ಮೇಷ: ಬೌದ್ಧಿಕ ಶಕ್ತಿಯಿಂದಾಗಿ ಗೌರವ, ಪ್ರಶಂಸೆ ಲಭ್ಯ. ಇದರಿಂದ ಇನ್ನಷ್ಟು ಸಾಮಾಜಿಕ ಕಾರ್ಯ ಕೈಗೊಳ್ಳಲು ಬಯಸುವಿರಿ. ಶುಭಸಂಖ್ಯೆ: 2
ವೃಷಭ: ಸ್ವಂತ ಮಕ್ಕಳನ್ನೂ ಮಿತ್ರರಂತೆ ಕಾಣಬೇಕು. ಅವರ ತಪ್ಪನ್ನು ಕ್ಷಮಿಸಿದರೆ ನಂಟು ವೃದ್ಧಿ ಹೊಂದಲಿದೆ. ಶುಭಸಂಖ್ಯೆ: 9
ಮಿಥುನ: ವಾಹನ ಚಾಲನೆಯಲ್ಲಿ ಚಲಾಯಿಸುವಾಗ ಎಚ್ಚರ. ಅನಗತ್ಯ ಒತ್ತಡದಿಂದ ದೂರವಿದ್ದರೆ ಮನಸ್ಸಿಗೆ ನೆಮ್ಮದಿಯಿದೆ. ಶುಭಸಂಖ್ಯೆ: 6
ಕಟಕ: ವಿವಿಧ ಕಡೆಗಳಿಂದ ಹಣ ಸಿಕ್ಕಿ ಇಚ್ಛೆ ಪೂರ್ತಿಯಾಗಲಿದೆ. ಆಲಸ್ಯ ಪ್ರವೃತ್ತಿಯಿಂದ ಕೆಲಸ ಅರ್ಧಕ್ಕೆ ನಿಲ್ಲಬಹುದು. ಶುಭಸಂಖ್ಯೆ: 4
ಸಿಂಹ: ಮಕ್ಕಳ ಸಮಸ್ಯೆ ನಿಮ್ಮನ್ನು ಕಂಗೆಡಿಸುತ್ತದೆ. ಲಕ್ಷ್ಮೀನರಸಿಂಹನನ್ನು ಸ್ತುತಿಸಿ. ನಿಮ್ಮ ಕಷ್ಟಗಳು ದೂರವಾಗಲಿವೆ. ಶುಭಸಂಖ್ಯೆ: 5
ಕನ್ಯಾ: ಅವಕಾಶವಾದಿಗಳು ಸುತ್ತಿಕೊಳ್ಳಬಹುದು. ವ್ಯಾವಹಾರಿಕ ಜಾಣ್ಮೆ ತೋರಿಸದಿದ್ದರೆ ದೊಡ್ಡ ಹಾನಿಯಾದೀತು. ಶುಭಸಂಖ್ಯೆ: 1
ತುಲಾ: ನಿಮ್ಮ ಮನೆ ಮತ್ತು ಮನಸ್ಸುಗಳ ಸ್ವಚ್ಛತೆಗೆ ಬಿಡುವಿನ ಸಮಯವನ್ನು ಮೀಸಲಾಗಿಡಿ. ಅದರಿಂದ ಒಳಿತಾಗಲಿದೆ. ಶುಭಸಂಖ್ಯೆ: 8
ವೃಶ್ಚಿಕ: ವೃಥಾ ಅಭದ್ರತೆ ಬೇಡ. ದುರ್ಗಾದೇವಿಯನ್ನು ಪ್ರಾರ್ಥಿಸಿ. ಅಗತ್ಯಕ್ಕೆ ತಕ್ಕಷ್ಟು ಮಾತ್ರ ಹಣವನ್ನು ವಿನಿಯೋಗಿಸಿ. ಶುಭಸಂಖ್ಯೆ: 3
ಧನಸ್ಸು: ವಿವಾಹಾಪೇಕ್ಷೆಗಳಿಗೆ ಸ್ವಲ್ಪ ನಿರಾಶೆ ಕಾಡಲಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತೆ ಆಗಬಹುದು. ಶುಭಸಂಖ್ಯೆ: 9
ಮಕರ: ಎಲ್ಲರ ಮನೆ ದೋಸೆಯೂ ತೂತಾದರೆ ನಿಮ್ಮ ಮನೆ ಕಾವಲಿಯೇ ತೂತಾಗಿದೆ. ಹೀಗಾಗಿ ಅನ್ಯರ ಟೀಕೆ ಬೇಡ. ಶುಭಸಂಖ್ಯೆ: 7
ಕುಂಭ: ಬೆಳ್ಳಗಿರುವುದೆಲ್ಲ ಹಾಲಲ್ಲ ಎಂದು ಅರಿಯಿರಿ. ಗುರು ಹಿರಿಯರ ಮಾರ್ಗದರ್ಶನದ ಪ್ರಕಾರವೇ ಮುನ್ನಡೆಯಿರಿ. ಶುಭಸಂಖ್ಯೆ: 2
ಮೀನ: ಸಂಭ್ರಮದ ಕಾರ್ಯದಲ್ಲಿ ಪಾಲ್ಗೊಳ್ಳುವಿರಿ. ಸಹಪಾಠಿಗಳ ಭೇಟಿ ಸಂತಸವನ್ನು ತರಲಿದೆ. ಆರ್ಥಿಕ ಪರಿಸ್ಥಿತಿ ಉತ್ತಮ. ಶುಭಸಂಖ್ಯೆ: 6