಕೆ ಸಂಬಂಧಪಟ್ಟಂತೆ ಎಚ್ಚರ ಅಗತ್ಯವಿದೆ. ಹಣವೇ ಮಾಯ ಆಗಬಹುದು. ಜಾಗ್ರತೆ ಇರಲಿ. ಶುಭಸಂಖ್ಯೆ: 4
ಕುಂಭ: ಮುಂದೆ ಕೈಗೊಳ್ಳಲಿರುವ ಕಾರ್ಯಯೋಜನೆಗಳ ಬಗೆಗೆ ಪ್ರಾರಂಭಿಕವಾದ ಮಾತುಕತೆಗಳಿಗೆ ಪ್ರೇರಣೆ ದೊರೆಯಲಿದೆ. ಶುಭಸಂಖ್ಯೆ: 7
ಮೀನ: ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಸಂಭವಿಸಬಹುದು. ಪುನಃ ಹೀಗಾದಂತೆ ಎಚ್ಚರ ವಹಿಸಿ ಮುನ್ನಡೆಯರಿ. ಶುಭಸಂಖ್ಯೆ: 1